ನಟಿ 'ಪ್ರಿಯಾಂಕ ಚೋಪ್ರಾ ಗರ್ಭಿಣಿ' ನಾ...? : ಪಿಗ್ಗಿ ತಾಯಿ ಸ್ಪಷ್ಟನೆ..?!!!

20 Feb 2019 3:56 PM | Entertainment
331 Report

ಇತ್ತೀಚೆಗೆ ನಟಿ ಪ್ರಿಯಾಂಕ ಚೋಪ್ರಾಗೆ ಸಂಬಂಧಿಸಿದ  ಪರ್ಸನಲ್ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪಿಗ್ಗಿ ಅಭಿಮಾನಿಗಳು ಅದನ್ನು ಶೇರ್ ಮಾಡುವುದರ ಮೂಲಕ ಕ್ಲಾರಿಫಿಕೇಶನ್ ಕೊಡುತ್ತಿದ್ದಾರೆ. ಅಂದಹಾಗೇ ಸದಾ ಸುದ್ದಿಯಲ್ಲಿರುವ ಪಿಗ್ಗಿ ಅಲಿಯಾಸ್ ಪ್ರಿಯಾಂಕ ಚೋಪ್ರಾ ಗರ್ಭಿಣಿ ಅಂತೆ…?!!!  ಎಂಬ ಸುದ್ದಿ ಬಿ ಟೌನ್ ನಷ್ಟೇ ಅಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಯ್ತು. ಅಂದಹಾಗೇ ಕಳೆದ ಎರಡು ತಿಂಗಳ ಹಿಂದಷ್ಟೇ ಮದುವೆಯಾದ ಪಿಗ್ಗಿ ಅದಾಗಲೇ ಈಗ ಗರ್ಭಿಣಿನಾ ಈ ಸುದ್ದಿ ಕೇಳಿ ಬಾಯಿ ಬಿಟ್ಟವರಿಗೆ ಖುದ್ದು ಪ್ರಿಯಾಂಕ ತಾಯಿ ಉತ್ತರ ನೀಡಿದ್ದಾರೆ.

ಅಂದಹಾಗೇ ಈ ವಿಚಾರ ಈ ಪರಿ ಹರಡಲು ಆ ಫೋಟೋವೊಂದು ಕಾರಣವಾಯ್ತು. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೇ ಪಿಗ್ಗಿ ಗೆ ಕಮೆಂಟ್’ಗಳು  ಬರತೊಡಗಿವೆ.ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಫೋಟೋ ಶೂಟ್‍ಗೆ ಪೋಸ್ ಕೊಟ್ಟು ಕೊಟ್ಟು ಪ್ರಿಯಾಂಕಾ ಚೋಪ್ರಾ ಸುಸ್ತಾಗಿದ್ದರು. ಈ ವೇಳೆ ಹೊಟ್ಟೆ ಉಬ್ಬಿದ್ದಂತೆ ನಿಂತಿದ್ದು, ಆಗ ಪ್ರಿಯಾಂಕಾ ಅವರ ಫೋಟೋ ಕ್ಲಿಕ್ ಆಗಿದೆ. ಈ ಫೋಟೋ ನೋಡಿದ್ರೆ ಪಿಗ್ಗಿ ಗರ್ಭಿಣಿಯಂತೆ ಕಾಣುತ್ತಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಪಿಗ್ಗಿ ಕನ್ಸೀವ್ ಅಂತಾ ಕಮೆಂಟ್ ಮಾಡತೊಗಿದ್ದಾರೆ.

ಇದೀಗ ಅದು ವೈರಲ್ ಆಗುತ್ತಿದ್ದಂತೇ ಪಿಗ್ಗಿ ತಾಯಿ ಸ್ಪಷ್ಟನೆ ನೀಡಿದ್ದಾರೆ. ತನ್ನ ಫೋಟೋದ ಬಗ್ಗೆ ಸೆಟ್ ನಲ್ಲಿ ಮಾತನಾಡುವುದನ್ನು ಕೇಳಿ ಸ್ವತಃ ಪ್ರಿಯಾಂಕ ಅವರೇ ನಕ್ಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.ಅಂದಹಾಗೇ ಪಿಗ್ಗಿ  ತಾಯಿಯೇ ಈ ಸುದ್ದಿ ಕೇಳಿ ಅಚ್ಚರಿಯಾಗೋದ್ರಂತೆ. ನನ್ನ ಮಗಳಿಗೆ ಕರೆ ಮಾಡಿ ಕ್ಲಾರಿಫಿಕೇಷನ್ ತೆಗೆದುಕೊಂಡೆ. ಆಕೆ ಸುಸ್ತಾದ ಸಮಯದಲ್ಲಿ ಆಕೆಯ ಫೋಟೋ ಕ್ಲಿಕ್ ಆಗಿದೆ. ಆ ಫೋಟೋ ನೋಡಿ ಪ್ರಗ್ನೆಂಟ್ ಅನ್ಕೊಂಡಿದ್ದಾರೆ. ಸದ್ಯ ಪಿಗ್ಗಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯಕ್ಕಂತೂ ಮಗು ಬೇಡ  ಎಂದು ದಂಪತಿ ನಿರ್ಧರಿಸಿಕೊಂಡಿದ್ದಾರೆ ಎಂದರು.

Edited By

Kavya shree

Reported By

Kavya shree

Comments