ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ವಿಷ್ಣುದಾದನ ಆಪ್ತ ನಟ..?!!!

20 Feb 2019 2:40 PM | Entertainment
360 Report

ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಆತ್ಮೀಯರಾಗಿದ್ದ ನಟ ನಟರಾಜ್ ಈಗ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಅಂದಹಾಗೇ ನಟ ನಟರಾಜ್ ಹೆಸರು ಕೇಳಿದ್ರೆ ನಿಮಗೆ ಗುರುತು ಹಿಡಿಯುವುದು ಕಷ್ಟ, ಆದರೆ ನಟರಾಜ್ ಅವರ ಭಾವಚಿತ್ರ ನೋಡಿದ್ರೆ ಖಂಡಿತಾ ಐಡೆಂಟಿಫೈ ಮಾಡ್ತೀರಾ. ಸದ್ಯ ವಿಷ್ಣುವರ್ಧನ್ ಜೊತೆ ಅನೇಕ ಸಿನಿಮಾಗಳಲ್ಲಿ ಖಳ ನಟನಾಗಿ ಅಭಿನಯಿಸಿದ್ದಾರೆ.

ಕನ್ನಡದಲ್ಲೇ ಸುಮಾರು 80 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸ್ಟಾರ್ ನಟ ಸದ್ಯ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಐದು ತಿಂಗಳ ಹಿಂದೆ ನಟ ನಟರಾಜ್ ಗೆ ಸ್ಟ್ರೋಕ್ ಆಗಿ ಹಾಸಿಗೆ ಹಿಡಿದಿದ್ದರು. ಅಂದಹಾಗೇ ನಟ ನಟರಾಜ್ ಕಲಾವಿದನಾಗುವ ಮೊದಲು ವಿಷ್ಣು ವರ್ಧನ್ ಅವರ ದೊಡ್ಡ ಅಭಿಮಾನಿ. ಸಾಹಸಸಿಂಹನ ಸಿನಿಮಾ ನೋಡಿ ತಾನು ಕಲಾವಿದನಾಗಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಅದರಂತೇ ನಟನಾಗಿ ಹೆಸರು ಕೂಡ ಮಾಡಿದ್ದರು. ಇದೀಗ ಆಸ್ಪತ್ರೆಯಲ್ಲಿ ನೋವು ಅನುಭವಿಸುತ್ತಿದ್ದಾರೆ.ಸಿಕ್ಕಾಪಟ್ಟೆ ಸಾಲದ  ಜೊತೆಗೆ ಮಗಳ ಓದಿನ ಖರ್ಚು ಕೂಡ ಇವರ ಹೆಗಲ ಮೇಲೆಯೇ ಬಿದ್ದಿದೆ. ಅದರಲ್ಲೂ ಚಿಕಿತ್ಸೆ ಖರ್ಚು ಕೂಡ ನಿಭಾಯಿಸಲು ಆಗುತ್ತಿಲ್ಲ. ಮನೆ ಸಂಸಾರ ನೀಗಿಸಲು ನಟರಾಜ್ ಪರದಾಡುವಂತಹ ಸ್ಥಿತಿ ಬಂದಿದೆ. ಏಕದಂತ ಮತ್ತು ಸಂತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲಾವಿದರ ಸಂಘದಿಂದ ಸಹಾಯಕ್ಕಾಗಿ ಕಾದು ಕುಳಿತಿರುವ ನಟರಾಜ್ ಪರಿಸ್ಥಿತಿ ಕಂಡು ಅನೇಕರು ಮರಗಿದ್ದಾರೆ.

Edited By

Kavya shree

Reported By

Kavya shree

Comments