ಮುಂಬೈ ನಂಟಿನ ಸಿಕ್ರೇಟ್ ರಿವೀಲ್ ಮಾಡಿದ ‘ಕೆಂಡಸಂಪಿಗೆ’ ನಾಯಕಿ..!!

20 Feb 2019 2:35 PM | Entertainment
1275 Report

ಸ್ಯಾಂಡಲ್ ವುಡ್ ನಲ್ಲಿ ನಟ ನಟಿಯರು ನೆಲೆಕಂಡುಕೊಳ್ಳುವುದು ಕಷ್ಟದ ವಿಷಯವೇ ಸರಿ… ಕೆಲವರನ್ನು ಬಣ್ಣದಲೋಕ ಕೈ ಹಿಡಿದರೆ ಮತ್ತೆ ಕೆಲವರನ್ನು ಕೈ ಬಿಡುತ್ತದೆ.. ಸ್ಯಾಂಡಲ್ವುಡ್ ಅಷ್ಟೆ ಅಲ್ಲದೆ ಬೇರೆ ಭಾಷೆಗಳಲ್ಲಿ ನಟಿಸಬೇಕು ಎಂದರೆ ಹರಸಾಹಸನೇ ಪಡಬೇಕಾಗುತ್ತದೆ… ಅಂತಹ ನಾಯಕಿಯರಲ್ಲಿ ಮಾನ್ವಿತಾ ಹರೀಶ್ ಕೂಡ ಒಬ್ಬರು..ಮಾನ್ವಿತಾ ಹರೀಶ್ ಅವರು ಮರಾಠಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಇದೀಗ ಮಾನ್ವಿತಾರವರ ಮುಂಬೈ ನಂಟಿನ ರಹಸ್ಯ ಈಗ ಬಯಲಾಗಿದೆ. ಅವರೀಗ ಮರಾಠಿ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದಾರೆ.

ಮರಾಠಿ ಜತೆಗೆ ಕನ್ನಡದಲ್ಲೂ ನಿರ್ಮಾಣವಾಗುತ್ತಿರುವ 'ರಾಜಸ್ಥಾನ್ ಡೈರೀಸ್' ಚಿತ್ರದಲ್ಲಿ ಟಗರು ಪುಟ್ಟಿ ಮಾನ್ವಿತಾ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಇಡೀ ಚಿತ್ರೀಕರಣ ರಾಜಸ್ಥಾನದ ಜೈಪುರ್, ಜೋಧಪುರ್ ಹಾಗೂ ಜೈಸಲ್ಮೇರ್ ಸುತ್ತಮುತ್ತ ನಡೆಯಲಿದೆ. 'ಇದು ಮುಂಬೈ ಮೂಲದ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಸಿನಿಮಾ. ಆದರೂ, ಅದಕ್ಕೆ ಕನ್ನಡದ ನಂಟು ಹೆಚ್ಚಾಗಿಯೇ ಇದೆ... ಯಾಕಂದ್ರೆ, ಈ ಸಿನಿಮಾದ ನಿರ್ದೇಶಕರು ಮೂಲತಃ ಕನ್ನಡದವರು. ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ.

ಮರಾಠಿ ಜತೆಗೆ ಕನ್ನಡದಲ್ಲೂ ತಾವೊಂದು ಸಿನಿಮಾ ಮಾಡ್ಬೇಕು ಅಂದಾಗ ನಾನೇ ಅವರಿಗೆ ಇಷ್ಟವಾಗಿದ್ದನ್ನು ಅವರು ನಮ್ಮ ಮುಖಾಮುಖಿ ಭೇಟಿಯ ಸಂದರ್ಭದಲ್ಲಿ ಹೇಳಿಕೊಂಡರು.ಒಮ್ಮೆ ಫೋನ್ ಮಾಡಿ ಸಿನಿಮಾದ ಆಫರ್ ಹೇಳಿದರು. ಮುಂಬೈಗೆ ಹೋಗಿ ಕತೆ ಕೇಳಿದೆ. ಇಂಟರೆಸ್ಟಿಂಗ್ ಆಗಿತ್ತು. ಹಾಗೆಯೇ ಪ್ರೊಡಕ್ಷನ್ ಹೌಸ್ ಬಗ್ಗೆಯೂ ಹೇಳಿದರು. ಒಳ್ಳೆಯ ಸಂಸ್ಥೆಗಳು ಎಂದೆನಿಸಿತು. ಹಾಗಾಗಿ ಅಭಿನಯಿಸಲು ಒಪ್ಪಿಕೊಂಡೆ' ಎನ್ನುತ್ತಾರೆ ಟಗರು ಪುಟ್ಟಿ. ಚಿತ್ರದಲ್ಲಿ ಮಾನ್ವಿತಾ ಜತೆಗೆ ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ ನವ ಪ್ರತಿಭೆ ಸುಮುಖ್. ಸುಮುಖ್ ಕೂಡ ಕನ್ನಡದವರೇ.ಒಟ್ಟಾರೆ ಸ್ಯಾಂಡಲ್ ವುಡ್ ನ ನಟಿ ಪರಭಾಷೆಯಲ್ಲಿ ಮಿಂಚುತ್ತಿರುವುದೇ ಖುಷಿಯ ವಿಚಾರ..

 

                 

Edited By

Manjula M

Reported By

Manjula M

Comments

Cancel
Done