ಸರಿಗಮಪ ಹನುಮಂತಪ್ಪನಿಗೆ ಸಿಕ್ತು ಹಂಸಲೇಖಾ ಮಡದಿಯಿಂದ ಭರ್ಜರಿ ಉಡುಗೊರೆ..?!

20 Feb 2019 12:59 PM | Entertainment
510 Report

ಸರಿಗಮಪ ಶೊ ಬಗ್ಗೆ ಈಗಾಗಲೇ ಕೆಲ ಅಭಿಮಾನಿಗಳು ಅಸಮಧಾನಗೊಂಡಿದ್ದಾರೆ. ರಿಯಾಲಿಟಿ ಶೋ ಗಳ ಹಣೆ ಬರಹವಿಷ್ಟೇ ಎಂದು ಮೂಗು ಮುರಿದಿದ್ದಾರೆ. ಅದರ ಮಧ್ಯೆ ಶೋ ಸ್ಪರ್ಧಿಯಾಗಿರುವ ಹನುಮಂತಪ್ಪ  ಅವರು ಫೈನಲ್ ಗೆ ಸೆಲೆಕ್ಟ್ ಆಗಿದ್ದಾರೆ. ಜಡ್ಜಸ್  ಫೈನಲ್ ಲಿಸ್ಟ್  ಅನೌನ್ಸ್ ಮಾಡಿದಾಗ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಆದರೆ ಸ್ಪರ್ಧಿ ಹನುಮಂತಪ್ಪ ಕರ್ನಾಟಕದ ಮನೆ ಮನೆ ಮಾತಾಗಿದ್ದಾರೆ.ಫೈನಲ್ ಗೆ ಸೆಲೆಕ್ಟ್ ಆದ ಕುರಿಗಾಹಿ ಹನುಮಂತಪ್ಪನಿಗೆ ಶೋ ತೀರ್ಪುಗಾರರಾದ ಹಂಸಲೇಖಾ ಅವರ ಮಡದಿ ಲತಾ ಹಂಸಲೇಖಾ'ರಿಂದ ಒಂದು ಅದ್ಭುತವಾದ ಉಡುಗೊರೆಯೊಂದು ಸಿಕ್ಕಿದೆ.

ಹನುಮಂತಪ್ಪನ ಹಾಡಿಗೆ ಕರ್ನಾಟಕದ ಜನ ಫಿದಾ ಆಗಿದ್ದಾರೆ. ಈ ಮಧ್ಯೆ ಸೆಮಿ ಪೈನಲ್’ನಲ್ಲಿ ಹನುಮಂತಪ್ಪ  ಅವರು ಬೇಡುವೆನು ವರವನ್ನು ಕೊಡುವೆನು ಹಾಡನ್ನು ಹಾಡುವುದರ ಮೂಲಕ ಫೈನಲ್ ಗೆ ಪ್ಲಾಟಿನಂ ಟಿಕೆಟ್ ಪಡೆದುಕೊಂಡಿದ್ದರು. ತಮ್ಮ ಗಾಯನ ಪ್ರತಿಭೆ ಮೂಲಕ  ಖ್ಯಾತ ಸಿಂಗರ್ಸ್ ಮನ ಗೆದ್ದ ಹನುಮಂತಪ್ಪ , ಹಂಸಲೇಖಾ ಅವರಿಗೂ ಫೇವರೀಟ್ ಅಂತೆ. ಬಡತನದಲ್ಲಿ ಹುಟ್ಟಿ ಸಂಗೀತ ಗಂಧ ಗಾಳಿ ಇಲ್ಲದೇ ಈ ಮಟ್ಟಿಗೆ ಜನ ಗುರುತಿಸುವಂತೇ ಮಾಡಿದ್ದು ಅವನ ಶ್ರಮ ಎಂದು ಲತಾ ಹಂಸಲೇಖಾ ಅವರು ಹಾಡಿ ಕೊಂಡಿದ್ದಾರೆ.

ಹನುಮಂತ ಅವರಿಗೆ ನಾದಬ್ರಹ್ಮ ಹಂಸಲೇಖ ಅವರ ಪತ್ನಿ ಲತಾ ಅವರ ಕಡೆಯಿಂದ ಉಡುಗೊರೆಯಾಗಿ ಹಾರ್ಮೋನಿಯಂ ಸಿಕ್ಕಿದೆ. ಕಳೆದ ವಾರದ ಸಂಚಿಕೆಗೆ ಬಂದಿದ್ದ ಲತಾ ಹಂಸಲೇಖ ಅವರು ತಮ್ಮ ಕೈಯಾರೇ ಹನುಮಂತ ಅವರಿಗೆ ಹಾರ್ಮೋನಿಯಂ ನೀಡಿ ಶುಭಾಶಯ ತಿಳಿಸಿದ್ದರು. ಕಳೆದ 14 ರ ಸೀಸನ್ ನಲ್ಲಿ ಕಿರಿಯ ಸ್ಪರ್ಧಿಯಾಗಿದ್ದ ನೇಹಾ ಗೂ ಚಿನ್ನದ ಉಂಗುರ  ವನ್ನು ಉಡುಗೊರೆಯಾಗಿನೀಡಿದ್ದರು. ಅಂದಹಾಗೇ ಇದೇ ಹನುಮಂತಪ್ಪನಿಗೆ   ಗಾಯಕ ವಿಜಯ್ ಪ್ರಕಾಶ್ ಇಯರ್ ಫೋನ್ ನೀಡುವುದರ ಮೂಲಕ ಅವರ ಮನಸ್ಸಲ್ಲಿ ಹಾಡುವ ಭರವಸೆಯನ್ನು ಹೆಚ್ಚಿಸಿದ್ರು. ಒಟ್ಟಾರೆ ಹನುಮಂತ ಒಟ್ಟು ಆರು ಜನ ಸ್ಪರ್ಧಿಗಳು ಫೈನಲ್ ಹಂತ ತಲುಪಿದ್ದಾರೆ.

Edited By

Kavya shree

Reported By

Kavya shree

Comments