ಸ್ಯಾಂಡಲ್ವುಡ್’ನ ‘ಸಾಹಸಸಿಂಹ’ನ  ಬಗ್ಗೆ ಡಿ ಬಾಸ್ ಏನ್ ಹೇಳುದ್ರು ಗೊತ್ತಾ..?

20 Feb 2019 12:52 PM | Entertainment
248 Report

ಸ್ಯಾಂಡಲ್ವುಡ್ ನ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಮಾರ್ಚ್ 1 ರಂದು ದೇಶದಾದ್ಯಂತ ರಿಲೀಸ್ ಆಗ್ತಿದ್ದು ಚಿತ್ರತಂಡ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದಿದ್ದಾರೆ… ವರ್ಷಗಳ ನಂತರ ಡಿ ಬಾಸ್ ಸಿನಿಮಾ ತೆರೆ ಮೇಲೆ ಬರ್ತಿದೆ ಎಂದು ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ… ಮಾರ್ಚ್ 1 ರಂದು ಸಿನಿಮಾ ಬಿಡುಗಡೆಯಾಗಲಿದ್ದು ಕನ್ನಡದಲ್ಲೆ ದೇಶಾದ್ಯಂತ ಹಾಗೂ ಹೊರ ದೇಶಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ ಎಂದು ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ತಿಳಿಸಿದ್ದಾರೆ…ಇದೇ ಸಮಯದಲ್ಲಿ ದರ್ಶನ್ ಮಾತನಾಡಿ ಇದು ನನ್ನ ಐವತ್ತೊಂದನೆ ಸಿನಿಮಾ ಎಂದು ಇದ್ದಂತಹ ಒಂದಿಷ್ಟು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

 

ಗಾಂಧಿ ನಗರದಲ್ಲಿ ಯಜಮಾನ ಚಿತ್ರದ ಟೈಟಲ್ ಘೋಷಣೆ ಆದ ಬಳಿಕ ಭಾರೀ ಚರ್ಚೆಯೇ ನಡೆದಿತ್ತು. ಅಷ್ಟೆ ಅಲ್ಲದೇ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಯಜಮಾನ ಚಿತ್ರಕ್ಕೆ ಹೋಲಿಕೆ ಮಾಡಿ ಸ್ಯಾಂಡಲ್‍ವುಡ್ ಯಜಮಾನ ಯಾರು ಎಂಬ ಮಾತು ಕೇಳಿ ಬಂದಿತ್ತು. ಯಜಮಾನ ಟೈಟಲ ಕಾಂಟ್ರವರ್ಸಿ ಬಗ್ಗೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ಸ್ಯಾಂಡಲ್ ವುಡ್ ಗೆ ವಿಷ್ಣುವರ್ಧನ್ ಒಬ್ಬರೇ ಯಜಮಾನರು. ವಿಷ್ಣುವರ್ಧನ್ ಯಜಮಾನ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ  ಸುಖಾ ಸುಮ್ಮನೇ ಸಿನಿಮಾದ ಬಗ್ಗೆ ಗೊಂದಲ ಮೂಡಿಸುವುದು ಬೇಡ. ಸಿನಿಮಾ ರಂಗದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಆದ್ದರಿಂದ ಮತ್ತೊಮ್ಮೆ ಹೇಳುತ್ತಿದ್ದೇವೆ. ಇಂಡಸ್ಟ್ರಿಗೆ ಒಬ್ಬರೇ ‘ಯಜಮಾನ’, ಅದು ವಿಷ್ಣುದಾದ ಮಾತ್ರ ಎಂದು ಎಂದು ಸ್ಪಷ್ಟಪಡಿಸಿದರು. ಇಲ್ಲ ಸಲ್ಲದ ಬಗ್ಗೆ ಹೇಳಿ ಸಿನಿಮಾಗಳನ್ನು ನೋಡದೆ ಇರೋ ರೀತಿ ಮಾಡಬೇಡಿ.. ಇದ್ದಂತಹ ಗೊಂದಲಗಳಿಗೆ ಚಿತ್ರತಂಡ ತೆರೆ ಎಳೆದಿದೆ.. ಈ ಸಮಯದಲ್ಲಿ ಚಿತ್ರತಂಡ ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಂಡು ಭಾವುಕರಾದರು..

Edited By

Manjula M

Reported By

Manjula M

Comments