ಕೊಟ್ಟ ಮಾತು ಉಳಿಸಿಕೊಂಡು ಅಭಿಮಾನಿಗಳ ಮನಸ್ಸು ಗೆದ್ದ ಆ ಬಿಗ್ ಬಾಸ್ ಸ್ಪರ್ಧಿ ಯಾರು ಗೊತ್ತಾ..?!!!

20 Feb 2019 10:16 AM | Entertainment
522 Report

ಬಿಗ್’ಬಾಸ್ ಸೀಸನ್ 6 ಮುಗಿದ ಮೇಲೂ ಒಂದಷ್ಟು ದಿನ ಭಾರೀ ಸುದ್ದಿಯಾಯ್ತು. ಬಿಗ್ ಬಾಸ್ ಸ್ಪರ್ಧಿಗಳು ಒಬ್ಬರ ಮೇಲೆ ಒಬ್ಬರು ದೂರು ನೀಡುವುದಕ್ಕು ಮುಂದಾದರು. ಕವಿತಾ ಮತ್ತು ಆ್ಯಂಡಿ ಜಗಳ ಇನ್ನು ನಿಂತತ್ತಿಲ್ಲ. ಇದರ ನಡುವೆಯೇ ಬಿಗ್ಬಾಸ್ ಸ್ಪರ್ಧಿಯೊಬ್ಬರು ತಾವು ಬಿಗ್ ಬಾಸ್ ಮನೆಯಲ್ಲಿ ಹೇಳಿದ ಮಾತಿನಂತೇ ನಡೆದುಕೊಂಡಿದ್ದಾರೆ. ತಾನು ಬಿಗ್ ಬಾಸ್ ಮುಗಿದ ಮೇಲೆ ಆ ಕೆಲಸ ಮಾಡುವುದಾಗಿ ಮಾತು ಕೊಟ್ಟಿದ್ದರು. ಅದರಂತೇ ಈಗ ನಡೆದುಕೊಂಡಿದ್ದಾರೆ. ಅಂದಹಾಗೇ ಆ ಬಿಗ್ ಬಾಸ್ ಸ್ಪರ್ಧಿ ಯಾರು ಗೊತ್ತಾ...?

ಈ ಸೀಸನ್ ನ ಬಿಗ್ ಬಾಸ್ ನಲ್ಲಿ ಮಾರ್ಡನ್ ರೈತ ಶಶಿ ಕುಮಾರ ಅವರು ವಿನ್ನರ್ ಆದರು. ಶಶಿ ಕುಮಾರ್ ಬಿಗ್ ಬಾಸ್ ಹೌಸ್ ನಲ್ಲಿದ್ದಾಗ  ಎಲ್ಲೆರೆದುರು ಒಂದು ಮಾತು ಕೊಟ್ಟಿದ್ದರು. 2019 ರ ನ್ಯೂ ಇಯರ್ ರೆಸಲ್ಯೂಷನ್ ಬಗ್ಗೆ ಮಾತನಾಡುವಾಗ ಪ್ರತೀ ತಿಂಗಳು ವೈಟ್ ಬ್ಲಡ್ ಸೇಲ್ಸ್ ದಾನ ಮಾಡುವೆ. ಜೊತೆಗೆ ನನ್ನೊಂದಿಗೆ ಮಿನಿಮಂ ಐದು ಜನರ ಅಂಗಾಂಗಗಳನ್ನು ದಾನ ಮಾಡಿಸುವೆ ಎಂದು ಶಶಿ ಕುಮಾರ್ ಹೇಳಿದ್ದರು. ಅದರಂತೇ ಶಶಿ ಮತ್ತು ಕುಟುಂಬದ ಸದಸ್ಯರು ರಕ್ತದಾನ ಹಾಗೂ ಅಂಗಾಂಗ ದಾನಗಳನ್ನು ಮಾಡಿದ್ದಾರೆ.

ರಾಮಯ್ಯ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ ಶಶಿ ಮತ್ತು ಕುಟುಂಬದ ಸದಸ್ಯರು ಸತ್ತ ನಂತರ ದೇಹದ ಅಂಗಾಗಗಳನ್ನು ದಾನ ಮಾಡುವುದಾಗಿ ದಾನದ ಪ್ರತಿಗೆ ಸಹಿ  ಹಾಕಿದ್ದಾರೆ. ಅಂತೂ ನುಡಿದಂದೆ ನಡೆದು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ  ಮಾರ್ಡನ್ ರೈತ. ಇದರ ಜೊತೆಗೆ  ನೋಡಲು ಹ್ಯಾಂಡ್ಸಮ್ ಆಗಿರುವ ಶಶಿಗೆ ಬೆಳ್ಳಿ ಪರದೆ ಮತ್ತು ಕಿರುತೆರೆ ಅವಕಾಶಗಳು ಬರುತ್ತಿವೆ. ಪಾತ್ರದಲ್ಲಿ ಚ್ಯೂಸಿಯಾಗಿರುವ ಇವರು ಪಾತ್ರ ನೋಡಿ ಸಿನಿಮಾ ಒಪ್ಪಿಕೊಳ್ಳುತ್ತಾರಂತೆ. ಈಗಾಗಲೇ ಕೃಷಿ ಸಂಬಂಧ ಚಟುವಟಿಕೆಗಳಲ್ಲಿ ಶಶಿ ತೊಡಗಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಕೆಲಸಗಳು ಮಾಡಬೇಕೆಂದು ಕೊಂಡಿರುವೆ, ಅದರ ಸಂಬಂಧ ಇಲ್ಲಿಂದ ಹೋದ ಮೇಲೆ ಮಾಡ್ತೀನಿ ಎಂದಿದ್ದ ಶಶಿ ಸದ್ಯ ಅದರಲ್ಲಿ ಬ್ಯುಸಿಯಾಗಿದ್ದಾರೆ.

Edited By

Kavya shree

Reported By

Kavya shree

Comments