ಕನ್ನಡಿಗರ ಹೃದಯ ಕದ್ದ ಪರಭಾಷೆಯ ಆ ಲಕ್ಕಿ ಹೀರೋಯಿನ್ ಯಾರು ಗೊತ್ತಾ…? ಚಾಲೆಂಜಿಂಗ್ ಸ್ಟಾರ್ ಗೆ ಈಕೆಯೇ ಪರ್ಫೆಕ್ಟ್ ಎಂದ್ರು ಫ್ಯಾನ್ಸ್…?!!!

19 Feb 2019 3:19 PM | Entertainment
1362 Report

ನಟಿಸಿದ್ದು ಬೇರೆ ಭಾಷೆಯಾದ್ರೂ, ಮನಸ್ಸು ಕದ್ದಿದ್ದು ಮಾತ್ರ ಕನ್ನಡಿಗರನ್ನ ಆ ಲಕ್ಕಿ ಹೀರೋಯಿನ್ ಯಾರು  ಗೊತ್ತಾ..?ಇತ್ತೀಚಿಗೆ ಕನ್ನಡದ ನಾಯಕಿಯರು ಪರ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಪರ ಭಾಷಿಗರ ಮೋಸ್ಟ್ ಹೀರೋಯಿನ್ ಕನ್ನಡದಲ್ಲಿ ನಟಿಸಿದ್ದು ಒಂದೇ ಸಿನಿಮಾವಾದ್ರು ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್, ನಮ್ಮ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ, ಟಾಲಿವುಡ್ ನೆಲದಲ್ಲಿ ಟಾಪ್ ಹೀರೋಯಿನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಅದರಂತೇ ಪವರ್ ಸ್ಟಾರ್ ಅಭಿನಯದ ಕೆಲದಿನಗಳಿಂದೆಯಷ್ಟೇ ರಿಲೀಸ್ ಆದ ನಟ ಸಾರ್ವ ಭೌಮ ಸಿನಿಮಾ ಹೀರೋಯಿನ್ ಅನುಪಮಾ ಪರಮೇಶ್ವರನ್. ಸಿನಿಮಾ ನೋಡಿದ ಅಭಿಮಾನಿಗಳ ನಾಯಕಿಯ ಸೌಂದರ್ಯಕ್ಕೆ , ಆಕೆಯ ಸ್ಟೈಲ್ ಗೆ ಫಿದಾ ಆಗಿದ್ದಾರೆ. ಈಗ ಟ್ರೆಂಡ್ ಚೇಂಜ್ ಆಗಿದೆ. ಅದೇ ರೀತಿ ಮತ್ತೊಬ್ಬ ಚೆಲುವೆ , ಪರ ಬಾಷೆಯ ಟಾಪ್ ಮೋಸ್ಟ್ ಹೀರೋಯಿನ್ ಕನ್ನಡಕ್ಕೆ  ಕಾಲಿಟ್ಟಿದ್ದಾಳೆ. ನಟಿಸಿದ್ದು ತಮಿಳು-ತೆಲಗು ಆದ್ರೂ ಅಪಾರ ಕನ್ನಡಾಭಿಮಾನಿಗಳ ಮನಸ್ಸು ಕದ್ದ ಆ ಚೋರಚಿತ್ತ ಚೆಲುವೆ ಯಾರು ಗೊತ್ತಾ..? ಸದ್ಯ ಸ್ಯಾಂಡಲ್’ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಗೆ ನಾಯಕಿಯಾಗಿಯೇ ಕನ್ನಡದ ಫಸ್ಟ್ ಸಿನಿಮಾದಲ್ಲಿ ಆ್ಯಕ್ಟ್ ಮಾಡಲು ಬರುತ್ತಿದ್ದಾರೆ. ಆಕೆ ಬೇರೆ ಯಾರು ಅಲ್ಲಾ, ಕನ್ನಡದ ವ್ಯಾಟ್ಸ್ಅಪ್ ಗಳಲ್ಲಿ ಮಿಂಚಿದ್ದ ಫೇಸ್ ಎಕ್ಸ್’ಪ್ರೆಶನ್ ಗೆ ಫೇಮಸ್ ಆಗಿದ್ದ ನಟಿ ಕೀರ್ತಿ ಸುರೇಶ್.

ನಟಿ ಕೀರ್ತಿ ಸುರೇಶ್ ಸ್ಮೈಲ್ ಗೆ, ಸರಳ ಸೌಂದರ್ಯಕ್ಕೆ, ಅವರ ವಾಕ್ ಸ್ಟೈಲ್ ಗೆ ಫಿದಾ ಆಗದವರೇ ಇಲ್ಲ. ಹುಚ್ಚು ಹಿಡಿಸುವ ಅವರ ಸೌಂದರ್ಯ ಕಂಡು ಕನ್ನಡಿಗರು ಕೂಡ ಫ್ಯಾನ್ಸ್ ಆಗಿದ್ದಾರೆ. ಆದರೆ ಈಗ ಆಕೆಯೇ ಕನ್ನಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂದರೇ, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ ಬಿಡಿ. ಕೀರ್ತಿ ದರ್ಶನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಈಗಾಗಲೇ ಎರಡು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಒಂದು ಕುರುಕ್ಷೇತ್ರ ಮತ್ತೊಂದು ಯಜಮಾನ.

ದರ್ಶನ್ ಕೈಯಲ್ಲಿ ಇನ್ನು ಗಂಡುಗಲಿ ವೀರ ಮದಕರಿ ಮತ್ತು ರಾಬರ್ಟ್ ಸಿನಿಮಾಗಳಿವೆ.  ಆದರೆ ದರ್ಶನ್ ಗೆ ಈಕೆ ನಾಯಕಿಯಾಗಿ ಬರುತ್ತಾರೆ ಎಂಬ ಸುದ್ದಿ ಮಾತ್ರ ಹೊರ ಬಿದ್ದಿದೆ. ಆದರೆ ಯಾವ ಸಿನಿಮಾಗೆ ದರ್ಶನ್ ಜೊತೆ ಡ್ಯುಯೆಟ್ ಆಡಲಿದ್ದಾರೆಂಬುದು ಮಾತ್ರ ತಿಳಿದಿಲ್ಲ. ಸದ್ಯ ತಮಿಳು ಮತ್ತು ತೆಲಗು ನಾಡಿನಲ್ಲಿ ಡಿಮ್ಯಾಂಡ್ ಹೀರೋಯಿನ್ ಆಗಿರುವ ಈಕೆಯನ್ನು ಎಲ್ಲರು ಲಕ್ಕಿ ಸ್ಟಾರ್ ಹೀರೋಯಿನ್ ಅಂತಾನೇ ಕರೆಯೋದು. ಧನುಷ್, ನಾನಿ, ಕಾರ್ತಿಕೇಯನ್, ವಿಜಯ್ ಗೆ ಈಕೆಯೇ ನಾಯಕಿಯಾಗಬೇಕೆಂಬುದು ಕೆಲವರ ಇಚ್ಛೆ. ಈಕೆಯ ಮಹಾನಟಿ ಸಿನಿಮಾ ನೋಡಿ ಎಂತಹ ಅದ್ಭುತ ಕಲಾವಿದೆ ಎಂದು ಗ ಶಹಬ್ಬಾಸ್ಗಿರಿ ಕೊಟ್ಟವರ ಸಂಖ್ಯೆ ಕಡಿಮೆ ಇಲ್ಲ ಬಿಡಿ. ಅದೇನೇ ಇರಲಿ, ಕನ್ನಡದಲ್ಲಿ ಇದೂವರೆಗೂ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳದ ಕೀರ್ತಿ ಸುರೇಶ್ರನ್ನು ಸಿಂಪಲ್ ಹೀರೋಯಿನ್ ಎಂದು ಕೊಂಡಾಡಿದ್ದು ಇದೇ ಕನ್ನಡಿಗರು.ಈಗ ಕನ್ನಡ ಚಿತ್ರದಲ್ಲೇ ನಟಿಸ್ತಾರೆಂದರೆ..!ಒಂದು ವೇಳೆ ರಾಕ್ ಲೈನ್ ವೆಂಕಟೇಶ್ ಅವರ ಚಿತ್ರ ಗಂಡುಗಲಿ ವಿರಮದಕರಿಗೆ ಈಕೆಯೇ ನಾಯಕಿಯಾಬೇಕೆಂದರೆ ಕೀರ್ತಿ ಸುರೇಶ್ ಪಕ್ಕಾ ಕನ್ನಡಕ್ಕೆ ಬರ್ತಾರೆಂಬುದು ಮಾತ್ರ ಖಚಿತ.

Edited By

Kavya shree

Reported By

Kavya shree

Comments