ಜನಮನಗೆದ್ದ ಸರಿಗಮಪ’ ಶೋ ವಿರುದ್ಧ ಅಭಿಮಾನಿಗಳು ಗರಂ : ನಿಜಕ್ಕೂ ನಡೆದಿದ್ಯಾ ಗೋಲ್ -ಮಾಲ್..?!!!

19 Feb 2019 11:33 AM | Entertainment
3926 Report

ರಿಯಾಲಿಟಿ ಶೋಗಳು ಒಂದಿಲ್ಲೊಂದು ಕಾರಣಕ್ಕಾಗಿ ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತವೆ. ಇತ್ತೀಚಿಗಷ್ಟೇ ಕನ್ನಡದ ಅತೀದೊಡ್ಡ ರಿಯಾಲಿಟಿ ಶೋ ಬಿಗ್’ಬಾಸ್ ಬಗ್ಗೆ ಜನ ಮೂಗು ಮುರಿದಿದ್ದರು. ಬಿಗ್ ಬಾಸ್ ಶೋ ಒಂದು ಮೂರ್ಖರ ಟೆಲಿ ಶೋ, ಅವರಿಷ್ಟ ಬಂದಹಾಗೇ ಯಾರನ್ನು ಬೇಕಾದ್ರು ವಿನ್ನರ್ ಮಾಡ್ತಾರೆ ಎಂಬೆಲ್ಲಾ ಕಮೆಂಟ್’ಗಳು ಬರತೊಡಗಿದವು. ಇದೀಗ ಅಂತದ್ದೇ ಇನ್ನೊಂದು ವಿವಾದಕ್ಕೆ ಮತ್ತೊಂದು ಖಾಸಗಿ ಚಾನಲ್ ನ ಜನಪ್ರಿಯ ಶೋವೊಂದು ಕಾರಣವಾಗಿದೆ.

ಕೋಟ್ಯಾಂತರ  ಅಭಿಮಾನಿಗಳ ಮನಗೆದ್ದ, ಹೈ ಟಿಆರ್’ಪಿ ಪಡೆದುಕೊಂಡ ಸಿಂಗಿಂಗ್ ಶೋ ಸರಿಗಮಪ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕರ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಸರಿಗಮಪ ಫೈನಲ್ ಹಂತ ತಲುಪಿದೆ. ಈಗಾಗಲೇ ಭಾರೀ ಸುದ್ದಿಯಾಗಿದ್ದ ಸರಿಗಮಪ ಸದ್ಯ ವಿವಾದಕ್ಕೊಳಗಾಗಿದೆ. ಫೈನಲ್ಗೆ' ಆಯ್ಕೆಯಾದ ಸ್ಪರ್ಧಿಗಳನ್ನು ತೀರ್ಪುಗಾರರ ತಂಡ ಅನೌನ್ಸ್ ಮಾಡಲಾಗಿದೆ. ಈ ಲೀಸ್ಟ್ ನೋಡಿ ಒಂದಷ್ಟು ಜನ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸರಿಗಮಪ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಾವತ್ತೂ ಪ್ರತಿಭೆಗೆ ಬೆಲೆ ಕೊಡಲ್ಲ, ಟಿಆರ್'ಪಿ ಹೆಚ್ಚಿಸುವವರಿಗೆ ಮಾತ್ರ ಮಣೆ ಹಾಕಲಾಗುತ್ತದೆ. ನಿಜವಾದ ಗಾಯಕರನ್ನು ವಿನ್ ಮಾಡಿಸಲ್ಲ ವಿನ್ನರ್ ಯಾರೆಂದು ಮೊದಲೇ ಫಿಕ್ಸ್ ಆಗಿರುತ್ತದೆ ಎಂದೆಲ್ಲಾ ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಸೀಸನ್ನಲ್ಲಿ ಸ್ಪರ್ಧಿಗಳಾಗಿರುವ ಪೃಥ್ವಿ ಭಟ್, ರಜತ್ ಮಯ್ಯ ರಂತಹ ಪ್ರತಿಭೆಗಳನ್ನು ಫೈನಲ್ ಗೆ ಆಯ್ಕೆ ಮಾಡಿಲ್ಲವೆಂಬುದೇ ಅಭಿಮಾನಿಗಳ ಅಸಮಧಾನಕ್ಕೆ ಕಾರಣವಾಗಿದೆ. ಸರಳತೆಗೆ, ಮುಗ್ಧತೆಗೆ ಶೋನ ಸ್ಪರ್ಧಿ ಹೆಸರುವಾಸಿ ಹನುಮಂತಪ್ಪ  ಮತ್ತು ಇತರರನ್ನು ಆಯ್ಕೆ ಮಾಡಿದ್ದು ವೀಕ್ಷಕರ ಅಸಮಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಸರಿಗಮಪ ಬೇರೆಲ್ಲಾ ಶೋಗಿಂತ ವಿಭಿನ್ನವಾದ ಶೋ. ಏಕೆಂದರೆ ಶೋ ನ ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ ಜನ್ಯಾ ಇದ್ದಾರೆ. ಈಗಾಗಲೇ ಹಿಂದಿನಿಂದಲೂ ಶೋ ತೀರ್ಪುಗಾರರಾಗಿಯೇ ಇರುವ ಇವರು ಈ ಸೀಸನ್ ನಲ್ಲಿಯೂ ಮುಂದುವರೆದಿದ್ದಾರೆ. ಅಷ್ಟೇ ಅಲ್ದೇ ಬೆಸ್ಟ್ ಜಡ್ಜಸ್ ಅಂತಾ ಹೆಸರು ಕೂಡ ಪಡೆದುಕೊಂಡಿದ್ದಾರೆ.

ಆದರೆ ಶೋ ಬಗ್ಗೆ ಅದೂವರೆಗೂ ಪಾಸೀಟೀವ್ ಒಪೀನಿಯನ್ ಇಟ್ಟುಕೊಂಡಿದ್ದ ವೀಕ್ಷಕರು ಇದೀಗ ಅಸಮಾಧಾನಗೊಂಡಿದ್ದಾರೆ. ಆದರೆ ಈ ಮಧ್ಯೆಯೂ ಒಂದಷ್ಟು ಜನ ಶೋ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ. ಆ ಥರದ್ದ ಯಾವ ಗೋಲ್ ಮಾಲ್ ಕೂಡ ಶೋನಲ್ಲಿ ನಡೆದಿಲ್ಲ. ಈ ಶೋ ಅದ್ಯಾವುದಕ್ಕೂ ಮಣೆಯಾಕಲ್ಲಾ, ಆಯ್ಕೆಗಾಗಿ ಶೋ ರೂಲ್ಸ್ ಇರುತ್ತವೆ. ಅದನ್ನೊಳಗೊಂಡತೆ ತೀರ್ಪು ತೆಗೆದುಕೊಂಡಿದ್ದಾರೆಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.. ಅಂದಹಾಗೇ ಈ ಶೋ ನಿರೂಪಕರು ಅನುಶ್ರೀ.  ಸರಿಗಮಪ ಶೋನಲ್ಲಿ ಹೆಚ್ಚು ಸೌಂಡು ಮಾಡಿದ್ದ ಸ್ಪರ್ಧಿ ಎಂದರೆ ಅದು ಹನುಮಂತಪ್ಪ. 

Edited By

Kavya shree

Reported By

Kavya shree

Comments