ಕಿಚ್ಚನ ಮನಗೆದ್ದ ಆ 'ವಿಶೇಷ ಅಭಿಮಾನಿ' ಯಾರು : ಆಕೆಯನ್ನು ಹುಡುಕಿಕೊಂಡು ಹೊರಟ ಸ್ಯಾಂಡಲ್ವುಡ್’ಬಾದ್’ಷಾ…?!!!-

19 Feb 2019 10:10 AM | Entertainment
4738 Report

ಸ್ಯಾಂಡಲ್’ವುಡ್ ನ ಬಾದ್ ಷಾ ಕಿಚ್ಚ ಸುದೀಪ್'ರನ್ನು ಕಾಣಲು, ಅವರನ್ನು ಮಾತನಾಡಿಸಲು ಕೋಟ್ಯಾಂತರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಕನ್ನಡ ಇಂಡಸ್ಟ್ರಿ ಅಲ್ಲದೇ ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ  ಸುದೀಪ್ ಗೆ ದೊಡ್ಡ ಮಟ್ಟದ ಫಾಲೋಯರ್ಸ್ ಬಳಗವೇ ಇದೆ. ಆದರೆ ಕಿಚ್ಚ ಸುದೀಪ್ ಅಭಿಮಾನಿಯೊಬ್ಬರ  ಅಭಿಮಾನಕ್ಕೆ ಮನಸೋತಿದ್ದಾರೆ. ಅವರು ಎಲ್ಲಿದ್ದಾರೆ, ಅವರ ಅಡ್ರೆಸ್ ಕೊಡಿ ಎಂದು ಖುದ್ದು ಹೇಳಿದ್ದಾರಂತೆ. ತಮ್ಮ ಟೀಂ ವತಿಯಿಂದ ಅಭಿಮಾನಿಯನ್ನು ಹುಡುಕಿಸಿದ್ದಾರೆ ಎನ್ನಲಾಗಿದೆ. ಹೇಳಿದ್ದಾರಂತೆ. ಅಂದಹಾಗೇ ಸ್ಟಾರ್ ಸುದೀಪ್ ಅವರ ಮನಗೆದ್ದ ಆ ವಿಶೇಷ ಅಭಿಮಾನಿ ಯಾರು ಗೊತ್ತಾ..?

ಸೋಶಿಯಲ್ ಮಿಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಸೆಲೆಬ್ರಿಟಿಗಳ ಪೈಕಿ ಕಿಚ್ಚ ಸುದೀಪ್ ಕೂಡ ಒಬ್ಬರು. ಅಂದಹಾಗೇ ಇತ್ತೀಚೆಗೆ  ಕಿಚ್ಚ ಫ್ಯಾನ್ಸ್ ಅಸೋಸಿಯೇಷನ್​​ ಟ್ವಿಟರ್​​ ಪೇಜ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿತ್ತು. ಆ  ವಿಡಿಯೋಗೆ ಕಿಚ್ಚ ನೀಡಿದ ಪ್ರತಿಕ್ರಿಯೆಂದಾಗಿ ಅಭಿಮಾನಿಗಳನ್ನು ಹೇಗೆ ಕಾಣುತ್ತಾರೆ ಎಂಬುದನ್ನು ತಿಳಿಯಬಹುದು. ವಿಶೇಷ ಚೇತನ ಬಾಲಕಿಯೊಬ್ಬಳು ಸುದೀಪ್ ಅವರು ನಟಿಸಿರುವ​ ಸಿನಿಮಾ ಹಾಡನ್ನು ಹಾಡೋ ಮೂಲಕ ನಾನು ನಿಮ್ಮ ಅಭಿಮಾನಿ, ನೀವು ಅಂದ್ರೆ ನನಗೆ ತುಂಬಾ ಇಷ್ಟ ಅಂತಾ ಹೇಳಿದ್ದಾಳೆ. ಅಲ್ಲದೇ ನಿಮ್ಮನ್ನು ಒಮ್ಮೆ ಕಣ್ತುಂಬ ನೋಡಬೇಕೆಂಬ ಹಂಬಲ ಇದೆ ಅಂತಾ ಹೇಳಿಕೊಂಡಿದ್ದಾಳೆ. ವಿಡಿಯೋದಲ್ಲಿ ಬಾಲಕಿ ಹೇಳಿದ ಮಾತುಗಳಿಂದ ಸುದೀಪ್ ಕಣ್ಣಾಲಿಗಳು ತುಂಬಿದ್ದವಂತೆ.

ಈ ವಿಡಿಯೋ ಅವರ ಮನಸ್ಸಿಗೆ ನಾಟಿದ್ದು, ಆಕೆಯನ್ನು ನೋಡುವ ಹಂಬಲ ವ್ಯಕ್ತಪಡಿಸಿದರಂತೆ. ಆಗಿಂದಾಗಲೇ ಈ ಪುಟ್ಟ ಅಭಿಮಾನಿ ಎಲ್ಲಿದ್ದಾರೆ ಅಂತಾ ತಿಳಿಬಹುದಾ ಅಂತಾ ಕೇಳಿದ್ದಾರೆ. ಸದ್ಯ ಈ ಮಗುವಿನ ಮಾಹಿತಿ ತಿಳಿದಿದ್ದು ಇಂದು ನಮ್ಮ ತಂಡ ಆ ಅಭಿಮಾನಿಯನ್ನು ಕಾಣಲಿಕ್ಕೆ ತೆರಳಲಿದೆ ಅಂತಾ ಸುದೀಪ್​ ಹೇಳಿದ್ದಾರೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೇ ಕಿಚ್ಚನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಭಿಮಾನಿಗಳಾಸೆ ಈಡೇರಿಸುವ ಕಿಚ್ಚನಿಗೆ ಪಾಸೀಟೀವ್ ಕಮೆಮಟ್ಸ್ ಸಿಗುತ್ತಿದೆ.

Edited By

Kavya shree

Reported By

Kavya shree

Comments