ಕೊನೆಗೂ ಅಂಬಿ ಆಸೆಯನ್ನು ಈಡೇರಿಸದ ಜೋಗಿ ಪ್ರೇಮ್..!!!

18 Feb 2019 2:47 PM | Entertainment
2242 Report

ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಶ್ ನಿಧನಕ್ಕೆ ಇಡೀ ಚಿತ್ರರಂಗದಲ್ಲಿಯೇ ಸೂತಕದ ಛಾಯೆ ನಿರ್ಮಾಣವಾಗಿತ್ತು… ಅಂಬಿ ಮೇಲಿನ ಅಭಿಮಾನ ಎಷ್ಟಿತ್ತು ಎಂದರೆ ಅವರ ಸಾವಿನ ದಿನ ನೆರದಿದ್ದ ಜನವೇ ಅಂಬಿ ಅಭಿಮಾನಕ್ಕೆ ಸಾಕ್ಷಿಯಾಗಿತ್ತು..  ಅಂಬಿ ಅಭಿಮಾನಿಗಳ ಪಟ್ಟಿಯಲ್ಲಿ ಪ್ರೇಮ್ ಮೊದಲು ನಿಲ್ಲತ್ತಾರೆ ಅಂದರೆ ತಪ್ಪಾಗುವುದಿಲ್ಲ.. ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಹಾಗೂ ಹ್ಯಾಟ್ರಿಕ್ ಹೀರೋ ಕಾಂಬಿನೇಷನ್‌ನಲ್ಲಿ ಮೂಡಿ ಬಂದ 'ದಿ ವಿಲನ್' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ರೆಬೆಲ್ ಸ್ಟಾರ್ ಆಗಮಿಸಿದ್ದರು.

ಆಡಿಯೋ ಬಿಡುಗಡೆ ಸಮಯದಲ್ಲಿ ಅಂಬಿ, ಒಬ್ಬರನ್ನು ಭೇಟಿ ಮಾಡಿಸುವಂತೆ ಪ್ರೇಮ್ ಬಳಿ ಕೇಳಿಕೊಂಡಿದ್ದರಂತೆ. ಪ್ರತಿ ಸಲವೂ ಪ್ರೇಮ್ ಅವರನ್ನು ಭೇಟಿಯಾದಾಗ ಅಂಬಿ, 'ಯಾವಾಗ ನನ್ನ ನಿಮ್ಮ ಮನೆಗೆ ಕರ್ಕೊಂಡು ಹೋಗಿ, ನಿನ್ನ ತಾಯಿಯನ್ನು ಭೇಟಿ ಮಾಡಿಸುತ್ತಿಯಾ?' ಎಂದು ಪ್ರತಿಸಲ ಕೇಳುತ್ತಿದ್ದರಂತೆ. ಆದರೆ ಪ್ರೇಮ್ ಮನೆಯಲ್ಲಿ ಲಿಫ್ಟ್ ಇಲ್ಲದ ಕಾರಣ ಅಂಬಿಯನ್ನು ಕರೆದುಕೊಂಡು ಹೋಗಲು ಆಗಿರಲಿಲ್ಲ... ಆಮೇಲೆ ಮನೆಗೆ ಲಿಫ್ಟ್ ಹಾಕಿಸಿ, ಅಂಬಿಯನ್ನು ಪ್ರೇಮ್ ಮನೆಗೆ ಆಹ್ವಾನಿಸಿದ್ದರಂತೆ ಪ್ರೇಮ್… ಆದರೆ  ಅವರಿಗೆ ಬರಲು ಸಮಯವೇ ಸಿಕ್ಕಿರಲಿಲ್ಲ. 'ಈಗಲೂ ನನ್ನ ತಾಯಿ ಹೇಳುತ್ತಿರುತ್ತಾರೆ, ನೀನು ಅವರನ್ನು ಒಮ್ಮೆ ಕರೆದುಕೊಂಡು ಬರಬೇಕಿತ್ತೆಂದು. ಅದೊಂದು ನೋವು ನನಗೆ ಈಗಲೂ ಕಾಡುತ್ತಿದೆ,' ಎಂದು ಖಾಸಗಿ ವಾಹಿನಿಯೊಂದಿಗೆ ಮಾತನಾಡುವಾಗ ಪ್ರೇಮ್ ಹೇಳಿಕೊಂಡಿದ್ದಾರೆ.. ಅಂಬಿಯನ್ನು ನೆನದು ಕಣ್ಣೀರಿಟ್ಟರು…

Edited By

Manjula M

Reported By

Manjula M

Comments