ದಿ ವಿಲನ್ ಸಿನಿಮಾವನ್ನು ಟಿವಿಯಲ್ಲಿ ನೋಡಿದ ಅಭಿಮಾನಿಗಳು ಏನ್ ಮಾಡುದ್ರು ಗೊತ್ತಾ..?

18 Feb 2019 12:19 PM | Entertainment
5552 Report

ಸ್ಯಾಂಡಲ್ ವುಡ್’ನಲ್ಲಿ ಸ್ಟಾರ್ ಸಿನಿಮಾಗಳು ಒಟ್ಟೊಟ್ಟಿಗೆ  ಬರುವುದು ರೇರ್ .. ಒಂದೇ ಸಿನಿಮಾದಲ್ಲಿ ಸ್ಟಾರ್ ಹೀರೋಗಳು ಅಭಿನಯಿಸುವುದು ರೇರ್ ..ಆದರೆ  ದಿ ವಿಲನ್ ಸಿನಿಮಾದಲ್ಲಿ ಇಬ್ಬರು ಸ್ಟಾರ್’ಗಳು ಸ್ಕ್ರೀನ್ ಷೇರ್ ಮಾಡಿದ್ದಾರೆ… ಸಾಮಾನ್ಯವಾಗಿ ಥಿಯೇಟರ್ ನಲ್ಲಿ ಸ್ಟಾರ್ ನಟರ ಚಿತ್ರಗಳು ಬರ್ತಿದೆ ಅಂದ್ರೆ ಸಂಭ್ರಮ ಮಾಡೋದು ಕಾಮನ್. ಚಿತ್ರಮಂದಿರದ ಬಳಿ ಕಟೌಟ್ ನಿಲ್ಲಿಸಿ, ಪೋಸ್ಟರ್ ಗಳಿಗೆ ಹಾರ ಹಾಕಿ, ಸಿಹಿ ಹಂಚಿ ಪಟಾಕಿ ಹೊಡೆದು ಹಬ್ಬ ಮಾಡೋದೇ . ಆದ್ರೆ, ಟಿವಿಯಲ್ಲೂ ಸಿನಿಮಾ ಪ್ರಸಾರವಾದಗಲೂ ಈ ಸಂಭ್ರಮ ಇರುತ್ತೆ ಅನ್ನೋದಕ್ಕೆ ದಿ ವಿಲನ್ ಸಿನಿಮಾ ಉತ್ತಮ ಉದಾಹರಣೆಯಾಗಿದೆ..

ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಿಗೆ ಅಭಿನಯಿಸಿದ್ದ 'ದಿ ವಿಲನ್' ಸಿನಿಮಾ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಯಿತು. ಜೀ ಕನ್ನಡ ವಾಹಿನಿಯಲ್ಲಿ ಸಂಜೆ 7 ಗಂಟೆಗೆ ವಿಲನ್ ಸಿನಿಮಾ ಪ್ರಸಾರ  ಆಗಿತ್ತು. ಇದೀಗ ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಂಡಿದ್ದ ಫ್ಯಾನ್ಸ್ ಟಿವಿಯಲ್ಲಿ ವಿಲನ್ ಸಿನಿಮಾ ನೋಡಿ ಇನ್ನೊಂದು ಸಲ ಸಖತ್ ಹಬ್ಬವನ್ನೆ ಮಾಡಿದ್ದಾರೆ. ಶಿವಣ್ಣ ಫ್ಯಾನ್ಸ್ ಒಂದು ಕಡೆ ಸೆಲೆಬ್ರೇಟ್ ಮಾಡಿದ್ರೆ, ಕಿಚ್ಚನ ಫ್ಯಾನ್ಸ್ ಮತ್ತೊಂದು ಕಡೆ ಸಂಭ್ರಮಿಸಿದ್ದಾರೆ.. 'ದಿ ವಿಲನ್' ಸಿನಿಮಾದಲ್ಲಿ ಸುದೀಪ್ ಅವರ ಎಂಟ್ರಿ ಸೀನ್ ಬರ್ತಿದ್ದಂತೆ ಸುದೀಪ್ ಅಭಿಮಾನಿಯೊಬ್ಬ ಕೈಯಲ್ಲಿ ಕರ್ಪೂರವನ್ನ ಹಚ್ಚಿ ಸುದೀಪ್ ಗೆ ಆರತಿ ಮಾಡಿದ್ದಾನೆ. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮತ್ತೊಬ್ಬ ಸುದೀಪ್ ಅಭಿಮಾನಿ ದಿ ವಿಲನ್ ಸಿನಿಮಾ ಪ್ರಸಾರದ ವೇಳೆ ಸುದೀಪ್ ದೃಶ್ಯ ಬಂದಾಗ, ಟಿವಿಗೆ ಹಾರ ಹಾಕಿ, ದೀಪ ಹಚ್ಚಿ ತನ್ನ ಅಭಿಮಾನ ಮೆರೆದಿದ್ದಾನೆ. ಸಿನಿಮಾವನ್ನು ಟಿವಿಯಲ್ಲಿ ನೋಡಿ ಅಭಿಮಾನಿಗಳು ದಿಲ್ ಖುಷಿಯಾಗಿದ್ದಾರೆ.

Edited By

Manjula M

Reported By

Manjula M

Comments

Cancel
Done