ತಾಕತ್ತಿದ್ದರೇ ನನ್ನೊಂದಿಗೆ ಜಮ್ಮು ಕಾಶ್ಮೀರಕ್ಕೆ ಬರ್ತೀಯಾ : ವಾಟಾಳ್ ಗೆ ಚಾಲೆಂಜ್ ಹಾಕಿದ ಆ ಯುವಕ ಯಾರು..?!!

18 Feb 2019 12:11 PM | Entertainment
5679 Report

ಪುಲ್ವಾಮಾ ದಾಳಿಯನ್ನು ಖಂಡಿಸಿ ಈಗಾಗಲೇ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯೋಧ ಗುರು ಸಾವಿಗೆ ರಾಷ್ಟ್ರಾದ್ಯಂತ ಕೋಟ್ಯಾಂತರ ಭಾರತೀಯರು ಕಂಬನಿ ಮಿಡಿದೆದ್ದಿದ್ದಾರೆ. ಉಗ್ರರ ಅಟ್ಟಹಾಸಕ್ಕೆ ಭಾರತೀಯ ಯೋಧರು ನೆತ್ತರು ಹರಿಸಿದ್ದಾರೆ. ಮಂಡ್ಯದಾದ್ಯಂತ ಯೋಧ ಗುರುವಿಗೆ ಅಂತಿಮ ನಮನ ಸಲ್ಲಿಸಿದ ನಂತರ ಕೆಲವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬರು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗೆ ಸವಾಲು ಹಾಕಿದ್ದಾರೆ. ತಾಕತ್ತಿದ್ದರೇ ನನ್ನೊಂದಿಗೆ ಜಮ್ಮುಕಾಶ್ಮೀರಕ್ಕೆ ಬರ್ತೀಯ ಎಂದು ಚಾಲೆಂಜ್ ಹಾಕಿದ್ದಾನೆ.

ಮಂಡ್ಯದ ಪೇಟೆ ಬೀದಿ ನಿವಾಸಿ ಅಂಗಪ್ಪ ಎಂಬುವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹರಿಬಿಟ್ಟು, ನಿನಗೆ ತಾಕತ್ತಿದ್ದರೆ ಜಮ್ಮುಕಾಶ್ಮೀರಕ್ಕೆ ಹೋಗೋಣ ಬಾ, ಅದು ಬಿಟ್ಟು ಕರ್ನಾಟಕ ಬಂದ್ ಯಾಕೆ ಮಾಡುತ್ತೀಯಾ? ಎಂದು ವಾಟಾಳ್ ನಾಗರಾಜ್ ಗೆ ಸವಾಲು ಹಾಕಿದ್ದಾರೆ. ಉಗ್ರರ ದಾಳಿ ಖಂಡಿಸಿ ಕರ್ನಾಟಕ ಬಂದ್ ಮಾಡುವುದಾಗಿ ಕರೆಕೊಟ್ಟ ವಾಟಾಳ್ ನಾಗರಾಜ್ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಮಂಗಳವಾರ ಕರ್ನಾಟಕ ಬಂದ್ ಗೆ ಘೋಷಣೆ ನೀಡಿದ್ದ ವಾಟಾಳ್ ನಾಗರಾಜ್ ಅವರು ಯೂಟರ್ನ್ ಹೊಡೆದಿದ್ದು, ಇದರಿಂದ ಆಕ್ರೋಶಗೊಂಡ ವ್ಯಕ್ತಿ ನಾಗರಾಜ್ ಗೆ ಸವಾಲು ಹಾಕಿದ್ದಾರೆ. ಕರ್ನಾಟಕ ಬಂದ್ ಮಾಡುವುದಾಗಿ ಕರೆಕೊಟ್ಟಿದ್ದ ವಾಟಾಳ್ ನಾಗರಾಜ್ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದ ಬೆನ್ನಲ್ಲೇ ವಾಟಾಳ್ ತಮ್ಮ ಕರೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ. ಉಗ್ರರ ದಾಳಿಗೂ ಕರ್ನಾಟಕ ಬಂದ್ ಗೂ ಏನು ಸಂಬಂಧ. ಅದೂ ಬಿಟ್ಟು ಕರ್ನಾಟಕ ಬಂದ್ ಮಾಡೋದ್ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಯೋಧರ ಸಾವಿನ ಸುದ್ದಿಯಿಂದ ಇನ್ನೂ ಹತಾಶಭಾವದಿಂದ ಹೊರ ಬಂದಿಲ್ಲ ಭಾರತೀಯರು.

Edited By

Kavya shree

Reported By

Kavya shree

Comments