ಕೆಜಿಎಫ್ ನಂತರ ಅದೃಷ್ಟ ಹರಸಿ ಬಂತು ರಾಖಿಬಾಯ್ ತಾಯಿಗೆ...!

18 Feb 2019 10:49 AM | Entertainment
1020 Report

ಇಂದು ಕೆಜಿಎಫ್ ಯಶಸ್ಸಿನ ಮೆಟ್ಟಿಲೇರಿದೆ. ಸಿನಿಮಾ ಸಕ್ಸಸ್'ಗೆ ಸಿನಿ ತಂಡವಷ್ಟೇ ಅಲ್ಲದೇ, ಅದರಲ್ಲಿ ದುಡಿದ ಇತರ ಸಿನಿ ಕಲಾವಿದರಿಗೂ ಲಕ್ ಖುಲಾಯಿದೆ.ಅಂದಹಾಗೇ ಸಿನಿಮಾ ಯಶ್'ಗೆ ಮಾತ್ರವಲ್ಲ, ಯಶ್ ಜೊತೆ ಒಂದೆರಡು ನಿಮಿಷಗಳ ಕಾಲ ತೆರೆ ಮೇಲೆ ಬಂದೋಗುವ ನಟರನ್ನು ಕೂಡ ಸಕ್ಸ'ಸ್ ಜರ್ನಿಯಲ್ಲಿ ಕೊಂಡೊಯ್ಯುವಂತೆ ಮಾಡಿದೆ. ಅಂದಹಾಗೇ ಮಾಸಲು ಬಟ್ಟೆ, ಬಾಡಿದ ಮುಖ, ಕೈಯೊಲ್ಲೊಂದು ಮಗು, ಬನ್ ಹಿಡಿದುಕೊಂಡು ಕೋಟಿ ಕೋಟಿ ಅಭಿಮಾನಿಗಳ ಮನಗೆದ್ದಿದ್ದ ಈಕೆ ಇಂದು ಸ್ಯಾಂಡಲ್'ವುಡ್ ಹೀರೋಯಿನ್. ಕೆಜಿಎಫ್ ಸಿನಿಮಾದಲ್ಲಿ ಯಶ್ ಬಾಲ್ಯದಲ್ಲಿದ್ದಾಗ, ಆತನ ತಾಯಿ ಪಾತ್ರದಲ್ಲಿ ಮಿಂಚಿದ್ದ ನಟಿ ಇಂದು ಚಂದನವನದ ಡಿಮ್ಯಾಂಡ್ ಹೀರೋಯಿನ್.

ನಟಿ ಅರ್ಚನಾ ಅವರು ಸಿನಿಮಾದಲ್ಲಿ ಯಶ್ ತಾಯಿಯಾಗಿ ನಟಿಸಿದ್ದರು. ವಯಸ್ಸಿಗೂ ಮೀರಿ ಪಾತ್ರ ಮಾಡಿದ ಅರ್ಚನಾ ಹೇಳಿದ್ದೇನು ಗೊತ್ತಾ...? ನಾನು ಪಾತ್ರ ಮಾಡಲು ಒಪ್ಪಿಕೊಂಡಿದ್ದು ವರ್ಷದ ಹಿಂದೆಯೇ. ಆ ಹೊತ್ತಿಗೆ ನಾನು 'ಕೆಜಿಎಫ್' ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೆ. ಈ ನಿರ್ದೇಶಕರು ಹೇಳಿದ ಕತೆ ಸೊಗಸಾಗಿತ್ತು. ಪಾತ್ರವೂ ಅಷ್ಟೇ ಮುದ್ದಾಗಿತ್ತು. ಒಂದೊಳ್ಳೆ ಅವಕಾಶ ಅಂತ ಒಪ್ಪಿಕೊಂಡೆ. ಆದರೆ ಸೆಟ್'ಗೆ ಹೋದಾಗ ಆ ಚಿತ್ರದಲ್ಲಿ ಮತ್ತೊಬ್ಬರು ನಾಯಕಿ ಇದ್ದಾರೆ ಅಂತ ಗೊತ್ತಾಯಿತು. ಯಾಕೋ ಬೇಡ ಎನಿಸುತ್ತಿತ್ತು, ಆದರೂ ನಾನೊಬ್ಬ ಕಲಾವಿದೆ. ಬೇಸರ ಪಟ್ಟುಕೊಳ್ಳಲಿಲ್ಲ. ಕೊಟ್ಟ ಅವಕಾಶವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ ಎನ್ನುವ ಖುಷಿಯಿದೆ. ನಾನು ಮೊದ ಮೊದಲು ಈ ಪಾತ್ರ ಮಾಡಲು ಮನಸ್ಸು ಮಾಡಿರಲಿಲ್ಲ, ವಯಸ್ಸಿಗೂ ಮೀರಿದ ಪಾತ್ರವಿದು. ಸಿಕ್ಕಾಪಟ್ಟೆ ಡಿಮ್ಯಾಂಡ್ ತಂದುಕೊಟ್ಟಿತು.

ನೋಡ ನೋಡುತ್ತಲೇ ಸಿನಿಮಾ ಈ ಪರಿ ಯಶಸ್ಸು ತಂದುಕೊಡುತ್ತೆ. ಅಲ್ಲದೇ ನನ್ನ ಪಾತ್ರಕ್ಕೂ ಜನ ಮೆಚ್ಚುಗೆ ಪಟ್ಟಿದ್ದಾರೆ ಎಂದರೆ ನಿಜಕ್ಕೂ ಖುಷಿಯಾಗುತ್ತದೆ. ರಾಖಿ ಬಾಯ್ ಮದರ್ ಎಂದೇ ಗುರುತಿಸುತ್ತಾರೆ ಒಂದೇ ತರಹದ ಪಾತ್ರಗಳಿಗೆ ಬ್ರಾಂಡ್ ಆಗುವುದು ನಂಗಿಷ್ಟ ಇಲ್ಲ. ಇಷ್ಟಾಗಿಯೂ ನಾನಿನ್ನು ಯುವ ನಟಿ. ಆ ತರಹದ ಪಾತ್ರ ಮಾಡುವುದಕ್ಕೆ ಇನ್ನು ಬೇಕಾದಷ್ಟು ಸಮಯವಿದೆ. ಮೇಲಾಗಿ 'ಕೆಜಿಎಫ್' ಚಾಪ್ಟರ್‌ 2ನಲ್ಲೂ ನಾನೇ ಮದರ್. ಹಾಗಾಗಿ ನಟನೆಗೆ ಹೆಚ್ಚು ಅವಕಾಶ ಇರುವಂತಹ ಬೇರೆ ತರಹದ ಪಾತ್ರಗಳ ಸಿಕ್ಕರೆ ಒಳ್ಳೆಯದು ಅಂತ ಕಾಯುತ್ತಿದ್ದೇನೆ. ಅವಕಾಶಗಳು ಸಾಕಷ್ಟು ಬರುತ್ತಿವೆ. ನಾನು ನಿರೀಕ್ಷಿಸಿದ ಪಾತ್ರಗಳು ಈ ತನಕ ಸಿಕ್ಕಿಲ್ಲ. ಹಾಗಾಗಿ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಒಪ್ಪಿಕೊಂಡ ಧಾರಾವಾಹಿಗಳು ಮುಗಿದಿವೆ. ಈಗಾಗಲೇ ರಿಯಾಲಿಟಿ ಶೋ ನಲ್ಲಿ ನೃತ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಒಳ್ಳೆ ಸಿನಿಮಾಗಳು ಬಂದರೆ ನಾಯಕಿಯಾಗಿ ನಟಿಸೋಲು ನಾನು ಸಿದ್ಧವಾಗಿದ್ದೇನೆ ಎನ್ನುತ್ತಾರೆ ಚಂದನವನದ ಕ್ಯೂಟ್ ಚೆಲುವೆ ಅರ್ಚನಾ.

Edited By

Kavya shree

Reported By

Kavya shree

Comments