ಪುಲ್ವಾಮಾ ದಾಳಿಗೂ ನನಗೂ ಏನು ಸಂಬಂಧ, ನನ್ನನ್ಯಾಕೆ ಖಂಡಿಸುತ್ತೀರಾ : ಸಿಡಿದೆದ್ದಿದ್ಯಾಕೆ ಟೆನ್ನಿಸ್ ಸುಂದರಿ...?!!!

18 Feb 2019 10:07 AM | Entertainment
9492 Report

ಪುಲ್ವಾಮಾ ಆತ್ಮಹತ್ಯಾ ದಾಳಿಯಿಂದ ಅನೇಕ ಭಾರತೀಯ ಸೈನಿಕರು ವೀರ ಮರಣ ಹೊಂದಿದ್ದಾರೆ. ಇಂದು ಕೂಡ ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರ ಅಟ್ಟಹಾಸ ನಿಂತಿಲ್ಲ. ಪ್ರತೀಯೊಬ್ಬ ಭಾರತೀಯನ ಎದೆಯಲ್ಲೂ ಕ್ರಾಂತಿಯ ದೀವಿಗೆ ಬೆಳಗುತ್ತಿದೆ. ಪ್ರತೀಯೊಬ್ಬರಲ್ಲೂ ರಕ್ತ ಕುದಿಯುತ್ತಿದೆ. ಸೇಡಿಗೆ ಸೇಡು ಎಂಬ ಕೂಗು ಎಲ್ಲೆಡೆ ಕೇಳುತ್ತಿದೆ. ಕ್ರೀಡೆ, ಸಿನಿಮಾ ಗಳಲ್ಲೂ ಕಲಾವಿದರು ಸಿಡಿದೆದ್ದಿದ್ದಾರೆ. ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಟ್ಟಾರೆ ದೇಶ ಕಾಯೋ ಸೈನಿಕ , ಅನ್ನ ನೀಡೋ ರೈತ ನ ವಿಚಾರಕ್ಕೆ ಯಾರೇ ಬಂದರೂ ಸುಮ್ಮನಿರಲ್ಲ, ನಾವೆಲ್ಲಾ ಒಟ್ಟಾಗಿಯೇ ಇದ್ದೇವೆ ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದಾರೆ. ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪುಲ್ವಾಮಾ ದಾಳಿಗೆ ಸಿಡಿದೆದ್ದಿದ್ದಾರೆ.

ಅಂದಹಾಗೇ ಸಾನಿಯಾ ಮದುವೆಯಾಗಿರುವುದು ಪಾಕ್ ಮೂಲದ ವ್ಯಕ್ತಿಯನ್ನು. ಪಾಕ್-ಇಂಡಿಯಾ ಗಲಾಟೆ ಮಾಡದಾಗಲೆಲ್ಲಾ ಸಾನಿಯಾ ಅವರನ್ನು ಹಿಯಾಳಿಸಲಾಗುತ್ತದೆ. ಸಾನಿಯಾ ಅವರನ್ನು ಗುರಿ ಮಾಡಲಾಗುತ್ತದೆ, ಕಾರಣ ಆಕೆ ಪಾಕ್ ಸೊಸೆ ಎಂದು. ಅಂತಹವರ ವಿರುದ್ಧ ಸಾನಿಯಾ ಸಿಡಿದೆದ್ದಿದ್ದಾರೆ. ಸಾನಿಯಾ ವರಿಸಿರುವುದು ಪಾಕ್ ನ ಶೋಯೆಬ್ ಮಲ್ಲಿಕ್ ಅವರನ್ನು. ಅಂದಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಜನ ಸೆಲೆಬ್ರಿಟಿಗಳು ಇದನ್ನು ಖಂಡಿಸಬೇಕಿತ್ತು ಎನ್ನುವವರಿಗೆ ನಾನು ಈ ಟ್ವೀಟ್ ಮೂಲಕ ಹೇಳೋದೇನು ಗೊತ್ತಾ...? ದಯಮಾಡಿ ಈ ಕೃತ್ಯಗಳು ನಡೆದಾಗ ಸೆಲೆಬ್ರಿಟಿಗಳನ್ನು ಯಾಕೆ ಗುರಿ ಮಾಡುತ್ತೀರಾ..? ನಾವು ದೇಶ ಭಕ್ತರು ಅಂತಾ ಇನ್ಸ್ ಸ್ಟ್ರಾಗ್ರಾಂ ಮೂಲಕ ಯಾಕೆ ಹೇಳಿಕೊಳ್ಳಬೇಕು..? ನಿಮ್ಮ ಆಕ್ರೋಶಕ್ಕೆ, ನಿಮ್ಮ ದ್ವೇಷಕ್ಕೆ ನಮ್ಮನ್ನು ಬಿಟ್ಟರೇ ಬೇರೆ ಸಿಗುವುದಿಲ್ಲವೇ ಎಂದು ಆಕ್ರೋಶಭರಿತರಾಗಿ ಹೇಳಿದ್ದಾರೆ ಟೆನ್ನಿಸ್ ಸುಂದರಿ ಸಾನಿಯಾ."ನಾವು ಭಯೋತ್ಪಾದನೆಗಯನ್ನು ವಿರೋಧಿಸುತ್ತೇವೆ. ಎಲ್ಲರೂ ಉಗ್ರವಾದಕ್ಕೆ ವಿರುದ್ಧವೇ ಆಗಿರಬೇಕು. ಈ ದಾಳಿಯಿಂದ ತೀವ್ರ ದುಃಖವಾಗಿದೆ ನನಗೆ. ಈ ದಿನವನ್ನು ಎಂದೂ ಮರೆಯಲಾಗದು ಮತ್ತು ಕ್ಷಮಿಸಲಾಗದು. ಶಾಂತಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ" ಎಂದು ಹೇಳಿದ್ದಾರೆ. ಫೆಬ್ರವರಿ 14 ಭಾರತದ ಪಾಲಿಗೆ ಕರಾಳ ದಿನ ಎಂದಿದ್ದಾರೆ. ಈ ದಾಳಿಗೆ ನಮ್ಮಗಳ ಹೆಸರನ್ನು ಬಳಸಿಕೊಂಡು ಖಂಡಿಸುವುದು ಅಷ್ಟು ಸರಿಯಿಲ್ಲವೆಂದಿದ್ದಾರೆ.

Edited By

Kavya shree

Reported By

Kavya shree

Comments