ಗುರು ಹುತಾತ್ಮರಾದಾಗ ತನ್ನ ತಂದೆಯನ್ನು ನೆನೆದು ಬಿಕ್ಕಳಿಸಿ ಅತ್ತರಂತೆ ಬೆಲ್ಬಾಟಂ ಹುಡುಗಿ..!

18 Feb 2019 9:29 AM | Entertainment
1377 Report

ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಕೆ.ಎಂ ದೊಡ್ಡಿ ವೀರ ಯೋಧ ಗುರು ಸಾವನಪ್ಪಿದ್ದಾರೆ. ಇಡೀ ದೇಶವೇ ಹುತಾತ್ಮ ಗುರುವಿಗೆ ನಮನ ಸಲ್ಲಿಸಿದ್ದಾರೆ. ರಾಷ್ಟ್ರಾದ್ಯಂತ ಭಾರತೀಯರು ಕಂಬನಿ ಮಿಡಿದಿದ್ದಾರೆ..ಚಿತ್ರರಂಗಕ್ಕೂ ಇದೊಂದು ಭಾರೀ ದುರಂತ,ನುಂಗಲಾರದ ತುತ್ತಾಗಿದೆ. ಸದ್ಯ ಸ್ಯಾಂಡಲ್'ವುಡ್ ನ ನಟಿಯೊಬ್ಬರು ಗುರು ಸಾವಿಗೆ ಕಣ್ಣೀರು ಸುರಿಸಿದ್ದಾರೆ. ಗುರು ಸತ್ತಾಗ ತಮ್ಮ ತಂದೆಯನ್ನು ನೆನೆದು ಬಿಕ್ಕಳಿಸಿ ಅತ್ತರಂತೆ ನೀರ್ ದೋಸೆ ಹುಡುಗಿ ನಟಿ ಹರಿಪ್ರಿಯಾ ಉಗ್ರರ ದಾಳಿಗೆ ಸತ್ತ ಗುರು ಸಮಾಧಿಯನ್ನು ಭೇಟಿ ಮಾಡಿದ್ದಾರೆ.

ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯ ಗುಡಿಗೆರೆ ವೀರಯೋಧ ಗುರು ಸಮಾಧಿಗೆ ಬೆಲ್​ಬಾಟಂ ಚಿತ್ರ ತಂಡ ಭೇಟಿ ನೀಡಿ ಗೌರವ ವಂದನೆ ಸಲ್ಲಿಸಿತು. ಹುತಾತ್ಮ ಯೋಧ ಗುರು ಮನೆಯವರ ದುಃಖ ನೋಡಿ, ನಟಿ ಹರಿಪ್ರಿಯ ತಮ್ಮ ತಂದೆಯ ಅಗಲಿಕೆಯ ನೋವನ್ನು ಸ್ಮರಿಸಿಕೊಂಡು ಕಣ್ಣೀರು ಹಾಕಿದರು. ಗುರು ಸತ್ತ ಕ್ಷಣವನ್ನು, ಅವರ ಮನೆಯವರು ಅರಗಿಸಿಕೊಳ್ಳಲು ಆಗುತ್ತಿಲ್ಲ, ಅದೇ ರೀತಿ ತಮ್ಮ ತಂದೆಯೂ ಸತ್ತಾಗ ನಮಗಾದ ನೋವು ಅಷ್ಟಿಷ್ಟಲ್ಲ. ಇನ್ನು ದೇಶ ಕಾಯೋ ನಾಯಕ ಸತ್ತಾಗ, ನಮ್ಮ ಕರುಳು ಹಿಂಡಿದಂತಾಗುತ್ತದೆ ಎಂದರು. ಒಂದು ಕುಟುಂಬದಲ್ಲಿ ಯಾರನ್ನೇ ಕಳೆದುಕೊಂಡ್ರು ನೋವಾಗುತ್ತದೆ. ಆ ನೋವು ನನಗೂ ಆಗಿದೆ. ನಮ್ಮ ತಂದೆಯನ್ನು ಕಳೆದುಕೊಂಡಾಗ ನನಗೆ ಆಗಿದೆ. ನಾವೆಲ್ಲರೂ ಹುತಾತ್ಮ ಯೋಧನ ಕುಟುಂಬದ ಸದಸ್ಯರಂತೆ ಜೊತೆಗೆ ಇರಬೇಕು. ಧೈರ್ಯ ಇದ್ದಿದರೇ ಉಗ್ರರು ನೇರವಾಗಿ ಹೋರಾಟ ನಡೆಸಬೇಕಿತ್ತು. ನಾವು ಯೋಧರು ಸತ್ತಾಗ ದುಃಖಿಸಬಾರದು, ಅವರಿಗೆ ಸಲ್ಲಿಸುವ ಗೌರವ,ವಂದನೆ ನೋಡಿ ಖುಷಿಪಡಬೇಕು. ಹೆತ್ತವರಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ ಎಂದರು ಹರಿಪ್ರಿಯಾ. ನಾನು ಪುಲ್ವಾಮ ದಾಳಿಯ ಬಗ್ಗೆ ಕೇಳಿದ್ದೇನೆ.ಸಿನೆಮಾ ಶೂಟಿಂಗ್​ ಮಾಡುವಾಗ ಗಡಿಯನ್ನು ನೋಡಿದ್ದೇನೆ. ಅಂದಹಾಗೇ ನಮ್ಮನ್ನು ಕಾಯುವ ಯೋಧರು ಹುತಾತ್ಮರಾದೇ ತಡೆಯೋಕಾಗುತ್ತಾ ಹೇಳಿ, ಇನ್ನು ಯೋಧರ ತಾಯಿಯ ಪರಿಸ್ಥಿತಿ ಹೇಗಾಗಿರಬೇಕು ಹೇಳಿ ಎಂದು ದುಃಖಿಸಿದರು. ಗುರು ಪತ್ನಿಯನ್ನು ನೋಡಲಿಕ್ಕೆ ಆಗುತ್ತಿಲ್ಲ. ನನ್ನ ತಾಯಿ ಶೂಟಿಂಗ್ ಆ ಗಡಿಗೆ ಹೋಗಿ ಬಂದಾಗ ಭಯಪಟ್ಟಿದ್ದರೆಂದು ನೆನೆದು ಕಣ್ಣೀರು ಹಾಕಿದ್ದರು.

Edited By

Kavya shree

Reported By

Kavya shree

Comments