ಯೋಧ ಗುರುವಿನ ಕುಟುಂಬದ ಆಕ್ರಂದನಕ್ಕೆ ಮರುಗಿದ ಸಿಎಂ ಪುತ್ರ…

16 Feb 2019 4:36 PM | Entertainment
620 Report

ಪ್ರತೀಯೊಬ್ಬ ಯೋಧನ ಸಾವಿನ ಹಿಂದೆ ಒಬ್ಬೊಬ್ಬ ಭಾರತೀಯನ ಆಕ್ರೋಶದ ಕೂಗು ಇದೆ. ನಾವಿಲ್ಲಿ ನೆಮ್ಮದಿಯಾಗಿದ್ದೇವೆ ಎಂದರೆ ಅದಕ್ಕೆ ಕಾರಣ ಅಲ್ಲಿ ನಮ್ಮನ್ನ ಕಾಯೋ ನಮ್ಮ ನಾಯಕರು ಇರುವುದರಿಂದ. ನಿನ್ನೆ ನಡೆದ ಭಯಾನಕ ಉಗ್ರ ದಾಳಿಗೆ ನಮ್ಮ  ಅಮಾಯಕ ವೀರ ಯೋಧರು ಬಲಿಯಾಗಿದ್ದಾರೆ. ಮಂಡ್ಯ ಹಳ್ಳಿಯ ಬಡ ಕುಟುಂಬದ ಯುವಕ ಗುರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಪ್ರತೀಯೊಬ್ಬ ಭಾರತೀಯನಲ್ಲೂ ಜೀರ್ಣಿಸಿಕೊಳ್ಳಲಾಗದ ನೋವು ಕಾಡುತ್ತಿದೆ ಎಂದು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಎಂದು ಹೇಳಿದರು.

ಮಂಡ್ಯದಲ್ಲಿ ಗುರು ಅಂತ್ಯ ಸಂಸ್ಕಾರದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಅವರು, ಆಕ್ರೋಶದ ಕಿಚ್ಚು ಎಲ್ಲರಲ್ಲಿದೆ ನಿಜಕ್ಕೂ ಬೇಸರವಾಗುತ್ತಿದ್ದು, ಯೋಧರ ಋಣದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ, ಅವರ ಸಾವಿಗೆ ನಮನ ಸಲ್ಲಿಸುವುದರ ಮೂಲಕ ಬೇಸರ ವ್ಯಕ್ತಪಡಿಸಿದರು.ನಮ್ಮ ದೇಶದ ಆಸ್ತಿ ಯೋಧರು, ಅವರ ಋಣ ತೀರಿಸಲು ಆಗುವುದಿಲ್ಲ. ಸರ್ಕಾರ ಎಚ್ಚೆತ್ತುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳ ಬೇಕಿದೆ ಎಂದರು.ನಾವು ಏನೇ ಸಾಂತ್ವನ ಹೇಳಿದರೂ ಕೂಡ ಅವರ ಜೀವ ವಾಪಸ್ ತರಲು ಸಾಧ್ಯವಿಲ್ಲ. ಮೃತ ಯೋದ ಗುರುವಷ್ಟೇ ಅಲ್ಲದೇ ಅನೇಕ ಸೈನಿಕರಿಗೆ ನನ್ನ ಕೋಟಿ ನಮನಗಳು. ಯೋಧರ ಕುಟುಂಬದ ಗೋಳು ನೋಡಿದರೇ  ಹೊಟ್ಟೆಯಲ್ಲಿ ಬೆಂಕಿ ಹೊತ್ತಿಕೊಂಡಹಾಗೇ ಹಾಗುತ್ತದೆ ಎಂದು ನೋವಿನಿಂದ ಮಾತನಾಡಿದ್ದಾರೆ ನಿಖಿಲ್ ಕುಮಾರಸ್ವಾಮಿ.

Edited By

Kavya shree

Reported By

Kavya shree

Comments