ನೆನಪಿರಲಿ ಪ್ರೇಮ್ ಪ್ರತೀಕಾರ ತೀರಿಸಿಕೊಳ್ತೀವಿ ಎಂದಿದ್ಯಾರಿಗೆ...?!!!

15 Feb 2019 5:57 PM | Entertainment
695 Report

ಜಮ್ಮು-ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಅವರ ರಾಕ್ಷಸ ತನಕ್ಕೆ 44 ಮಂದಿ ಭಾರತೀಯ ಸೈನಿಕರು ಬಲಿಯಾಗಿದ್ದಾರೆ. ಈ ಕುರಿತು ಪ್ರತಕ್ರಿಯಿಸಿರೋ ನಟ ಲವ್ಲಿಸ್ಟಾರ್ ಪ್ರೇಮ್ ಹೇಯ ಕೃತ್ಯದ ಬಗ್ಗೆ ಕಂಬನಿ ಮಿಡಿದಿದ್ದಾರೆ. ದೇಶಕ್ಕಾಗಿ ಪ್ರಾಣತೆತ್ತ ಅನೇಕ ಯೋಧರಿಗೆ ಕೋಟಿ ನಮನಗಳು. ಇದಕ್ಕೆ ನಾವು ಉತ್ತರ ಕೊಡಲೇ ಬೇಕು. ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎಂದು ರಿಯಾಕ್ಟ್ ಮಾಡಿದ್ದಾರೆ. ಪುಲ್ವಾಮಾದ ಆವಂತಿಪೋರಾದ ಗೋರಿಪುರ ಪ್ರದೇಶದಲ್ಲಿ ಸಾಗುತ್ತಿದ್ದ ಉಗ್ರರು ನಡೆಸಿದ ದಾಳಿಯಲ್ಲಿ 44 ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದಾರೆ. ಬರೋಬ್ಬರಿ 18 ವರ್ಷಗಳ ಬಳಿಕ ನಡೆದ ಅತಿ ದೊಡ್ಡ ದಾಳಿ ಇದಾಗಿದೆ ನಾವೆಲ್ಲರೂ ಒಂದಾಗಬೇಕು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದರು ಪ್ರೇಮ್.

ದೇಶದಲ್ಲಿ ಉಗ್ರರು ನಡೆಸಿದ ಅತಿದೊಡ್ಡ ಪೈಶಾಚಿಕ ಕೃತ್ಯ ಇದಾಗಿದೆ. ಜಮ್ಮು ಕಾಶ್ಮೀರದ ಪುಲ್ವಾಮಾ ಸೆಕ್ಟರ್​ನ ಅವಂತಿಪೂರಾದಲ್ಲಿ ಸಿಆರ್​ಪಿಎಫ್​ನ 4ನೇ ಬೆಟಾಲಿಯನ್​ಗೆ ಸೇರಿದ 78 ವಾಹನಗಳಲ್ಲಿ ಯೋಧರು ಪ್ರಯಾಣ ಬೆಳೆಸಿದ್ದರು. 2547 ಯೋಧರಿದ್ದ ಈ ವಾಹನ ಜಮ್ಮುವಿನಿಂದ ಶ್ರೀನಗರದ ಕಡೆ ಪ್ರಯಾಣ ಬೆಳೆಸಿತ್ತು.ಈ ಪೈಶಾಚಿಕ ಕೃತ್ಯದಿಂದ ನಾನು ಮನನೊಂದಿದ್ದೇನೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ತುಂಬಲೀ ಭಗವಂತ ಎಂದಿದ್ದಾರೆ. ಇದೇ ವೇಳೆ ಸ್ಕಾರ್ಪಿಯೋದಲ್ಲಿ ಇದೇ ವೇಳೆ ಸ್ಕಾರ್ಪಿಯೋದಲ್ಲಿ ಸ್ಫೋಟಕ ವಸ್ತುಗಳ ಸಮೇತ ಬಂದಿದ್ದ ಉಗ್ರರು ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಬರೋಬ್ಬರಿ 350 ಕೆ.ಜಿ ತೂಕದ ಸ್ಫೋಟಕ  ವಸ್ತುಗಳನ್ನ ತುಂಬಿದ್ದ ಈ ವಾಹನ ಡಿಕ್ಕಿ ಹೊಡೆಯುತ್ತಿದ್ದಂತೇ ಸ್ಫೋಟಗೊಂಡಿದೆ.

Edited By

Kavya shree

Reported By

Kavya shree

Comments