ಪ್ರೇಮ್ ಬಗ್ಗೆ ಕೇಳಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ್ರು ಕ್ರೇಜಿಕ್ವೀನ್ ರಕ್ಷಿತಾ : ಯಾಕೆ ಗೊತ್ತಾ…?!!!

15 Feb 2019 4:34 PM | Entertainment
2496 Report

ಯಾವಾಗಲು ನಗು ನಗುತ್ತಾ ಇದ್ದ ನಟಿ ರಕ್ಷಿತಾ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡದೇ ಸಿಟ್ಟಾದರು. ಪ್ರೇಮ್ ಅವರ ಹೊಸ ಸಿನಿಮಾ ಬಗ್ಗೆ ರಕ್ಷಿತಾ ಅವರನ್ನು ಕೇಳಿದಾಗ ದಿಢೀರ್ ಗರಂ ಆದರು. ಅಂದಹಾಗೇ ದಿ ವಿಲನ್ ಸಿನಿಮಾ ಬಂದಾಗ ಹ್ಯಾಟ್ರಿಕ್ ಡೈರೆಕ್ಟರ್ ನಟ, ನಿರ್ದೇಶಕ ಪ್ರೇಮ್ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮ್  ಅವರಿಗೆ ನೆಗಟೀವ್ ಕಮೆಂಟ್ ಬಂದವು. ಅದಾದ ಮೇಲೆ ಪ್ರೇಮ್ ಕೂಡ ಕೆಲವರ ವಿರುದ್ಧ ದೂರು ಕೂಡ ಕೊಟ್ಟಿರುವ ವಿಚಾರ ಹಳೆಯದು.

ಆದರೆ ಇತ್ತೀಚಿಗೆ ಪ್ರೇಮ್ ಸಂಬಂಧ ಹೊಸ ಸುದ್ದಿಯೊಂದು ಹೊರಬಿತ್ತು.  ಆರು ಜನ ಸ್ಟಾರ್ ಹೀರೋಗಳನ್ನು ಹಾಕಿಕೊಂಡು ಪ್ರೇಮ್ ಮತ್ತೆ ಸಿನಿ ಅಡ್ಡಕ್ಕೆ ಇಳಿಯುತ್ತಿದ್ದಾರೆ.ಎಂಬ ಸುದ್ದಿ ಹೊರ ಬಂತು. ಈ ಬಗ್ಗೆ ಪತ್ರಕರ್ತರು ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದ ರಕ್ಷಿತಾ ಅವರಿಗೆ ಪ್ರೇಮ್ ಕುರಿತ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ರಕ್ಷಿತಾ ಸರಿಯಾಗಿ ಉತ್ತರ ಕೊಡದೇ  ಸಿಡಿಮಿಡಿಗೊಂಡಿದ್ದಾರೆ.ಮಾಧ್ಯಮಗಳಲ್ಲಿ ಪ್ರೇಮ್ ವಿರುದ್ಧವಾಗಿ ಬಂದ ಕಮೆಂಟ್ಗಳನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ. ನಾನು ಪ್ರೇಮ್ ಸಿನಿಮಾ ವಿಚಾರವಾಗಿ ಯಾವ ಪ್ರಶ್ನೆಗಳಿಗೂ ಉತ್ತರ ಕೊಡಲು ಸಿದ್ಧವಿಲ್ಲ. ನೀವು ಏನೇ ಇದ್ದರೂ ಪ್ರೇಮ್ ಬಳಿಯೇ ಉತ್ತರ ತೆಗೆದುಕೊಳ್ಳಬೇಕು ಎಂದರು. ನಾನು ಮಾಧ್ಯಮಕ್ಕೆ ಗೌರವ ಕೊಡುತ್ತೇನೆ, ನಿಮಗೆ ಗೌರವ ಕೊಡುತ್ತೇನೆ, ಆದರೆ ನಮ್ಮನ್ನು ಸ್ವಲ್ಪ ಗೌರವದಿಂದ ಕಾಣಿರಿ, ನಮ್ಮನ್ನು ಹಿಯಾಳಿಸುವುದು ಬೇಡ, ನಾನು ಪ್ರೇಮ್ ಪತ್ನಿಯಾಗಿ, ಫ್ಯಾಮಿಲಿ ಸದಸ್ಯಳಾಗಿ  ಒಂದಷ್ಟು ವಿಚಾರವಾಗಿ ಬೇಸರಿಸಿಕೊಂಡಿದ್ದೇನೆ. ಸಿನಿಮಾ ವಿಚಾರವಾಗಿ ಏನೇ ಮಾತನಾಡೋದಿದ್ದರೂ ಅಥವಾ ಪ್ರಶ್ನೆಗಳನ್ನು ಕೇಳೊದಿದ್ರೂ  ನೀವು ಅವರನ್ನೇ ಕೇಳಬೇಕು ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ರು. ಪತ್ರಕರ್ತರ ಪ್ರಶ್ನೆಗಳನ್ನು ತಾಳ್ಮೆಯಿಂದ  ಆಲಿಸಿಕೊಳ್ಳದ ರಕ್ಷಿತಾಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮ್ ವಿಚಾರವಾಗಿ ಬಂದ ಕಮೆಂಟ್’ನಿಂದ ಸಾಕಷ್ಟು ಬೇಸರದಲ್ಲಿರುವುದು ಕಂಡು ಬಂತು.

Edited By

Kavya shree

Reported By

Kavya shree

Comments