ಕೊನೆಗೂ ದರ್ಶನ್’ಗಿಂತ ದೊಡ್ಡ ಸ್ಟಾರ್’ನ ಕರೆಸಿಬಿಟ್ರು ಪ್ರಥಮ್..!! ಆ ದೊಡ್ಡ ಸ್ಟಾರ್ ಯಾರ್ ಗೊತ್ತಾ..?

15 Feb 2019 3:53 PM | Entertainment
952 Report

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ತಮ್ಮ ನಟ ಭಯಂಕರ ಚಿತ್ರದ ಪೋಸ್ಟರನ್ನು ದರ್ಶನ್ ಗಿಂತ ದೊಡ್ಡಸ್ಟಾರ್ ಬಂದು ರಿಲೀಸ್ ಮಾಡ್ತಾರೆಂದು ಹೇಳಿ ಡಿ ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಗೊತ್ತೇ ಇದೆ. ಇದೀಗ ತಮ್ಮ ಮಾತಿನಂತೆ ದರ್ಶನ್ ಗಿಂತ ದೊಡ್ಡ ಸ್ಟಾರ್ ಕರೆದುಕೊಂಡು ಬಂದು ಡಿ ಬಾಸ್ ಅಭಿಮಾನಿಗಳ ಕೋಪವನ್ನು ತಣ್ಣಗೆ ಮಾಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ಒಂದಲ್ಲ ಒಂದು ವಿಷಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.. ಇದೀಗ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಸುದ್ದಿಯಲ್ಲಿದ್ದಾರೆ.. ಇಂಡಸ್ಟ್ರಿಯಲ್ಲಿರುವ ಬಹುತೇಕ ಎಲ್ಲ ನಟರ ಜೊತೆಯಲ್ಲೂ ಪ್ರಥಮ್ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.

ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿಯೂ ಪ್ರಥಮ್ ಟಚ್ ನಲ್ಲಿ ಇದ್ದಾರೆ. ಪ್ರಥಮ್ ಅಭಿನಯಿಸಿದ್ದ 'ಎಂಎಲ್‌ಎ' ಚಿತ್ರದ ಆಡಿಯೋ ಲಾಂಚ್ ಮಾಡಿದ್ದು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ.  ಪ್ರಥಮ್ ನಟಿಸಿ, ನಿರ್ದೇಶನ ಮಾಡಿದ ನಟಭಯಂಕರ' ಚಿತ್ರದ ಪೋಸ್ಟರ್ ರಿಲೀಸ್ ಮಾಡಲು ''ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್ ಬರ್ತಾರೆ'' ಎಂದು ಹೇಳಿಕೊಂಡಿದ್ದರು... ಇದು ದರ್ಶನ್ ಅಭಿಮಾನಿಗಳನ್ನ ತಾಳ್ಮೆ ಕೆಡಿಸಿದೆ. ಆದ್ರೆ, ಪ್ರಥಮ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ  ಕೂಲ್ ಆಗಿ ಇದ್ದಾರೆ..ಪ್ರಥಮ್ ಮತ್ತು ದರ್ಶನ್'ನಟಭಯಂಕರ' ಚಿತ್ರದ ಪೋಸ್ಟರ್ ರಿಲೀಸ್ ಮಾಡಲು 'ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್' ಬರ್ತಾರೆ ಎಂದು ಹೇಳುತ್ತಿರುವ ಪ್ರಥಮ್, ಯಾರಿಂದ ಪೋಸ್ಟರ್ ಬಿಡುಗಡೆ ಮಾಡಿಸಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ... ದರ್ಶನ್ ತಾಯಿ ಮೀನಾ ತೂಗುದೀಪ್ ರವರನ್ನು ಕರೆದುಕೊಂಡು ಬಂದು ನಟಭಯಂಕರ ಪೋಸ್ಟರನ್ನು ರಿಲೀಸ್ ಮಾಡಿದ್ದಾರೆ. ಪ್ರಥಮ್ ನನ್ನ ಮಗನಿದ್ದಂತೆ ಎಂದು ಮೀನಾ ತೂಗುದೀಪ್ ಆಶೀರ್ವಾದ ಮಾಡಿದ್ದಾರೆ. ನಟಭಯಂಕರ ಚಿತ್ರದಲ್ಲಿ ಪ್ರಥಮ್ ನಾಯಕನಾಗಿ ನಟಿಸಿದ್ದಾರೆ. ನಿರ್ದೇಶನವನ್ನೂ ಇವರೇ ಮಾಡಿದ್ದಾರೆ.

Edited By

Manjula M

Reported By

Manjula M

Comments