ಕೇವಲ 50 ರೂ.ಗೆ ಕೊಲೆಯಾದ ಆ ಕೋಟ್ಯಾಧಿಪತಿ ನಟಿ ಯಾರು ಗೊತ್ತಾ...?!!!

15 Feb 2019 3:23 PM | Entertainment
350 Report

ಈ ನಟಿ ಐಷರಾಮಿ ಜೀವನ ನಡೆಸುತ್ತಿದ್ದವಳು. ಕೋಟಿ ಕೋಟಿ ಸಂಪಾದಿಸುತ್ತಿದ್ದವಳು, ಈಕೆ ವಾಸಮಾಡುತ್ತಿದ್ದ ಮನೆ ಏನಿಲ್ಲವೆಂದರೂ 30 ಕೋಟಿಗೂ ಹೆಚ್ಚು ಬೆಲೆ ಬಾಳುವಂತದ್ದು. ಆದರೆ ವಿಪರ್ಯಾಸವೆಂದರೆ ಕೇವಲ 50 ರೂಪಾಯಿಗೆ ಈ ನಟಿ ಕೊಲೆಯಾಗಿದ್ದಾಳೆ ಎಂದರೆ ನಂಬುವಿರಾ…! ಆದರೆ ಇದು ನಂಬಲೇ ಬೇಕಾದ ಸತ್ಯ.  ಆದರೆ ಆತ ಆಕೆಯನ್ನು ಕೊಲೆ ಮಾಡಿದ್ದಾದ್ರು ಯಾಕೆ…?  ಅಂದಹಾಗೇ ಈಕೆ ಕೇವಲ ನಟಿ ಅಷ್ಟೇಅಲ್ಲ, ಫ್ಯಾಷನ್ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿದ್ದರು. ದೆಹಲಿಯ ಬಂಗಲೆಯೊಂದರಲ್ಲಿ ವಾಸ ಮಾಡುತ್ತಿದ್ದಳು. ಈ ನಟಿಯ ಹೆಸರು ಮಾನ ಲಖಾನಿ,  ಖ್ಯಾತ ಫ್ಯಾಷನ್  ಡಿಸೈನರ್ ಆಗಿದ್ದರು.

 ಅಂದಹಾಗೇ ಮಾನ ಲಖಾನಿ ಅವರು ಒಬ್ಬರೇ ಟೈಲರ್ ಬಳಿಯೇ  ಬಟ್ಟೆ ಕೊಡುತ್ತಿದ್ರು. ಆತನ ಹೆಸರು ರಾಹುಲ್ ಅನ್ವರ್ ಅಂತಾ. ಹಲವು ತಿಂಗಳಿಂದ ಮಾಲಾ ಅವರು ಆ ಟೈಲರ್’ಗೆ  ಹಣ ಕೊಟ್ಟೇ ಇರಲಿಲ್ವಂತೆ.  ಆ ದಿನ ಮಾಲಾ ಅಂಗಡಿಗೆ ಹೋಗಿ ಬಟ್ಟೆ ಕೇಳಿದ್ದಾರೆ.ಅನ್ವರ್ ಒಂದೊಂದು ಬಟ್ಟೆಗೆ 50 ರೂ ಕಮಿಷನ್ ಕೊಡುವಂತೆ ಮಾಲಾ ಅವರನ್ನು ಪೀಡಿಸುತ್ತಿದ್ದನಂತೆ. ಇದಕ್ಕೆ ಒಪ್ಪಿರಲಿಲ್ವಂತೆ ಮಾಲಾ. ಇದರಿಂದ ಕುಪಿತಗೊಂಡ ಅನ್ವರ್  ತನ್ನ ಇಬ್ಬರು ಸಂಬಂಧಿಕರೊಂದಿಗೆ ಮಾಲಾ ವಾಸವಿದ್ದ ಬಂಗಲೆಗೆ ಹೋಗಿ ಮಾಲಾಳೊಂದಿಗೆ ಜಗಳ ಮಾಡಿದ್ದಾನೆ.

ಆಕೆ ಮುಖಕ್ಕೆ ಕಬ್ಬಣದ ರಾಡ್ ನಿಂದ ಹೊಡೆದಿದ್ದಾನೆ. ಆಕೆಯ ಸಹಾಯಕ್ಕೆ ಬಂದ  ಮನೆ ಕೆಲಸದಾಕೆಯನ್ನು  ಕೂಡ ಕೊಲೆ ಮಾಡಿದ್ದಾನೆ. ಇದಾದ ನಂತರ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.ವಿಚಿತ್ರ ಏನಪ್ಪಾ ಅಂದ್ರೆ ಕೆಲವು ದಿನಗಳ ಹಿಂದೆ ಟೈಲರ್ ಅನ್ವರ್, ಹುಡುಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂಬ ಆರೋಪಕ್ಕೆ ಸಂಬಂಧಸಿಂತೇ ಜೈಲಿನಲ್ಲಿದ್ದ. ಆದರೆ ಇದೇ ಮಾಲಾ ಅವರು ಅನ್ವರ್ ನನ್ನು ಬಿಡಿಸಿಕೊಂಡು ಬಂದಿದ್ದರಂತೆ. ಆದರೆ ಇದೀಗ ಹಾವಿಗೆ ಹಾಲೆರೆಯೋ ಎಂಬ ಮಾತಿನಂತೆ ತನಗೆ ಜೀವನ ಕೊಟ್ಟ ನಟಿ ಮಾಲಾ ಅವರನ್ನು ಕೊಲೆ ಮಾಡಿದ್ದಾನೆ. ಸದ್ಯ ಪೊಲೀಸ್ ಅತಿಥಿಯಾಗಿದ್ದಾನೆ.

 

Edited By

Kavya shree

Reported By

Kavya shree

Comments