ದೇಶವೇ ಕಂಬನಿ ಮಿಡಿಯುವಾಗ ಪಿಗ್ಗಿ ಕಿಸ್ಸಿಂಗ್ ಫೋಟೋ ಹಾಕಿ ಟ್ರೋಲ್ ಆದ್ಲು...!!!

15 Feb 2019 1:33 PM | Entertainment
251 Report

ಕೆಲ ಸೆಲೆಬ್ರಿಟಿಗಳು ಸಾಮಾಜಿಕ ವಲಯದಲ್ಲಿ  ಬದುಕುತ್ತಿದ್ದೇವೆ ಎಂಬುದನ್ನು ಮರತೇ ಬಿಡುತ್ತಾರೆ. ಇನ್ನೂ ಕೆಲವರು  ತಾವು ಮಾಡುವ ಕೆಲಸದಿಂದ ಅಚಾನಕ್ ಆಗಿ ಕೆಲವರ ಬಾಯಿಗೆ ಆಹಾರವಾಗ್ತಾರೆ. ಅಂದಹಾಗೇ ಖ್ಯಾತ ನಟಿಯೊಬ್ಬರು ತಾವು  ಮಾಡಿರುವ ಪೋಸ್ಟ್ ನಿಂದಾಗಿ ಸಾಮಾಜಿಕ ಜಹಾತಾಣಗಳಲ್ಲಿ ಟ್ರೋಲ್ ಆಗ್ತಿದ್ದಾರೆ. ಬಿ ಟೌನ್ ಸುಂದರಿ ಹಾಲಿವುಡ್ ಸೊಸೆ ಪ್ರಿಯಾಂಕ ಚೋಪ್ರಾ  ಮಾಡಿರುವ ಅಚಾತುರ್ಯದಿಂದ ನಟಗಟೀವ್ ಕಮೆಂಟ್ಸ್ ಗೆ ಒಳಗಾಗಿದ್ದಾರೆ.

ನಿನ್ನೆ ಜಮ್ಮು ವಿನಲ್ಲಿ ಭಯೋತ್ಪಾದಕರ ದಾಳಿಯಿಂದ  ಭಾರತೀಯ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಡೀ ದೇಶವೇ ದೇಶ ಕಂಬನಿ ಮಿಡಿಯುತ್ತಿದ್ದರೇ ನಟಿ ಪ್ರಯಾಂಕ ಚೋಪ್ರಾ ಅವರು ರೊಮ್ಯಾಂಟಿಕ್ ಫೋಟೋವೊಂದನ್ನು ಅಪ್ ಲೋಡ್ ಮಾಡುವುದರ ಮೂಲಕ ಟ್ರೋಲ್ ಆಗಿದ್ದಾರೆ.ಪತಿ ನಿಕ್ ಜೊತೆಗಿರುವ ರೊಮ್ಯಾಂಟಿಕ್ ಫೋಟೋವನ್ನು ಇನ್ಸ್ ಟ್ರಾಗ್ರಾಂ ಗೆ ಪೋಸ್ಟ್ ಮಾಡಿದ್ದಾರೆ.ಪ್ರಿಯಾಂಕಾ ಈ ಫೋಟೋ ಟ್ರೋಲರ್ ಬಾಯಿಗೆ ಆಹಾರವಾಗಿದೆ. ಪ್ರಿಯಾಂಕಾ, ನಿಕ್ ತೋಳಿನಲ್ಲಿದ್ದು, ಇಬ್ಬರು ರೋಮ್ಯಾಂಟಿಕ್ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಫೋಟೋ ಜೊತೆ ಪ್ರಿಯಾಂಕಾ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ್ದಾಳೆ. ಪ್ರಿಯಾಂಕಾ ಅಭಿಮಾನಿಗಳಿಗೆ ಈ ಫೋಟೋ ಇಷ್ಟವಾಗಿದೆ. ಆದ್ರೆ ಫೋಟೋ ಹಾಕಿದ ಸಮಯ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಗುರುವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ 44 ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾಗಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರಿಯಾಂಕಾ ಹಾಕಿದ ಫೋಟೋಕ್ಕೆ ಅನೇಕರು ಕಿಡಿಕಾರಿದ್ದಾರೆ. ನಾಚಿಕೆಯಿಲ್ಲದವಳು, ಅಸಂಬದ್ಧ ಎಂಬ ಪದಗಳ ಬಳಕೆ ಮಾಡಿದ್ದಾರೆ.

Edited By

Kavya shree

Reported By

Kavya shree

Comments