ಕವಿತಾ ಕಂಡರೆ ಉರಿದುಬೀಳ್ತಿರೋದ್ಯಾಕೆ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ…?

15 Feb 2019 11:47 AM | Entertainment
2432 Report

ಬಿಗ್’ಬಾಸ್ ಮುಗಿದ ನಂತರವೂ ಆ್ಯಂಡಿ-ಕವಿತಾ ವಿವಾದ ಮತ್ತಷ್ಟು ಭುಗಿಲೇಳುತ್ತಿದೆ. ಈಗಾಗಲೇ ಆ್ಯಂಡಿ ವಿರುದ್ಧ  ಬಿಗ್ ಬಾಸ್ ಸ್ಪರ್ಧಿ ಕವಿತಾ  ಆ್ಯಂಡಿ ತನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದೂರು ಕೂಡ ನೀಡಿದ್ದಾರೆ. ಈ ಬಗ್ಗೆ  ಅನೇಕ ಸಂದರ್ಶನಗಳಲ್ಲಿ ಕವಿತಾ ಮತ್ತು ಆ್ಯಂಡಿ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.  ಆದರೆ ಈ ಬಗ್ಗೆ  ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಏನ್  ರಿಯಾಕ್ಟ್ ಮಾಡಿದ್ದಾರೆ ಗೊತ್ತಾ?.

ಅಂದಹಾಗೇ ಬಿಗ್ ಬಾಸ್ ಮನೆಯಲ್ಲಿ ಕಾಂಟ್ರೋವರ್ಸಿಗೆ ಒಳಗಾಗಿದ್ದ  ಮತ್ತೊಬ್ಬ ಸ್ಪರ್ಧಿ  ಅಕ್ಷತಾ ,ಕವಿತಾ  ಆ್ಯಂಡಿ ವಿರುದ್ಧ ಮಾಡಿರುವ ಆರೋಪವನ್ನು ಅಲ್ಲೆಗೆಳೆದಿದ್ದಾರೆ. ಅವಳಿಗೆ ಮಾಡೋಕೆ ಬೇರೆ ಕೆಲಸ ಇಲ್ಲಿದಕ್ಕೆ ಅವಳು ಹೀಗೆಲ್ಲಾ ಮಾಡ್ತಿದ್ದಾಳೆ. ಆ್ಯಂಡಿ ವಿರುದ್ಧ ಆ ಆರೋಪ ಮಾಡಿರೋದು ಖಂಡಿತಾ ಸರಿಯಿಲ್ಲ.  ಆ್ಯಂಡಿ ಬಿಗ್ ಬಾಸ್ ಮುಗಿದ   ಮೇಲೆ ಒಂದಷ್ಟು ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸೀರಿಯಲ್ ಮತ್ತು ಶೋ ಗಳಲ್ಲಿ  ಕೆಲಸ ಮಾಡ್ತಿದ್ದಾರೆ. ಇದರ ನಡುವೆ ಕವಿತಾಗೆ ಎಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಇದೆಲ್ಲಾ ಆಕೆ ಮಾಡ್ತಿರೋದು ಬಿಗ್ಬಾಸ್ ಮನೆಯೊಳಗಿನ ಸೇಡಿಗೋ ಅಥವಾ ಅವಳ ಪಬ್ಲಿಸಿಟಿಗೋ ಗೊತ್ತಿಲ್ಲ.

ಆಕೆ ಚಾನಲ್ ಬಗ್ಗೆ ಕೂಡ ಮಾತನಾಡಿದ್ದಾರೆ. ಆಕೆ ಕಣ್ಣಿಗೆ ಕಾಣುವಷ್ಟು ಒಳ್ಳೆ ಹುಡುಗಿ ಏನಲ್ಲ. ಪಬ್ಲಿಸಿಟಿಗಾಗಿ ಆಕೆ ಏನು ಬೇಕಾದ್ರೂ ಮಾಡ್ತಾಳೆ. ಆ್ಯಂಡಿ ಮಜಾ ಟಾಕೀಸ್ ನಲ್ಲಿ ನನ್ನನ್ನು ಬೈಯ್ದಿದ್ದಾನೆ ಅಂತಾಳೆ. ಆದರೆ ಅವನಿಗೆ  ಬೇರೆ ಕೆಲಸ ಇಲ್ಲವಾ..? ಅವನಿಗೂ ಅಕ್ಕ-ತಂಗಿಯರು ಇದ್ದಾರೆ. ಅವನ ಮೇಲೆ ಲೈಂಗಿಕ ಕಿರುಕುಳ ಎಂದು ಗಂಭೀರ ಆರೋಪ ಮಾಡಿದ್ದೂ ಸರಿಯಿಲ್ಲ. ಎಲ್ಲಾ ಓಕೆ ಆ್ಯಂಡಿ ಮಾಡಿದ್ದೂ ಸರಿಯಿಲ್ಲವೆಂದಾದರೇ ಇಷ್ಟು ದಿನ ಕವಿತಾ ಏನ್ ಮಾಡ್ತಿದ್ಳು..ಕವಿತಾಗೆ ಕೆಲಸ ಇಲ್ಲ. ಆಕೆ ಹೀಗೆಲ್ಲಾ ಮಾಡ್ತಿದ್ದಾಳೆ ಎಂದರು. ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಜನ ಅವರವರಲ್ಲಿ ಮನಬಸ್ತಾಪ ಮೂಡೋಕೆ ಮುಖ್ಯ ಪಾತ್ರ ಕವಿತಾದ್ದೇ ಎಂದರು, ತನ್ನ ವಿರುದ್ಧವೂ ಮೊದಲ ಗಾಸಿಪ್ ಬೆಂಕಿ ಹಚ್ಚಿದ್ದೂ ಆಕೆ.

Edited By

Kavya shree

Reported By

Kavya shree

Comments