ಹುತಾತ್ಮ ಯೋಧರ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್..!

15 Feb 2019 10:54 AM | Entertainment
333 Report

ನಿನ್ನೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯ ದಾಳಿಯಿಂದ 44 ಮಂದಿ ಯೋಧರು ಸಾವನಪ್ಪಿದ್ದಾರೆ. ಸಾವಿನ ಸುದ್ದಿಯಿಂದ ನನಗೆ ತುಂಬಾ ನೋವಾಗಿದೆ. ಯೋಧರ ಸಾವಿನಿಂದ ಅವರ ಕುಟುಂಬದವರಿಗೆ ತುಂಬಾ ದುಃಖವಾಗಿದೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಗಳಿಗೆ ದುಃಖ ಭರಿಸುವ  ಶಕ್ತಿ ತುಂಬಲಿ ಆ ಭಗವಂತ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮುಖಾಂತರ ತಿಳಿಸಿದ್ದಾರೆ. ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಮೂಲಕ ಭಯತ್ಪಾದನೆಯ ಬಗ್ಗೆಯೂ ಮಾತನಾಡಿದ್ದಾರೆ.

ಭಯೋತ್ಪಾದನೆ ಯಾವತ್ತು ಮಾನವ ಕುಲಕ್ಕೆ ಅಪಾಯಕಾರಿ, ಅದನ್ನು ಸಮಾಜದಿಂದ ಬುಡ ಸಹಿತ ಕಿತ್ತು ಹಾಕಬೇಕು.'' ಎಂದು ನಟ ದರ್ಶನ್ ಟ್ವೀಟ್ನಲ್ಲಿ  ಹೇಳಿದ್ದಾರೆ.  ನಿನ್ನೆ ಪುಲ್ವಾಮಾ ಉಗ್ರದಾಳಿಯಿಂದ ಭಾರತದ 44 ಯೋಧರು ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ ಪ್ರಾಣ ನೀಡಿದ ಯೋಧರಿಗೆ ದರ್ಶನ್ ನಮನ ಸಲ್ಲಿಸಿದ್ದಾರೆ. ಭಯೋತ್ಪಾದನೆಯನ್ನು ಸಮಾಜದಿಂದ ಓಡಿಸಬೇಕು ಎಂದು ಹೇಳಿದ್ದಾರೆ. ದೇಶಾದ್ಯಂತ ಯೋಧರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಭಯೋತ್ಪಾದಕರನ್ನು ಸದೆಬಡಿಯಬೇಕೆಂದು ಮಾಜಿ ಸೈನಿಕರು ಅಭಿಪ್ರಾಯ ವ್ಯಕ್ತಪಡಿಸಿಸಿದ್ದಾರೆ. ಈಗಾಗಲೇ ತನಿಖಾ ದಳ ಚುರುಕುಗೊಂಡಿದ್ದು ಒಂದಷ್ಟು ಹಳ್ಳಿಗಳಲ್ಲಿ ಇನ್ನಷ್ಟು ಭಯೋತ್ಪಾದಕರು ಸೇರಿರಬಹುದೆಂಬ ಸಂಶಯ ಕೂಡ ಹೊರ ಬಿದ್ದಿದೆ.ನಿನ್ನೆ ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬ ಸ್ಥಳದಲ್ಲಿ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿ ಯೋಧರನ್ನು ಬಲಿ ತೆಗೆದುಕೊಂಡಿದ್ದಾನೆ.

Edited By

Kavya shree

Reported By

Kavya shree

Comments