ರಾಕಿಂಗ್ ಸ್ಟಾರ್ ಯಶ್ ನನಗೆ ಪರ್ಫೆಕ್ಟ್ ಅಲ್ಲ ಅಂತ ರಾಧಿಕಾ ಹೇಳಿದ್ಯಾಕೆ..!!?

15 Feb 2019 9:42 AM | Entertainment
1041 Report

ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ಒಂದು ಮುದ್ದಾದ ಮಗುವಿನೊಂದಿಗೆ ಖುಷಿಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದ್ದಕ್ಕಿದ್ದ ಹಾಗೇ ರಾಧಿಕಾ ಪಂಡಿತ್ ಯಶ್ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಅದ್ಯಾಕೆ ಈ ಮಾತು ಹೇಳಿದ್ದಾರೆ..? ಹಾಗಿದ್ರೆ ಯಶ್ ಮತ್ತು ರಾಧಿಕಾ ಸಂಬಂಧ ಚೆನ್ನಾಗಿದ್ಯಾ ಅನ್ನೋ ಅನುಮಾನ ಬರೋದು ಸಹಜ.  ಆದರೆ ಈ ಮಾತು ಹೇಳಿರೋದಂತೂ ನಿಜ. ಹಾಗಿದ್ರೆ ಹಾಗಿದ್ದಾದ್ರು ಏನು ಅಂತೀರಾ… ಮುಂದೆ ಓದಿ.

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಮೇಡ್ ಫಾರ್ ಈಚ್ ಅದರ್ ಎಂದು ಕೋಟ್ಯಾಂತರ ಅಭಿಮಾನಿಗಳು ಹೇಳ್ತಾರೆ. ಮದುವೆಗೂ ಮುಂಚೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾಗ ''ಇಬ್ಬರದ್ದು ಜೋಡಿ ಚೆನ್ನಾಗಿದೆ, ಮದ್ವೆ ಆದ್ರೆ ಚೆನ್ನಾಗಿರುತ್ತೆ'' ಎಂದು ಆಸೆ ಪಟ್ಟವರು ಇದ್ದಾರೆ. ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸ್ಯಾಂಡಲ್’ವುಡ್ ಸಿಂಡ್ರೆಲಾ ಮಿಸಸ್ ರಾಮಾಚಾರಿ ಆದ್ರು.  ಕೋಟ್ಯಾಂತರ ಹಗುಡುಗಿಯರ ಮನಗೆದ್ದ  ಸ್ಟೈಲ್ ಕಿಂಗ್ ಯಶ್ ರಾಧಿಕಾ ಪ್ರೇಮತೆಕ್ಕೆಗೆ ಬಿದ್ದರು. ಇಬ್ಬರ ಮದುವೆ ಕೂಡ ಭರ್ಜರಿ ಆಗಿಯೇ ಆಯ್ತು. ಇಬ್ಬರ ಪೇರ್ ನೋಡಿ ಸ್ಯಾಂಡಲ್ವುಡ್’, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಅಂತಾನೆ ಫೇಮಸ್ ಆಗಿದ್ದಾರೆ.

ರಾಕಿಂಗ್ ದಂಪತಿ ಮದುವೆ ಆಗಿ ಎರಡು ವರ್ಷ ಆಗಿದೆ.ಇದೀಗ ರಾಧಿಕಾ , ನಾನು ಯಶ್ ಪರ್ಫೆಕ್ಟ್ ಜೋಡಿ ಅಲ್ಲ ಎಂದು ಎಲ್ಲರ ಹುಬ್ಬೇರುವಂತೇ ಮಾಡಿದ್ದಾರೆ. ಈ ಮಾತು ಹೇಳಿ ಪ್ರೇಮಿಗಳ ದಿನಕ್ಕೆ ಶುಭಾಷಯ ತಿಳಿಸಿದ್ದಾರೆ. ತಮ್ಮ  ಫೇಸ್ಬುಕ್ ಖಾತೆಯಲ್ಲಿ ವಿಶ್ ಮಾಡಿರುವ ರಾಧಿಕಾ ನಮ್ಮದು ಪರ್ಫೇಕ್ಟ್ ಜೋಡಿ ಅಲ್ಲ, ನಮ್ಮ ಮಧ್ಯೆ ಜಗಳ, ವಾದ, ಭಿನ್ನಾಭಿಪ್ರಾಯ, ಮುನಿಸು ಕೋಪ, ದ್ವೇಷ ಎಲ್ಲವೂ ಇದೆ. ಆದರೆ ಇದಕ್ಕೂ ಮೀರಿದ ಪ್ರೀತಿ ನಮ್ಮ ಮಧ್ಯೆ ಇದೆ ಎಂದು ಹೇಳಿಕೆಗೆ ಟ್ವಿಸ್ಟ್ ನೀಡಿದ್ದಾರೆ. ಅಂದಹಾಗೇ ರಾಧಿಕಾ ಮಾತಿನ ಮರ್ಮ ನಮ್ಮ ಮಧ್ಯೆ ಏನಿದ್ದರೂ ಅದು ಪ್ರೀತಿ ಮುಂದೆ ಕ್ಷುಲ್ಲವೆಂದು ಹೇಳಿದ್ದಾರೆ. ರಾಧಿಕಾ ,ಮತ್ತು ಯಶ್ ಪ್ರೀತಿ ಎಷ್ಟು ಗಟ್ಟಿ ಎಂಬುದನ್ನುಈ  ಹೇಳಿಕೆ ಮೂಲಕ ತಿಳಿಸಿಕೊಟ್ಟಿದ್ದಾರೆ. ಏನೇ ಇರಲಿ ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಸದಾ ಹೀಗೆ ಇರಲಿ ಎಂದು ಆಶೀಶೋಣ.

Edited By

Kavya shree

Reported By

Kavya shree

Comments