ವ್ಯಾಲೆಂಟೆನ್ಸ್ ಡೇ ದಿನದಂದು ಬ್ಯಾಚುಲರ್ ಲೈಫ್ ಗೆ ಗುಡ್ ಬಾಯ್ ಹೇಳಿದ ಮೋಸ್ಟ್ ಫೇವರೀಟ್ ಸೀರಿಯಲ್ ಸ್ಟಾರ್..?!

14 Feb 2019 1:28 PM | Entertainment
2254 Report

ಕಿರುತೆರೆಯ ಮೋಸ್ಟ್ ಟಿಆರ್'ಪಿ ಧಾರವಾಹಿಯ ನಟ ಡಿಂಪಲ್ ಸ್ಟಾರ್ ಇಂದು ಹಸೆಮಣೆ ಏರಿದ್ದಾರೆ. ಅನೇಕ ಮಹಿಳಾ ಅಭಿಮಾನಿಗಳ ಮನಗೆದ್ದಿದ್ದ ಈ ಸೀರಿಯಲ್ ಸ್ಟಾರ್ ಮದುವೆ ಸಂಭ್ರಮ. ಈ ನಟ ಎಂದರೆ ಹೆಂಗೆಳೆಯರಿಗೆ ಅಚ್ಚುಮೆಚ್ಚು. ಸಿನಿಮಾಗಳಲ್ಲಿಯೂ ನಟಿಸಿದ ಈ ನಟನಿಗೆ ಲವ್ ಗಾಸಿಪ್ ಕೂಡ ಕೆಲ ದಿನಗಳ ಕಾಲ ಬೆಂಬಿಡದೇ ಬೆನ್ನತ್ತಿತ್ತು. ಆದರೆ ಸದ್ಯ ಅವಕ್ಕೆಲ್ಲಾ ಬ್ರೇಕ್ ಹಾಕಿ ರಿಯಲ್ ಲೈಫ್ನಲ್ಲಿ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ. ಖಾಸಗಿ ವಾಹಿನಿಯಯಲ್ಲಿ ಪ್ರಸಾರವಾಗುವ ಧಾರವಾಹಿ ಅಗ್ನಿಸಾಕ್ಷಿಯ ಹೀರೋ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೇಮಿಗಳ ದಿನಾಚರಣೆಯಂದೇ ತಮ್ಮ ದೂರದ ಸಂಬಂಧಿ ಚೈತ್ರಾರೊಟ್ಟಿಗೆ ಹಸೆಮಣೆ ಏರಿದ್ದಾರೆ.

ಅಂದಹಾಗೇ  ಮನೆಯವರೇ  ನೋಡಿದ ಹುಡುಗಿಯೊಂದಿಗೆ ವಿಜಯ್ ವಿವಾಹವಾಗಿದ್ದಾರೆ. ಈ ಹಿಂದೆಯೇ ಒಂದಷ್ಟು ಗಾಸಿಪ್ಗಳು ಬಂದಾಗ ಪ್ರತಿಕ್ರಿಯಿಸಿದ ವಿಜಯ್ ನಾನು ಯಾವ ಪ್ರೇಮಪಾಷಕ್ಕೂ ಬಿದ್ದಿಲ್ಲ. ಸದ್ಯ ಮದುವೆ ವಿಚಾರವೂ ಕೂಡ ನನ್ನ ತಲೆಯಲ್ಲಿಲ್ಲ ಮನೆಯವರು ಏನು ಹೇಳ್ತಾರೆ ಅದರ ಮೇಲೆ ನಿಂತಿದೆ ಎಂದು ಖಾಸಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.ಆದರೆ ಕೆಲ ದಿನಗಳ ಹಿಂದಷ್ಟೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಾವು ಮದುವೆಯಾಗುತ್ತಿರುವ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದರು.ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ಸೂರ್ಯ ಬೆಳ್ಳಿ ಪರದೆಗೂ ಕಾಲಿಟ್ಟಿದ್ದಾರೆ.

ಸಿದ್ದಾರ್ಥ್ ಮತ್ತು ಸನ್ನಿಧಿ ಅಲಿಯಾಸ್ ವೈಷ್ಣವಿಗೌಡ ಕರ್ನಾಟಕದ ಮೋಸ್ಟ್ ಫೇವರೀಟ್ ಕಪಲ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಇಬ್ಬರ ನಡುವೆ ಲವ್ ನಡೀತಿದೆ ಎಂಬ ಗಾಸಿಪ್ ಕೂಡ ಹರಿದಾಡಿತ್ತು. ಹೋದ ಕಡೆಯೆಲ್ಲಾ ಇಬ್ಬರಿಗೂ ಲವ್ ಪ್ರಶ್ನೆಗಳ  ಸುರಿಮಳೆಯೇ ಸುರಿಯುತ್ತಿತ್ತು. ಆದರೆ ಎಷ್ಟೋ ಬಾರಿ ಇಬ್ಬರೂ ಲೈವ್ ಬಂದು ನಮ್ಮಿಬ್ಬರ  ನಡುವೆ ಅಂತದ್ದೇನು ಇಲ್ಲ, ನಾವು ಒಳ್ಳೆ ಪ್ರೆಂಡ್ಸ್ ಎಂದು ಹೇಳಿಕೆ ಕೊಟ್ಟರೂ ಗಾಸಿಪ್ ಮಾತ್ರ ನಿಲ್ತಾ ಇರಲಿಲ್ಲ.ಆದರೆ ಸದ್ಯ ಇವಕ್ಕೆಲ್ಲಾ ಸಿದ್ದಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಅಂತ್ಯ ಹಾಡಿದ್ದರು. ನಾನು ಚೈತ್ರಾ ಎಂಬಾಕೆಯನ್ನು ವಿವಾಹ ಮಾಡಿಕೊಳ್ಳುತ್ತಿದ್ದೇನೆ.ನನಗೆ ಆಕೆಯೇ ಲೈಫ್ ಪಾರ್ಟರ್ ಆಗಿ ಬಂದ್ರೆ ಚೆನ್ನಾಗಿರುತ್ತೆ ಅನ್ಕೊಂಡೆ ಅದರಂತೇ ಮನೆಯವರು ಹೇಳಿದ ಹಾಗೇ ನಾನು ಮದುವೆಯಾಗುತ್ತಿದ್ದೀನಿ ಅಂತಾ. ಅಂತೂ ಇಂತೂ ವಿಜಯ್  ರಿಯಲ್ ಲೈಫ್ ನಲ್ಲಿ ಕಂಕಣ ಬಂಧಿಯಾಗಿದ್ದಾರೆ.

Edited By

Kavya shree

Reported By

Kavya shree

Comments