ಕೊನೆಗೂ ರಿಲೀಸ್ ಆಯ್ತು ಅಭಿಷೇಕ್ ಅಂಬಿಯ ಅಮರ್ ಟೀಸರ್ : ಹೇಗಿದೆ ಗೊತ್ತಾ…?

14 Feb 2019 12:01 PM | Entertainment
502 Report

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್  ಅಂಬಿ ಸದ್ಯ ಸ್ಯಾಂಡಲ್’ವುಡ್ ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅಭಿಷೇಕ್ ಮೊದಲ ಬಾರಿಗೆ ಅಮರ್ ಸಿನಿಮಾದಲ್ಲಿ ನಟಿಸಿದ್ದಾರೆ.  ಇಂದು ಅಮರ್ ಸಿನಿಮಾ ಟೀಸರ್ ಲಾಂಚ್ ಆಗಿದ್ದು ಯೂಟ್ಯೂಬ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಂದಹಾಗೇ ಈಗಾಗಲೇ ಅಂಬಿ ಫೇಮಸ್ ಡೈಲಾಗ್ ನೋ ವೇ , ಚಾನ್ಸೇ ಇಲ್ಲಾ, ಅನ್ನೋದು ಅಮರ್ ಸಿನಿಮಾದಲ್ಲಿ ಸೌಂಡು ಮಾಡ್ತಿದೆ. ನಾನು ಹಿರೋ ಥರಾ ಅಲ್ಲಾ ಹೀರೋನೆ ಎಂದು ಪಂಚಿಂಗ್  ಡೈಲಾಗ್ ಹೊಡೆಯುವ ಮೂಲಕ ಸ್ಯಾಂಡಲ್’ವುಡ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಅಮರ್ ಸಿನಿಮಾ ಟೀಸರ್ ಕೊನೆಗೂ ಲಾಂಚ್ ಆಗಿದೆ. ಸಿನಿಮಾದಲ್ಲಿ ಅಭಿಷೇಕ್ ನಟನೆ ಹೇಗಿರುತ್ತೆ, ಅಭಿಷೇಕ್ ತೆರೆ ಮೇಲೆ ಹೇಗೆ ಕಾಣ್ತಾರೆ, ಅವರ ಡೈಲಾಗ್ ಡೆಲಿವರಿ ಹೇಗಿರುತ್ತೆ ಎಂಬೆಲ್ಲಾ  ಕುತೂಹಲಕ್ಕೆ ಸದ್ಯ ಸಿನಿಮಾ ಟೀಸರ್ ನಿಂದ ಬ್ರೇಕ್ ಬಿದ್ದಿದೆ. ಅಪ್ಪನನ್ನು ಹೋಲುವ ಅಭಿ ಯಂಗ್ ರೆಬಲ್ ಸ್ಟಾರ್ ಆಗಿ ಹೇಗೆ ಪರಿಚಯವಾಗುತ್ತಾರೆ ಎಂದು ಸಿನಿಮಾ ಗಾಗಿ ಕಾಯುತ್ತಿದ್ದವರಿಗೆ ಸ್ವಲ್ಪ ಮಟ್ಟಿಗೆ ಟೀಸರ್'ನಿಂದ ಉತ್ತರ ಸಿಕ್ಕಿದೆ. 'ಅಮರ್' ಟೀಸರ್‌ಗೆ ಶುಭಾಶಯ ಕೋರಿ ಈಗಾಗಲೇ ಕಿಚ್ಚ ಸುದೀಪ್ ಹಾಗೂ ದರ್ಶನ್ ತೂಗುದೀಪ ಅವರು ಅಭಿಷೇಕ್‌ಗೆ ಟ್ವೀಟ್ ಮಾಡಿದ್ದಾರೆ.'ಅಮರ್' ಟೀಸರ್‌ಗೆ ಶುಭಾಶಯ ಕೋರಿ ಈಗಾಗಲೇ ಕಿಚ್ಚ ಸುದೀಪ್ ಹಾಗೂ ದರ್ಶನ್ ತೂಗುದೀಪ ಅವರು ಅಭಿಷೇಕ್‌ಗೆ ಟ್ವೀಟ್ ಮಾಡಿದ್ದಾರೆ.

ಮಲೇಶಿಯಾದಲ್ಲಿ ಮಗ ಅಭಿಷೇಕ್ ಜೊತೆ ಇರುವ ಅಂಬರೀಷ್ ಪತ್ನಿ ಸುಮಲತಾ ಅವರು ಈ ಸಮಯದಲ್ಲಿ ಅಗಲಿರುವ ತಮ್ಮ ಗಂಡ ಅಂಬಿಯನ್ನು ನೆನೆದು ಟ್ವೀಟರ್ ಖಾತೆಯಲ್ಲಿ "ಯಾವತ್ತೂ ನಾವು ಅವರ ಗೈಡೆನ್ಸ್ ಮತ್ತು ಆಶೀರ್ವಾದವನ್ನು ಎದುರು ನೋಡುತ್ತೇವೆ.. ಅವರು ಮೇಲಿನಿಂದಲೇ ನಿನ್ನನ್ನು ನೋಡಿ 'ಮಗ್ನೇ, ಆಲ್ ದಿ ಬೆಸ್ಟ್..' ಎಂದಿರುತ್ತಾರೆ" ಅವರು ಮೇಲಿನಿಂದಲೇ ಮಗನ ಸಿನಿಮಾಗೆ ವಿಶ್ ಮಾಡಿದ್ದಾರೆ. ಅಭಿ ನಿನ್ನ ಚೊಚ್ಚಲ ಸಿನಿಮಾಗೆ ಆಲ್ ದಿ ಬೆಸ್ಟ್ ಎಂದು ತಿಳಿಸಿದ್ದಾರೆ. ಅಂಬಿ ತಮ್ಮ ಮಗನ ಮಗನ ಸಿನಿಮಾ ಹೇಗಿದೆ ಎಂಬುದನ್ನು , ಅವನು ಹೇಗೆ ನಟಿಸಿದ್ದಾನೆ ಎಂಬುದನ್ನು ಕೆಲ ತುಣುಕುಗಳನ್ನು ತರಿಸಿಕೊಂಡು ನೋಡಿದ್ದರಂತೆ.  ಈ ಸಮಯದಲ್ಲಿ ತಮ್ಮ ಅಪ್ಪನನ್ನು ಮಿಸ್ ಮಾಡ್ಕೊಳ್ತೀನಿ ಎನ್ನುತ್ತಾರೆ ಅಭಿಷೇಕ್ ಅಂಬಿ.ಈಗಾಗಲೇ ಸಿನಿಮಾ ದಲ್ಲಿ ಗೆಸ್ಟ್ ರೋಲ್ ನಲ್ಲಿ ದಚ್ಚು ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಆಲ್ ಬೆಸ್ಟ್ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ದಂಪತಿ ಕೂಡ ಅಭಿಯ ಫಸ್ಟ್ ಸಿನಿಮಾಗೆ ವಿಶ್ ಮಾಡಿದ್ದಾರೆ.

Edited By

Kavya shree

Reported By

Kavya shree

Comments