ನಿನ್ನನ್ನು ಸ್ಕ್ರೀನ್ ಮೇಲೆ ನೋಡಲು ಕಾಯ್ತಾ ಇದೀನಿ: ಯಶ್ ಹೀಗೆ ಹೇಳಿದ್ದು ಯಾರಿಗೆ..?

14 Feb 2019 10:55 AM | Entertainment
1492 Report

ಇತ್ತೀಚಿಗಂತೂ ಸ್ಯಾಂಡಲ್’ವುಡ್ನಲ್ಲಿ ಸ್ಟಾರ್ ಒಬ್ಬರ ಸಿನಿಮಾಗೆ ವಿಶ್ ಮಾಡೋದು, ಅವರ ಶೂಟಿಂಗ್ ಸ್ಪಾಟ್’ಗೆ ಗೆ ಹೋಗಿ ಸರ್ಪ್ರೈಸ್ಡ್  ಆಗಿ ಭೇಟಿ ಮಾಡೋದು, ಕಾಲ್ ಮಾಡಿ ಸಿನಿಮಾಗೆ ಕಂಗ್ರಾಟ್ಸ್ ಹೇಳೋದು ಕಾಮನ್ ಆಗಿ ಬಿಟ್ಟಿದೆ. ಆದರೆ ಕಾಮನ್ ಆದ್ರೂ ಪ್ರತೀ ದಿನ ಇದು ಸುದ್ದಿಯಾಗುತ್ತದೆ . ಏಕೆಂದರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಾಸ್ ವಾರ್ ಒಂದಷ್ಟು ದಿನಗಳ ಕಾಲ ಭಾರೀ ಬಿಸಿಯಾಗಿಯೇ ಇತ್ತು. ಈ ಮಧ್ಯೆ ಸ್ಟಾರ್ ಸ್ಟಾರ್ ಗಳ ಮಧ್ಯೆ ಆ ಥರದ್ದ ಯಾವ ಫೀಲ್ ಇಲ್ಲೆಂದು ತೋರಿಸಿಕೊಳ್ಳೋಕೆ ಬಾಕ್ಸ್ ಆಫೀಸ್ ಸ್ಟಾರ್’ಗಳೆಲ್ಲಾ ಇತ್ತೀಚಿಗಂತೂ ಈ ಸಂಪ್ರದಾಯವನ್ನು ಜೋರಾಗಿಯೇ ನಡೆಸುತ್ತಿದ್ದಾರೆ.

ಅದರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ. ಬಾಸ್ ವಾರ್ ಮುಗಿದ ಮೇಲೆ ಸದ್ಯ ಚಂದನವನ ಕಾಮ್ ಆಗಿದೆ. ಬಾಕ್ಸ್ ಆಫೀಸ್ ಸ್ಟಾರ್ ಗಳೆಲ್ಲಾ ಮತ್ತೊಬ್ಬರ ಸ್ಟಾರ್ ಗಳ ಸಿನಿಮಾಗೆ ವಿಶ್ ಮಾಡ್ತಾ ಇದ್ದಾರೆ. ಇದೀಗ ನಮ್ಮ ರಾಕಿಂಗ್ ಸ್ಟಾರ್ ಯಶ್ ದಂಪತಿ  ಜೂನಿಯರ್ ಸ್ಟಾರ್ ಒಬ್ಬರಿಗೆ ಮೆಸೇಜ್ ಮಾಡಿ ಕಂಗ್ರಾಟ್ಸ್ ಹೇಳಿದ್ದಾರೆ.ಅವರನ್ನು ಪ್ರೀತಿಯಿಂದ ಪುಟ್ಟ ಎಂದು ಕರೆದು ಕಮೆಂಟ್ ಮಾಡಿದ್ದಾರೆ. ಇಂದು ರೆಬೆಲ್ ಸ್ಟಾರ್ ಅಂಬಿ ಅವರ ಮಗ ಅಭಿಷೇಕ್ ಅಭಿನಯದ ಅಮರ್ ಸಿನಿಮಾ ಟೀಸರ್ ಬಿಡುಗಡೆ. ಬೆಳಿಗ್ಗೆ 11.07 ಕ್ಕೆಇದು ಬಿಡುಗಡೆಯಾಗಲಿದೆ. ಈಗಾಗಲೇ ಅಮರ್ ಸಿನಿಮಾ ಟೀಸರ್ ಲಾಂಚ್ ಗೆ ಕೋಟ್ಯಾಂತರ ಕನ್ನಡಾಭಿಮಾನಿಗಳು ಕುತೂಹಲದಿಂದ ಕಾಯ್ತಾ ಇದ್ದಾರೆ. ಸಿನಿಮಾ ನಾಯಕರು, ಆತ್ಮೀಯರು ಅಭಿಷೇಕ್ ರ ಮೊದಲ ಸಿನಿಮಾಗೆ ವಿಶ್ ಮಾಡುತ್ತಿದ್ದಾರೆ. ಅಪ್ಪ-ಅಮ್ಮನ  ವಿಶ್ ಪಡೆದಿರುವ ಅಭಿಷೇಕ್ ಸದ್ಯ ತಮ್ಮನ್ನೇ ತಾವೇ ನೋಡಲು ಕಾಯ್ತಾ ಇದ್ದಾರಂತೆ.

ಅಭಿಷೇಕ್ ಮೊದಲ ಚಿತ್ರದ ಟೀಸರ್‌ಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕ ಪಂಡಿತ್ ಶುಭ ಹಾರೈಸಿದ್ದಾರೆ. ಅಭಿ ಮತ್ತು ಅಂಬಿ ಗೆ ಯಶ್ ತುಂಬಾ ಆತ್ಮೀಯರು. ಅಂಬಿ ಸಾವಿನ ಸಮಯದಲ್ಲಿ ಕೊನೆಯ ವರೆಗೂ ವಿಧಿ ವಿಧಾನಗಳ್ಲಲಿ ಭಾಗೀಯಾಗಿದ್ದ ರಾಕಿಂಗ್ ಸ್ಟಾರ್ ಇಂದು ಅಂಬಿ ಪುತ್ರನಿಗೂ ಸಾಥ್ ಕೊಡುತ್ತಿದ್ದಾರೆ. ಅಮರ್ ಸಿನಿಮಾ ಟೀಸರ್ ಲಾಂಚ್ಗೆ ವಿಶಿಷ್ಟವಾಗಿ ವಿಶ್ ಮಾಡಿದ ರಾಕಿಂಗ್ ಸ್ಟಾರ್….'ಪ್ರಿಯ ಅಭಿ.. ಟೀಸರ್ ಬಿಡುಗಡೆಯೊಂದಿಗೆ ಚಿತ್ರಯಾನದ ಮೊದಲ ಅಡಿಯಿಡುತ್ತಿರುವ ಶುಭ ಘಳಿಗೆ ಇದು. ಎಲ್ಲರಿಗಿಂತಲೂ ಹೆಚ್ಚಾಗಿ ನಾಳೆಯ ಟೀಸರ್‌ಗಾಗಿ ಕೌತುಕದಿಂದ ಕಾಯ್ತಾ ಇದೀನಿ. ಪೋಸ್ಟರ್‌ಗಳು ಸಖತ್ತಾಗಿದೆ. ನನ್ನ ಶುಭ ಹಾರೈಕೆಗಳು 'ಎಂದೆಂದಿಗೂ-ನಿನ್ನೊಂದಿಗೆ' ಇರುತ್ತವೆ. ನೀನೆಂದೂ ನನ್ನ ಪುಟ್ಟ 'ಅಮರ್'' ಎಂದು ಕೆಜಿಎಫ್ ಕಿಂಗ್ ಟ್ವೀಟ್ ಮಾಡಿದ್ದಾರೆ."ಪೋಸ್ಟರ್ ಅದ್ಭುತವಾಗಿ ಕಾಣುತ್ತದೆ. ಟೀಸರ್ ನೋಡಲು ಕಾಯುತ್ತಿದ್ದೇನೆ. ಇದನ್ನು ನಿನ್ನ ಹೊರತುಪಡಿಸಿ ಬೇರೆ ಯಾರೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಖಂಡಿತಾ ಯು ಆರ್ ರಾಕ್. ಶುಭವಾಗಲಿ ಡಿಯರ್" ಎಂದು ರಾಧಿಕ ಪಂಡಿತ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ಹಿಂದೆ ರಾಕಿಂಗ್ ಸ್ಟಾರ್ ರಿಂದ ನಾನು ಅದೇ ಗಿಫ್ಟ್ ಪಡೆಯಬೇಕೇಂದು ಅಭಿ ಹೇಳಿದ ಮಾತು ದೊಡಡ್ ಸುದ್ದಿಯಾಗಿತ್ತು. ರಾಕಿಮಗ್ ಸ್ಟಾರ್ ಯಶ್ ಸ್ಟೈಲ್ ಗೆ ಖದರ್ ಗೆ ಅಭಿಷೇಕ್ ಕೂಡ ಫಿದಾ ಆಗಿದ್ದಾರಂತೆ. ಅಂದಹಾಗೇ ಅಭಿಗೆ ಯಶ್ ತುಂಬಾ ಆತ್ಮೀಯರು.

Edited By

Manjula M

Reported By

Kavya shree

Comments