ಶ್ರೀ ಮುರಳಿಗೆ ಸಿಕ್ತು ಕಿಚ್ಚನಿಂದ ದಿಢೀರ್ ಸರ್ಪ್ರೈಸ್ಡ್ ಗಿಫ್ಟ್..!!!

14 Feb 2019 9:47 AM | Entertainment
3508 Report

ಅಂದಹಾಗೇ  ಸ್ಯಾಂಡಲ್’ವುಡ್ ‘ ಆಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗದ ಅನೇಕರಿಗೆ ಡಿಫರೆಂಟ್ ಸ್ಟೈಲ್ ನಲ್ಲಿ ಸರ್ಪ್ರೈಸ್ಡ್ ಕೊಡ್ತಾನೆ ಇರ್ತಾರೆ. ಸದಾ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿರುವ ಸುದೀಪ್ ಸೋಶಿಯಲ್ ಮಿಡಿಯಾದಲ್ಲಿ ಕೂಡ ಅಷ್ಟೇ ಆಕ್ಟೀವ್.ಆಗಾಗಾ ಚಿತ್ರರಂಗದ ಸ್ನೇಹಿತರಿಗೆ ಖುಷಿ ಕೊಡುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ರೋರಿಂಗ್ ಸ್ಟಾರ್  ಶ್ರೀ ಮುರಳಿ ಇದ್ದಲ್ಲಿಗೆ ಹೋಗಿ ದಿಢೀರ್ ಸರ್ಪ್ರೈಸ್ಡ್ ನೀಡಿದ್ದಾರೆ. ಸುದೀಪ್ ಕೊಟ್ಟ ಶಾಕ್ ನಿಂದ ಮುರುಳಿ ಸಿಕ್ಕಾಪಟ್ಟೆ ಖುಷ್ ಆಗಿದ್ದಾರೆ.ಶ್ರೀಮುರಳಿ ಭರಾಟೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸೆಟ್ ಗೆ ಕಿಚ್ಚ ಸುದೀಪ್ ಅಚ್ಚರಿಯ ಭೇಟಿ ನೀಡಿದ್ದಾರೆ.

ಅಸಲಿಗೆ, ಇಲ್ಲೇ ಸುದೀಪ್ ವಿಲನ್ ಚಿತ್ರೀಕರಣಕ್ಕೆ ಆಗಮಿಸಿದ್ದರು. ಈ ಬಾರಿ ಶ್ರೀ ಮುರುಳಿ ಭೇಟಿ ಮಾಡಲೆಂದೇ ಭರಾಟೆ ಸಿನಿಮಾ ಸೆಟ್ ಗೆ ಬಂದಿದ್ದಾರೆ.ಕಿಚ್ಚನ ಸರ್ಪ್ರೈಸ್ ಭೇಟಿಯಿಂದ ಖುಷಿಯಾದ ಶ್ರೀಮುರಳಿ ಧನ್ಯವಾದ ಸಲ್ಲಿಸಿದ್ದಾರೆ. ಹಿಂದೆ ಪುನೀತ್ ರಾಜ್ ಕುಮಾರ್ 'ರಾಜಕುಮಾರ' ಸಿನಿಮಾ ಚಿತ್ರೀಕರಣದಲ್ಲಿದ್ದಾಗ ಸೆಟ್ ಗೆ ಭೇಟಿ ನೀಡಿ ಸುದೀಪ್ ಅಚ್ಚರಿ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಒಟ್ಟಾರೆ ಚಿತ್ರರಂಗದಲ್ಲಿ ಕಲಾವಿದರು ಒಗ್ಗಟ್ಟಾಗಿಯೇ ಇದ್ದೇವೆ ಎಂಬುದನ್ನು ಈ ಭೇಟಿಯಿಂದ ತಿಳಿಯಬಹುದು. ಕೆಲ ಕಾರ್ಯಕ್ರಮಗಳ ಸಂದರ್ಶನದಲ್ಲಿ ಸುದೀಪ್ ಮಾತನಾಡುವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಪ್ರಶ್ನೆ ಕೇಳಿದ್ರೆ ಸುದೀಪ್ ಉತ್ತರ ನೀಡುತ್ತಿದ್ದರು. ಸಿನಿಮಾ ಫೀಲ್ಡ್ ನಲ್ಲಿ ಮುನಿಸು ಕೋಪ ಸಹಜ, ಆದರೆ ನಾನು ಎಂದಿಗೂ ಅವರ ಮೇಲೆ ಬೇಸರಿಸಿಲ್ಲ , ಅವರೊಂದಿಗೆ ನಟಿಸಲು ಅವಕಾಶವಿದ್ದರೇ ಖಂಡಿತಾ ನಟಿಸುತ್ತೇನೆ ಎಂದಿದ್ದರು.

Edited By

Manjula M

Reported By

Kavya shree

Comments