ಇಳಿವಯಸ್ಸಿನಲ್ಲಿ ಅಪ್ಪನಾದ ನಟ…!!!

13 Feb 2019 3:48 PM | Entertainment
159 Report

ಮುದ್ದಾದ ಮಗುವಿಗೆ ತಂದೆಯಾಗಿದ್ದಾರೆ 69 ವಯಸ್ಸಿನ ನಟ. ಹಾಲಿವುಡ್ ನ ನಟ ರಿಚರ್ಡ್ ಗೇರೆ 69ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಅಂದಹಾಗೇ ರಿಚರ್ಡ್ ಗೇರೆಯ ಆತ್ಮೀಯರು ಈ ವಿಚಾರವನ್ನು ಬಹಿರಂಗಪಡಿಸಿದ್ದು, ವಾರದ ಹಿಂದಷ್ಟೇ  ಮುದ್ದಾದ ಮಗು ಮನೆಗೆ ಬಂದಿದೆ. ಅನೇಕ  ವರ್ಷಗಳ ಕಾಲ ಡೇಟ್ 'ನಲ್ಲಿದ್ದ ರಿಚರ್ಡ್  ನಂತರ ಮದುವೆಯಾಗಿದ್ದರು.

ಇನ್ಸ್’ಟ್ರಾಗ್ರಾಂ ಮೂಲಕ ರಿಚರ್ಡ್  ತಾನು ಗರ್ಭಿಣಿಯಾಗಿರುವ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ. ರಿಚರ್ಡ್, ಹಿಂದಿನ ವರ್ಷ ಉದ್ಯಮಿ ಅಲ್ಜೆಂಡ್ರ ಸಿಲ್ವಾ ಅವ್ರನ್ನು ಮೂರನೇ ಮದುವೆಯಾಗಿದ್ದರು. 2015 ರಲ್ಲಿ ಇಬ್ಬರು ಪ್ರೀತಿ ಮಾಡ್ತಿದ್ದಾರೆಂಬ ಸಂಗತಿ ಬಹಿರಂಗವಾಗಿತ್ತು. ರಿಚರ್ಡ್, ಎರಡನೇ ಪತ್ನಿಗೂ ಒಂದು ಗಂಡು ಮಗುವಿದೆ. ರಿಚರ್ಡ್ ಮತ್ತು ಕೆರ್ರಿ 2002 ರಲ್ಲಿ ಮದುವೆಯಾಗಿದ್ದರು. 2016ರಲ್ಲಿ ವಿಚ್ಛೇದನ ಪಡೆದಿದ್ದರು. ರಿಚರ್ಡ್ ಮೊದಲ ಮಗನಿಗೆ 19 ವರ್ಷ ವಯಸ್ಸು. ರಿಚರ್ಡ್ 1991 ರಲ್ಲಿ ಮೊದಲ ಮದುವೆಯಾಗಿದ್ದರು. 1995ರಲ್ಲಿ ಮದುವೆ ಮುರಿದು ಬಿದ್ದಿತ್ತು.

Edited By

Kavya shree

Reported By

Kavya shree

Comments