ಹಣಕ್ಕಾಗಿ ಆ ನಟಿ ಹೈವೇ ಪಕ್ಕಾ ಮಾಡುತ್ತಿದ್ದ ಕೆಲಸ ಏನ್ ಗೊತ್ತಾ…?!!

13 Feb 2019 1:02 PM | Entertainment
326 Report

ಬಣ್ಣದ ಲೋಕವೇ ಅಂಥದ್ದು. ಬಿಂದಾಸ್ ಆಗಿದ್ದ ಕಾಲವೇ ಒಂದು, ಆನಂತರ ಹಣಕ್ಕಾಗಿ ದುರಂತಮಯ ಜೀವನ ನಡೆಸಿದ ಕಾಲವೇ ಇನ್ನೊಂದು. ನಾವಂದು ಕೊಂಡಹಾಗೇ ಸಿನಿಮಾ ಸ್ಟಾರ್'ಗಳೇನೂ ವೈಭೋವೋಪಿತ ಜೀವನ ನಡೆಸುತ್ತಿಲ್ಲ. ಎಷ್ಟೋ ಕಲಾವಿದರ ಬದುಕು ಮೂರಾ ಬಟ್ಟೆಯಾಗಿದೆ. ತಿನ್ನೋಕೆ ಒಂದು ತುತ್ತು  ಅನ್ನೋಕು ಕಷ್ಟಪಡುತ್ತಿರುವ ಸಾಕಷ್ಟು ನಟ-ನಟಿಯರು ನಮ್ಮೊಂದಿಗೆ ಇದ್ದಾರೆ. ಅಷ್ಟೇ ಅಲ್ಲದೇ ನಮ್ಮ ಮಧ್ಯೆ ಕೆಲಸ ಮಾಡಿಕೊಂಡು  ಕಷ್ಟಪಡುತ್ತಿರುವ ಅದೆಷ್ಟೋ ಮಂದಿಯನ್ನು ನಾವು ಗುರುತೇ ಹಿಡಿಯುವುದಿಲ್ಲ. ಅದೇ ರೀತಿ ಇಲ್ಲೊಬ್ಬ ನಟಿಮಣಿ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿದ್ದರೂ, ಜೀವನಕ್ಕಾಗಿ ದೋಸೆ ಕ್ಯಾಂಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ನಟಿ ಯಾರು ಗೊತ್ತಾ?

ಮಲೆಯಾಳಂ ಕಿರುತೆರೆ ನಟಿ ಜೀವನದಲ್ಲಿ ಎದುರಾದ ಆರ್ಥಿಕ ಸಂಕಷ್ಟದಿಂದಾಗಿ ಅದನ್ನೆಲ್ಲಾ ಮೆಟ್ಟಿ ನಿಲ್ಲಲು ತಿರುವನಂತಪುರದ ಹೈವೇ ರೋಡ್ ಪಕ್ಕದಲ್ಲಿ ಕ್ಯಾಂಟೀನ್ ಒಂದನ್ನು ತೆರೆದು ದೋಸೆ ಹಾಕುವ ಕಾಯಕ ಮಾಡುತ್ತಿದ್ದಾರೆ. ಮಲೆಯಾಳಂನ ಈ ಕಿರುತೆರೆ ನಟಿ ಹೆಸರು ಕವಿತಾ ಲಕ್ಷ್ಮಿ ಎಂದು. ಈ ನಟಿ ಧಾರಾವಾಹಿಗಳಲ್ಲಿ ಕೂಡ ತನ್ನ ನಟನೆಯನ್ನು ಮುಂದುವರೆಸುತ್ತಾ, ತನ್ನ ಸಿರಿಯಲ್ ಶೂಟಿಂಗ್ ಮುಗಿದ ತಕ್ಷಣ ಸಾಯಂಕಾಲದ ಸಮಯದಲ್ಲಿ ಹೈವೇ ರೋಡ್ ಪಕ್ಕದ ತನ್ನ ಕ್ಯಾಂಟೀನ್ ನಲ್ಲಿ ದೋಸೆ ಹಾಕಲು ಶುರು ಮಾಡುತ್ತಾರೆ.ಮಕ್ಕಳ ಓದಿಗಾಗಿ ನಟಿ ಕವಿತಾ ಲಕ್ಷ್ಮಿ’ಗೆ ಈ ಕೆಲಸ ಮಾಡಿದ್ದಾರೆ.  ಇಬ್ಬರು ಮಕ್ಕಳಿದ್ದು, ಇಬ್ಬರು ಮಕ್ಕಳಿದ್ದು, ಹದಿಮೂರು ವರ್ಷಗಳ ಹಿಂದೆಯೇ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ತನ್ನ ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸುವ ಸಲುವಾಗಿ ಅವರು ಈ ಸ್ಟ್ರೀಟ್ ಕ್ಯಾಂಟಿನ್ ಕೆಲಸ ಮಾಡಲು ಶುರು ಮಾಡಿದ್ದು ಇವರ ಈ ಕೆಲಸಕ್ಕೆ ಸೋಶಿಯಲ್ ಮಿಡಿಯಾಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Edited By

Kavya shree

Reported By

Kavya shree

Comments