ಬೇರೊಬ್ಬರ ಗರ್ಲ್ ಫ್ರೆಂಡ್ ಮೇಲೆ ಬಿತ್ತಾ ಸಲ್ಮಾನ್ ಖಾನ್ ಕಣ್ಣು..!

13 Feb 2019 12:30 PM | Entertainment
184 Report

ಸ್ಟಾರ್ ನಟ ನಟಿಯರು ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಸದ್ಯ ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್  ಸುದ್ದಿಯಲ್ಲಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ದಿಶಾ ಪಟಾಣಿ ನಟಿಸುತ್ತಿದ್ದಾರೆ. ದಿಶಾ ನಟನೆಗೆ ಸಲ್ಮಾನ್ ಖಾನ್ ಫಿದಾ ಆಗಿದ್ದಾರೆ. ಹಾಗಾಗಿಯೇ ಸಲ್ಮಾನ್, ದಿಶಾಗೆ ಇನ್ನೊಂದು ಚಿತ್ರಕ್ಕೆ ಆಫರ್ ನೀಡಿದ್ದಾರಂತೆ.

ಕೆಲವು ದಿನಗಳ ಹಿಂದಷ್ಟೆ ಬಾಗಿ -3 ಚಿತ್ರಕ್ಕೆ ದಿಶಾ ಹೆಸರು ಕೇಳಿ ಬಂದಿದೆ. ಇದೀಗ ಮತ್ತೊಂದು ದೊಡ್ಡ ಬಜೆಟ್ ನ ಚಿತ್ರಕ್ಕೆ ಆಫರ್ ಸಿಕ್ಕಿದೆ. ಸಲ್ಮಾನ್ ಖಾನ್ ಮುಂದಿನ ಚಿತ್ರಕ್ಕೆ ಆಫರ್ ನೀಡಿದ್ದಾರೆ. ಆದ್ರೆ ಯಾವ ಚಿತ್ರ ಎಂಬುದು ಇನ್ನೂ ತಿಳಸಿಲ್ಲ. ದಿಶಾ ಇದಕ್ಕೆ ಒಪ್ಪಿಗೆ ನೀಡಿದ್ರೆ ಮತ್ತೊಮ್ಮೆ ಸಲ್ಮಾನ್ ಖಾನ್ ಜೊತೆ ದೊಡ್ಡ ಪರದೆ ಮೇಲೆ ದಿಶಾ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್ ರ ಎರಡು ಚಿತ್ರ 2019 ರಲ್ಲಿ ತೆರೆಗೆ ಬರ್ತಿದೆ. ದಬಾಂಗ್ ಸರಣಿಯ ಒಂದು ಚಿತ್ರವಾದ್ರೆ ಇನ್ನೊಂದು ಭಾರತ್. ಚಿತ್ರದಲ್ಲಿ ಸಲ್ಮಾನ್, ದಿಶಾ ಜೊತೆ ಕತ್ರಿನಾ ಕೈಫ್ ಇದ್ದು, ಭಾರತ್ ಚಿತ್ರ ಜೂನ್ 5,2019 ರಂದು ಬಿಡುಗಡೆಯಾಗಲಿದೆ… ಒಟ್ಟಾರೆಯಾಗಿ ದಿಶಾ ಪಟಾಣಿ ನಟನೆಗೆ ಫಿದಾ ಆಗಿರುವ ಬಾಲಿವುಡ್ ಸುಲ್ತಾನ್ ಆಕೆ ಟೈಗರ್ ಶ್ರಾಫ್ ಗರ್ಲ್ ಫ್ರೆಂಡ್ ಅನ್ನೋದನ್ನ ಮರೆತಿರಬೇಕು

Edited By

Manjula M

Reported By

Manjula M

Comments