ಅಮ್ಮನ ಮದುವೆಗೆ ಸಾಕ್ಷಿಯಾದ 'ತಲೈವಾ' ಮೊಮ್ಮಗ..!!!

13 Feb 2019 12:00 PM | Entertainment
236 Report

ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಗೆ ಮಗಳ ಮದುವೆ ಸಂಭ್ರಮ. ಪುತ್ರಿ ಸೌಂದರ್ಯ ಅವರಿಗೆ ಇದು ಎರಡನೇ ಮದುವೆ  ಸಂಭ್ರಮ. ಸೋಮವಾರ ಉದ್ಯಮಿ ವಿಶಾಖನ್ ವನಗಮುಡಿ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಅಂದಹಾಗೇ ಈ ಹಿಂದೆ ತಾನು ಮದುವೆಯಾಗುತ್ತಿರುವ ವಿಚಾರದ ಬಗ್ಗೆ  ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗ ಪೋಸ್ಟ್ ಮಾಡುತ್ತಿದ್ದ ಪುತ್ರಿ ಸೌಂದರ್ಯ ಇದೀಗ ಟ್ವೀಟ್ ಮಾಡುವುದರ ಮೂಲಕ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸೌಂದರ್ಯ ಅವರು ತಮ್ಮ ಟ್ವೀಟರ್ ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಈ ವೇಳೆ ತಮ್ಮ ಮದುವೆಯ ಬಗ್ಗೆ ,”ಮಿಸ್ಟರ್, ಮಿಸೆಸ್, ನನ್ನ ಕುಟುಂಬ, ನಾವು ಒಂದಾದೆವು, ವೇದ್ ವಿಶಾಖನ್‍ಸೌಂದರ್ಯ” ಎಂಬ ಹ್ಯಾಶ್ ಟ್ಯಾಗ್‍ಗಳನ್ನು ಬರೆದು ಒಂದೇ ಸಾಲಿನಲ್ಲಿ ಟ್ವೀಟ್ ಮಾಡಿದ್ದಾರೆ. ಇನ್ನು ತಮ್ಮ ಅಮ್ಮನ ಮದುವೆಗೆ ರಜನೀ ಮೊಮ್ಮಗ ಸಾಕ್ಷಿಯಾಗಿದ್ದಾರೆ. ಸೌಂದರ್ಯ ಅವರ ಮಗ ತಮ್ಮ ತಾಯಿ ಮದುವೆಯಲ್ಲಿ ಸಂತಸದಿಂದ ಓಡಾಡಿಕೊಂಡು ಸಂಭ್ರಮಿಸುತ್ತಿದ್ದುದ್ದು ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು.

ಜೊತೆಗೆ ವಿಶಾಖನ್ ತಾಳಿ ಕಟ್ಟುತ್ತಿರುವ ಸಂಭ್ರಮದ ಕ್ಷಣದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮದುವೆ ಸಂಭ್ರಮದಲ್ಲಿ ನಟ ರಜನೀಕಾಂತ್ ಭಾವುಕರಾದ್ರು. ಮಗಳು ಸೌಂದರ್ಯ ಅವರ ಮೊದಲ ಮದುವೆ ಮುರಿದು ಬಿದ್ದಾಗ ರಜನೀಕಾಂತ್ ಒಂದಷ್ಟು ದಿನ ಡಿಸ್ಟರ್ಬ್ ಆಗಿದ್ದರಂತೆ. ಸದ್ಯ ಮಗಳಎರಡನೇ ಮದುವೆಯನ್ನು ಕಣ್ತುಂಬಿಸಿಕೊಂಡು ಭಾವುಕರಾಗಿದ್ದಾರೆ. ಚೆನ್ನೈನಲ್ಲಿರುವ ಲೀಲಾ ಪ್ಯಾಲೇಸ್’ ಹೋಟೇಲ್’ನಲ್ಲಿ ಸೌಂದರ್ಯ ಅವರು ವಿಶಾಖನ್ ಜೊತೆ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ಮದುವೆ ಸಮಾರಂಭಕ್ಕೆ ರಾಜಕೀಯ ಗಣ್ಯರು, ಅನೇಕ ಸಿನಿಮಾ ಕಲಾವಿದರು ಆಗಮಿಸಿ ವಧು-ವರರಿಗೆ ಆಶೀರ್ವದಿಸಿದರು. ಇನ್ನು ಮದುವೆಗೆ ಸೌಂದರ್ಯ ಅವರ ಮಗನೇ ಸಾಕ್ಷಿಯಾಗಿದ್ದಾರೆ. ಈ ಹಿಂದೆ 2010ರಲ್ಲಿ ಸೌಂದರ್ಯ ಉದ್ಯಮಿ ಅಶ್ವಿನ್ ಅವರನ್ನು ವರಿಸಿದ್ದರು. ಈ ದಂಪತಿಗೆ ಗಂಡು ಮಗು ಕೂಡ ಇದೆ. ಆದರೆ ಕಾರಣಾಂತರದಿಂದ 2017 ರಲ್ಲಿ ವಿಚ್ಛೇದನ ಪಡೆದಿದ್ದರು. ವಿಶಾಖನ್ ಕೂಡ ಕನಿಕಾ ಎಂಬವರ ಜೊತೆ ಮದುವೆಯಾಗಿದ್ದರು. ಇಬ್ಬರ ಮಧ್ಯೆ ದಾಂಪತ್ಯ ಜೀವನ ಸರಿ ಹೋಗದ ಕಾರಣ ಅವರು ವಿಚ್ಛೇದನ ಪಡೆದುಕೊಂಡಿದ್ದರು.

Edited By

Kavya shree

Reported By

Kavya shree

Comments