ಕಾಮಿಡಿ ಸ್ಟಾರ್ ಚಿಕ್ಕಣ್ಣ ಒಂದು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ…? ಕೇಳಿದ್ರೆ ಶಾಕ್ ಆಗ್ತೀರಾ…!!!

13 Feb 2019 11:16 AM | Entertainment
5137 Report

ಕೆಲ ಸಿನಿ ರಸಿಕರು ಸಿನಿಮಾ ನೋಡುವ ಸ್ಟೈಲೇ ಬೇರೆ. ಒಂದು ಸಿನಿಮಾ ಹೇಗಿರ ಬೇಕಂದ್ರೆ ಇಂಥವರು ಆ ಪಾತ್ರ ಮಾಡಿದ್ರೆ ಆ ಸಿನಿಮಾ ರೋಲ್ ಚೆನ್ನಾಗಿ ಬರ್ತಾಯಿತ್ತು ಎಂದು ವಿಮರ್ಶೆ ಮಾಡ್ತಾರೆ. ಇತ್ತೀಚಿಗೆ ಕೆಲ ಸ್ಟಾರ್ ನಟ-ನಟಿಯರು,ಸೂಪರ್ ವಿಲನ್, ಇನ್ನಿಂಗ್ಸ್ ಡೈರೆಕ್ಟರ್’ಗೆ ಇರುವಂಥಾ ಡಿಮ್ಯಾಂಡ್ ಕೆಲ ಕಾಮಿಡಿ ಸ್ಟಾರ್ ಗಳಿಗೂ ಇದೆ. ಸಿನಿಮಾದಲ್ಲಿ ಆ ಹಾಸ್ಯ ಕಲಾವಿದ ಇರಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಇತ್ತೀಚಿಗಂತೂ ಕೆಲ ಕಾಮಿಡಿ ಸ್ಟಾರ್ ಗಳ ಕಾಲ್ ಶೀಟ್ ಪಡೆಯುವುದು ಕಷ್ಟವಾಗಿದೆ. ಇನ್ನು ಅವರ ಸಂಭಾವನೆ ಕೇಳಬೇಕಾ...! ನಿಮಗೆ ಗೊತ್ತಿರದ ಒಂದು ಇಂಟ್ರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ,ಅವರ ಸಂಭಾವನೆ ಯಾವ ಸ್ಟಾರ್ ಹೀರೋ-ಹೀರೋಯಿನ್’ಗೂ ಕಡೆಮೆ ಇಲ್ಲ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಟ ಬುಲೆಟ್ ಪ್ರಕಾಶ್, ಸಾಧು ಕೋಕಿಲ, ಕಾಮಿಡಿ ಕಿಂಗ್ ಚಿಕ್ಕಣ್ಣ,ರಂಗಾಯಣ ರಘು  ಸಿನಿಮಾವೊಂದಕ್ಕೆ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ…!

ನಟ ಬುಲೆಟ್ ಪ್ರಕಾಶ್ ಗೆ ಆರೋಗ್ಯ ಸ್ಥಿತಿ ಸರಿಯಾಗಿಲ್ಲ.ಆದರೆ ಈ ಹಿಂದೆ ದರ್ಶನ್ ಜೊತೆ ಒಂದಷ್ಟು ಸಿನಿಮಾಗಳ ಮೂಲಕ ಖ್ಯಾತಿಗಳಿಸಿದ್ದ ಬುಲೆಟ್ ಪ್ರಕಾಶ್ ಸದ್ಯ ಕೆಲ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಅವರು ಒಂದು ದಿನಕ್ಕೆ ಪಡೆಯುವ ಸಂಭಾವನೆ 50.000 ಎಂಬ ಮಾಹಿತಿ ಇದೆ. ಇನ್ನು ಕಿರುತೆರೆಯ ಟಿಆರ್’ಪಿ ರಿಯಾಲಿಟಿ ಶೋಗಳ ಪೈಕಿ ಮಜಾ ಟಾಕೀಸ್ ಕೂಡ ಒಂದು. ಮಜಾ ಟಾಕೀಸ್ ನ ಕುರಿ ಖ್ಯಾತಿಯ ಕುರಿ ಪ್ರತಾಪ್ ಪ್ರತಾಪ್ ತಮ್ಮದೇ ಶೈಲಿಯಿಂದ ಜನರನ್ನು ಮನರಂಜಿಸುತ್ತಿದ್ದಾರೆ. ಸದ್ಯ ಪ್ರತಾಪ್ ಅವರು ದಿನಕ್ಕೆ ಒಂದು ಮೂಲದ ಪ್ರಕಾರ ರೂ .ಎಂಬತ್ತು ಸಾವಿರ ಸಂಭಾವನೆ ಪಡೆಯುತ್ತಾರೆ. ಅಂದಹಾಗೇ ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಒಂದಷ್ಟು ಸಿನಿಮಾಗಳ ಪೈಕಿ ಹಾಸ್ಯ ಪಾತ್ರದಲ್ಲಿ ಚಿಕ್ಕಣ್ಣನೇ ಕಾಣಿಸಿಕೊಳ್ಳುತ್ತಾರೆ. ಹಾಸ್ಯ ಕಲಾವಿದರ ಪೈಕಿ ನಟ ಚಿಕ್ಕಣ್ಣನಿಗೆ ಅಪಾರ ಅಭಿಮಾನಿ ಬಳಗವೇ ಇದೆ.

ಇತ್ತೀಚೆಗೆ 90% ರಷ್ಟು ಸಿನಿಮಾಗಳಲ್ಲಿ ಹಾಸ್ಯ ಕಲಾವಿದ ಚಿಕ್ಕಣ್ಣ ಇಲ್ಲದೆ ಇರುವುದಿಲ್ಲ, ಚಿಕ್ಕಣ್ಣ ಒಂದು ಸಿನಿಮಾದಲ್ಲಿ ಇದ್ದರೆ ಸಾಕು ಆ ಸಿನಿಮಾ ಹಿಟ್ ಆದಂತೆ ಎಂಬ ಮಾತಿದೆ. ಒಂದು ಮೂಲದ ಪ್ರಕಾರ ಚಿಕ್ಕಣ್ಣ ಒಂದು ದಿನಕ್ಕೆ ಒಂದು ಲಕ್ಷ ಸಂಭಾವನೆ ಪಡೆಯುತ್ತಾರೆ.ಅಂದಹಾಗೇ ನಟ ರಂಗಾಯಣ ರಘು ಅವರ ಸಂಭಾವನೆ ಕೇಳಬೇಕಾ…? ರಂಗಾಯಣ ರಘು ಕೇವಲ ಹಾಸ್ಯ ಕಲಾವಿದನಷ್ಟೇ ಅಲ್ಲ, ಪೋಷಕ ಪಾತ್ರದಲ್ಲೂ, ಖಳ ನಟನ ಪಾತ್ರದಲ್ಲೂ ಮಿಂಚುತ್ತಾರೆ. ಅವರು ಒಂದು ಕಾಲ್ ಶೀಟ್’ಗೆ ಪಡೆಯುವ ಸಂಭಾವನೆ 7 ರಿಂದ ಎಂಟು ಲಕ್ಷ ರೂ.ಗಳು. ಇವರ ಇಡಿ ಕರ್ನಾಟಕಕ್ಕೆ ಚಿರಪರಿಚಿತ ಹೆಚ್ಚು ಹೇಳಬೇಕಾಗುವುದಿಲ್ಲ ಒಂದು ಮೂಲದ ಪ್ರಕಾರ ಸಾಧು ಕೋಕಿಲ ಅವರು ದಿನಕ್ಕೆ ಐದರಿಂದ ಹತ್ತು ಲಕ್ಷದ ವರೆಗೆ ಸಂಭಾವನೆ ಪಡೆಯುತ್ತಾರೆ.ಒಟ್ಟಾರೆ ಸ್ಟಾರ್ ನಟರ ಸಂಭಾವನೆಯಂತೇ ಹಾಸ್ಯ ಕಲಾವಿದರ ಸಂಭಾವನೆಯೂ ಸಿನಿಮಾ ಹಿಟ್ ಮೇಲೂ ಅವಲಂಭನೆ ಆಗುತ್ತದೆ.

Edited By

Manjula M

Reported By

Kavya shree

Comments