ಶೂಟಿಂಗ್ ವೇಳೆ ಅವಘಡ: ಬಿದ್ದು ಗಾಯ ಮಾಡಿಕೊಂಡ  ರಾಧಿಕಾ..!!

12 Feb 2019 3:21 PM | Entertainment
712 Report

ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ ನಟಿ… ಕೆಲವೊಂದು ವಿವಾದಗಳಿಂದ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟಿದ್ದರು. ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚೆಗೆ ಹೆಚ್ಚಿಗೆ ಯಾವ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ... ಕೆಲವೊಂದು ಸಿನಿಮಾಗಳ ಮೂಲಕ ತೆರೆ ಮೇಲೆ ಹಾಗೆ ಬಂದು ಹೀಗೆ ಹೋಗಿ ಬಿಡುತ್ತಿದ್ದರು.. ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ‘ಕಾಂಟ್ರಾಕ್ಟ್’ ಚಿತ್ರದ ಚಿತ್ರೀಕರಣದ ವೇಳೆ ಕಾಣಿಸಿಕೊಂಡಿದ್ದರು. ನಂತರ ಬೈರಾದೇವಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಲು ಸಿದ್ದವಾಗುತ್ತಿದ್ದಾರೆ.

ಇದೀಗ ಭೈರಾದೇವಿ ಶೂಟಿಂಗ್ ವೇಳೆಯಲ್ಲಿ ನಟಿ ರಾಧಿಕಾ ಬಿದ್ದು ಗಾಯ ಮಾಡಿಕೊಂಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಶಾಂತಿನಗರದ ಸ್ಮಶಾನದಲ್ಲಿ ಗುರುವಾರ ರಾಧಿಕಾ ಅವರು ಕಾಳಿ ಅವತಾರವೆತ್ತುವ ಭಾಗದ ಭೈರಾದೇವಿ ಸಿನಿಮಾದ ಶೂಟಿಂಗ್ ನಡೆದಿತ್ತು. ಚಿತ್ರೀಕರಣದ ವೇಳೆಯಲ್ಲಿ ರಾಧಿಕಾ ಅವರು ಗೋರಿ ಮೇಲೆ ಕಾಲಿಟ್ಟು ಎಡವಿ ಬಿದ್ದ ಪರಿಣಾಮ ಸೊಂಟ ಹಾಗೂ ಕಾಲಿಗೆ ಗಾಯವಾಗಿದೆ. ತಕ್ಷಣವೇ ರಾಧಿಕಾರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ವೈದ್ಯರು 30 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಗಾಯವನ್ನು ಲೆಕ್ಕಿಸದೇ ಮರುದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ಮತ್ತೆ ನೋವು ಕಾಣಿಸಿಕೊಂಡಿದೆ. ವೈದ್ಯರ ಸಲಹೆ ಮೇರೆಗೆ ಸದ್ಯ ರಾಧಿಕಾ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.ರಾಧಿಕ ಅಭಿನಯದ ಈ  ಸಿನಿಮಾ ಮತ್ತೆ ರಾಧಿಕಗೆ ಯಶಸ್ಸು ತಂದುಕೊಡುತ್ತದೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments