ಮದುವೆಗೂ ಮೊದಲೇ ತನ್ನ ಮಗುವಿಗೆ ಹೆಸರಿಟ್ಟ ಆಲಿಯಾ..!!

12 Feb 2019 11:09 AM | Entertainment
272 Report

ಸ್ಟಾರ್ ನಟ ನಟಿಯರು  ಇತ್ತಿಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ..ಸುದ್ದಿಯಷ್ಟೆ ಅಲ್ಲ ಟ್ರೋಲ್ ಕೂಡ ಆಗುತ್ತಿದ್ದಾರೆ.. ಇದೀಗ ಯಾರಪ್ಪ ಸುದ್ದಿಯಲ್ಲಿದ್ದಾರೆ ಅನ್ಕೊಂಡ್ರ.. ಹೇಳ್ತೀವಿ ಕೇಳಿ.. ಅವರೇ ನಮ್ಮ ಆಲಿಯಾ ಭಟ್.. ಬಾಲಿವುಡ್ ನಟಿ ಆಲಿಯಾ ಭಟ್ ಸದ್ಯ 'ಗಲ್ಲಿ ಬಾಯ್' ಚಿತ್ರದ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ದಾಳೆ. ರಣವೀರ್ ಸಿಂಗ್ ಜೊತೆ ನಟಿಸಿರುವ ಆಲಿಯಾ, ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಮಾಡ್ತಿದ್ದಾರೆ

ಸಿನಿಮಾ ಜೊತೆ ಆಲಿಯಾ, ರಣವೀರ್ ಕಪೂರ್ ಜೊತೆಗಿನ ಪ್ರೀತಿ ವಿಚಾರಕ್ಕೂ ಕೂಡ ಸುದ್ದಿಯಲ್ಲಿದ್ದಾರೆ. ಆದರೆ ಸದ್ಯ ಆಲಿಯಾ ಮದುವೆ ಮೂಡ್ ನಲ್ಲಿಲ್ಲ. ಆದ್ರೆ ಮದುವೆಗೂ ಮುನ್ನವೇ ಆಲಿಯಾ ತನ್ನ ಹೆಣ್ಣು ಮಗುವಿಗೆ ಹೆಸರಿಟ್ಟಿದ್ದಾಳೆ. ಚಿತ್ರದ ಪ್ರಚಾರಕ್ಕಾಗಿ ಆಲಿಯಾ ರಿಯಾಲಿಟಿ ಶೋ ಒಂದಕ್ಕೆ ಬಂದಿದ್ದಳು. ಶೋ ವೇಳೆ ಆಲಿಯಾಳನ್ನು ಸ್ಪರ್ಧಿಯೊಬ್ಬ ಬೇರೆ ಹೆಸರಿನಿಂದ ಕರೆದಿದ್ದಾನೆ. ಆತ ಕರೆದ ಹೆಸರು ಆಲಿಯಾಗೆ ಸಿಕ್ಕಾಪಟ್ಟೆ ಇಷ್ಟವಾಗಿ ಬಿಟ್ಟಿದೆ. ಸ್ಪರ್ಧಿ, ಆಲಿಯಾಳನ್ನು ಅಲ್ಮಾ ಎಂದು ಕರೆದಿದ್ದಾನೆ. ತಕ್ಷಣ ಇದಕ್ಕೆ ಪ್ರತಿಕ್ರಿಯೆ ನೀಡಿದ ಆಲಿಯಾ, ಅಲ್ಮಾ ಹೆಸರು ತುಂಬಾ ಚೆನ್ನಾಗಿದೆ. ನನಗೆ ತುಂಬಾ ಇಷ್ಟವಾಯಿತು. ಒಂದು ವೇಳೆ ನನಗೆ ಹೆಣ್ಣು ಮಗು ಹುಟ್ಟಿದ್ರೆ ಅದಕ್ಕೆ ಅಲ್ಮಾ ಎಂದು ಹೆಸರಿಡುತ್ತೇನೆ ಎಂದು ಆಲಿಯಾ ನಸು ನಕ್ಕಿದ್ದಾರೆ..

Sponsored

Edited By

Manjula M

Reported By

Manjula M

Comments