'ಬಿಗ್ ಬಾಸ್'ನ ಆಂಡಿ ವಿರುದ್ದ ದೂರು ನೀಡಿದ ನಟಿ..!!

12 Feb 2019 8:52 AM | Entertainment
1642 Report

ಕಿರುತೆರೆಯ ರಿಯಾಲಿಟಿ ಷೋ ಗಳಲ್ಲಿ ಅತೀ ದೊಡ್ಡ ರಿಯಾಲಿಟಿ ಷೋ ಗಳ ಪೈಕಿ ಬಿಗ್ ಬಾಸ್ ಕೂಡ ಒಂದು… ಕನ್ನಡದಲ್ಲಿ ಈಗಾಗಲೇ 6 ಆವೃತ್ತಿಗಳು ಮುಗಿದಿವೆ.. 5 ಆವೃತ್ತಿಗಳಿಗೆ ಹೋಲಿಸಿದರೆ ಆರನೇ ಆವೃತ್ತಿ ಹೆಚ್ಚು ಸುದ್ದಿ ಮಾಡಿತ್ತು.. ಅಷ್ಟೆ ಅಲ್ಲ ಆ ಸೀಜನ್ ಮುಗಿದ ಮೇಲಿಯೂ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಇದೀಗ 'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಯಾಗಿದ್ದ ಆಂಡಿ ವಿರುದ್ಧ ಮತ್ತೊಬ್ಬ ಸ್ಪರ್ಧಿ ನಟಿ ಕವಿತಾ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದಾರೆ. 'ಬಿಗ್ ಬಾಸ್' ಸೀಸನ್ 6 ರಲ್ಲಿ ಇವರಿಬ್ಬರು ಸ್ಪರ್ಧಿಗಳಾಗಿದ್ದರು. ಶೋ ಮುಗಿದು ಇಷ್ಟು ದಿನಗಳ ನಂತರ ಕವಿತಾ ಅವರು ದೂರು ನೀಡಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಆಂಡಿ ಕಿರುಕುಳ ನೀಡಿದ್ದಾಗಿ ಅವರು ಹೇಳಿದ್ದಾರೆ. 'ಬಿಗ್ ಬಾಸ್' ಮನೆಯೊಳಗೆ ಟಾಸ್ಕ್ ನಡೆಯುವ ಸಂದರ್ಭದಲ್ಲಿ ಆಂಡಿ ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗಿದೆ. ಈ ಬಗ್ಗೆಯೂ ಮನೆಯೊಳಗೆ ಗಲಾಟೆ ಮಾಡಿ, 'ಬಿಗ್ ಬಾಸ್'ಗೆ ತಿಳಿಸಲಾಗಿತ್ತು. 'ಬಿಗ್ ಬಾಸ್' ಸೂಚನೆ ಬಳಿಕವೂ ಆಂಡಿ ಕೆಟ್ಟದಾಗಿ ಮಾತನಾಡುವ ಮೂಲಕ ಮಾನಸಿಕ ಕಿರುಕುಳ ನೀಡಿದ್ದಾರೆ.ಅಲ್ಲದೇ, ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಆಂಡಿ ವರ್ತನೆಯಿಂದ ಬೇಸತ್ತ ಕವಿತಾ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ, ಈ ಆರೋಪಗಳನ್ನು ಆಂಡಿ ಅಲ್ಲಗಳೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದರಿಂದ ಬಿಗ್ ಬಾಸ್ ಕಾರ್ಯಕ್ರಮ ಮೇಲೆ ಪ್ರಭಾವ ಬೀರುತ್ತದೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments