ಬಿಗ್ ಬಾಸ್ ನಂತರ ಅಕ್ಷತಾ ಎಲ್ಲಿ ಹೋದ್ರು, ಏನ್ ಮಾಡ್ತಿದ್ದಾರೆ ಗೊತ್ತಾ..?

11 Feb 2019 1:12 PM | Entertainment
10222 Report

ಬಿಗ್ ಬಾಸ್ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಷೋಗಳಲ್ಲಿ ಒಂದು,ಕಿಚ್ಚಾ ಸುದೀಪ್ ನಿರೂಪಣೆ ಇರುವ ಈ ಕಾರ್ಯಕ್ರಮ 6 ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದೆ.ಅನೆಕ ಸ್ಪರ್ಧಿಗಳು ಬಿಗ್ ಬಾಸ್ ಪ್ರವೆಶಿಸಿದ ನಂತರ ಉತ್ತಮವಾದ ಆವಕಾಶಳನ್ನ ಪಡೆದಿದ್ದಾರೆ. ಅಷ್ಟೆ ಅಲ್ಲದೆ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಬಿಗ್ ಬಾಸ್ 6 ನಲ್ಲಿ ಹೆಚ್ಚು ಸುದ್ದಿ ಮಾಡಿದ್ದು ಅಕ್ಷತಾ ಪಾಂಡವಪುರ ಮತ್ತು ಎಂ.ಜೆ.ರಾಕೇಶ್. ಇವರಿಬ್ಬರ ಫ್ರೆಂಡ್ ಶಿಪ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.ಈ ನಡುವೆ ಅಕ್ಷತಾ ಪಾಂಡವಪುರ ರವರಲ್ಲಿನ ನಟನೆಯ ಪ್ರತಿಭೆಯನ್ನೂ ಜನ ಗುರುತಿಸಿದ್ದರು.

ಅಕ್ಷತಾ ಬಿಗ್ ಬಾಸ್’ಗೆ ಹೋಗುವ ಮೊದಲೆ ನಟನೆಯಲ್ಲಿ ರಾಜ್ಯ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು. ,ಹಾಗೆಯೆ ಬಿಗ್ ಬಾಸ್ ನಲ್ಲಿ ನಡೆದ ಒಂದು ಟಾಸ್ಕ್ ಒಂದರಲ್ಲಿ ಉತ್ತಮ ನಟಿಯಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.., ಇದೀಗ ಬಿಗ್ ಬಾಸ್ ಮುಗಿದ ನಂತರ,ಅಕ್ಷತಾ ಆಕ್ಟಿಂಗ್ ಕೋರ್ಸ್ ಪ್ರಾರಂಭ ಮಾಡಿದ್ದಾರೆ, ಆಮ್ ಆನ್ ಆಕ್ಟರ್ ಹೆಸರಿನಲ್ಲಿ ಅಕ್ಷತಾ ಪಾಂಡವಪುರ ಅಭಿನಯ ತರಬೇತಿ ಶುರು ಮಾಡಿದ್ದಾರೆ.ಇದು ಮೂರು ತಿಂಗಳ ತರಬೇತಿ ಆಗಿದ್ದು,ವಾರ-ವಾರಾಂತ್ಯದಲ್ಲಿ ಬ್ಯಾಚ್ ಪ್ರಕಾರ ಟ್ರೇನಿಂಗ್ ಕೊಡಲಿದ್ದಾರೆ.ಬ್ಯಾಚ್ ನಲ್ಲಿ ಹತ್ತು ಜನರಿಗೆ ಮಾತ್ರ ಅವಕಾಶ ಇದ್ದು,ಅಕ್ಷತಾ ಪಾಂಡವಪುರ ಸೇರಿದಂತೆ ರಂಗಭೂಮಿ ಕಲಾವಿದರು ಅಭಿನಯ ತರಬೇತಿ ಹೇಳಿಕೊಡಲಿದ್ದಾರೆ. ಬಿಗ್ ಬಾಸ್ ಗೆ ಹೋದ ನಂತರ ಎಲ್ಲರೂ ಕೂಡ ಸೆಲೆಬ್ರೆಟಿ ಆಗಿಬಿಟ್ಟಿದ್ದಾರೆ. ಒಳ್ಳೆಯ ಹೆಸರನ್ನು ಮಾಡುತ್ತಿದ್ದಾರೆ.

Edited By

Manjula M

Reported By

Manjula M

Comments