ಲೀಲಾವತಿಯವರ ನಿಜವಾದ ಗಂಡ ಯಾರ್ ಗೊತ್ತಾ..? ಕೊನೆಗೂ ಸತ್ಯ ಬಾಯ್ಬಿಟ್ಟ ನಟಿ..!!

11 Feb 2019 10:36 AM | Entertainment
3050 Report

ಚಂದನವನದಲ್ಲಿ ನಡೆಯುವ ಎಷ್ಟು ವಿಷಯಗಳು ನಮಗೆ ತಿಳಿದೆ ಇರುವುದಿಲ್ಲ… ಅದೆಷ್ಟೋ ವಿಷಯಗಳು ಪ್ರಶ್ನೆಯಾಗಿಯೇ ಉಳಿದುಬಿಡುತ್ತವೆ.. ಸಾಮಾನ್ಯವಾಗಿ ನಿಮಗೆಲ್ಲ ಗೊತ್ತಿರುವ ಹಾಗೆ ಕನ್ನಡದ ಹಿರಿಯ ನಟಿ ನಟಿ ಲೀಲಾವತಿ ಮತ್ತು ಡಾ ರಾಜಕುಮಾರ್ ಅವರ ಬಗ್ಗೆ ಸಾಕಷ್ಟು ವರ್ಷಗಳಿಂದ ಕನ್ನಡದ ಜನತೆ ಒಂದು ಅಭಿಪ್ರಾಯವನ್ನು ಇಟ್ಟುಕೊಂಡಿದ್ದರು. ಲೀಲಾವತಿ ಅವರ ನಿಜವಾದ ಗಂಡ ಯಾರು, ವಿನೋದ್ ರಾಜಕುಮಾರ್ ಅವರ ತಂದೆ ಯಾರು ಎಂಬುದು ಇಲ್ಲಿಯ ತನಕ ಹಿರಿಯ ನಟಿ ಲೀಲಾವತಿ ಅವರು ಗುಟ್ಟಲ್ಲೇ ಎಲ್ಲಿಯೂ ಬಿಟ್ಟು ಕೊಟ್ಟಿರಲಿಲ್ಲ..  ಇದರ ಬಗೆ ಮಾಧ್ಯಮಗಳ ಮುಂದೆ ಮಾತನಾಡುತ್ತಿರುಲಿಲ್ಲ.

ಇತ್ತೀಚೆಗಷ್ಟೆ ಖಾಸಗಿ ವಾಹಿನಿಯಲ್ಲಿ ಮಾತನಾಡಿದ ನಟಿ ಲೀಲಾವತಿ ಅವರು ತಮ್ಮ ಮನದಾಳದ ಮತ್ತು ತಮ್ಮ ಹಳೆಯ ಜೀವನವನ್ನು ಮೆಲಕು ಹಾಕಿದ್ದಾರೆ. ನಟಿ ಲೀಲಾವತಿಯವರೊಡನೆ ಪೋಟೋದಲ್ಲಿರುವ ವ್ಯಕ್ತಿ ಯಾರು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡಬಹುದು. ಅವರು ಬೇರೆ ಯಾರೂ ಅಲ್ಲ ನಟಿ ಲೀಲಾವತಿಯವರ ಪತಿ ಮಹಾಲಿಂಗ ಭಾಗವತರ್. ಮಹಾಲಿಂಗ ಭಾಗವತರ್ ಕೂಡ ಒಬ್ಬ ನಟರೇ. ಸಿನೆಮಾ ರಂಗಕ್ಕೆ ಬರುವ ಮೊದಲು ಅವರದ್ದೇ ಒಂದು ನಾಟಕದ ಕಂಪನಿ ನಡೆಸುತ್ತಿದ್ದರು. ಮತ್ತು ನಟಿ ಲೀಲಾವತಿಯವರನ್ನು ಗುರುತಿಸಿ ರಂಗಭೂಮಿಗೆ ಕರೆ ತಂದವರು ಇವರೇ, ಅವರ ನಾಟಕ ಕಂಪನಿ ನಷ್ಟದಿಂದ ಮುಚ್ಚಿದಾಗ ಲೀಲಾವತಿಯವರೊಡನೆ ಸುಬ್ಬಯ್ಯ ನಾಯ್ಡು ರವರ ನಾಟಕ ಮಂಡಳಿಗೆ ಅವರು ಕೂಡ ಸೇರಿದರು, ಅಲ್ಲಿಯೂ ಸಹ ನಾಟಕಗಳು ಕಡಿಮೆಯಾದವು, ಚಿತ್ರರಂಗದಲ್ಲಿ ನಟಿಸುವ ಮನಸ್ಸಿನಿಂದ ಲೀಲಾವತಿ ಅವರೊಂದಿಗೆ ಮೈಸೂರು ನಂತರ ಮದ್ರಾಸಿಗೆ ಬಂದರು.

ನಿರ್ಮಾಪಕರನ್ನು ಬೇಟಿ ಮಾಡಿ ಲೀಲಾವತಿಯವರಿಗೆ ಸಿನೆಮಾ ಗಳಲ್ಲಿ ನಟಿಸುವ ಅವಕಾಶಗಳನ್ನು ಕೊಡಿಸಿದರು ಎನ್ನುತ್ತಾರೆ ಲೀಲಾವತಿಯವರು.., ನಾನು ಮತ್ತು ನನ್ನ ಮಗ ವಿನೋದ್ ರಾಜ್ ಕುಮಾರ್ ಸಾಮನ್ಯವಾಗಿ ಪ್ರತಿ ವರ್ಷವೂ ತಿರುಪತಿ ಗೆ ಹೋಗಿ ಮುಡಿ ಕೊಟ್ಟಿಬರುವುದು ವಾಡಿಕೆಯಲ್ಲಿದೆ… ಎಂದಿನಂತೆ ರಾಜ್ ಕುಮಾರ್ ಮರಣ ಹೊಂದಿದ ಹಿಂದಿನ ದಿನ ನಾವು ತಿರುಪತಿಗೆ ಹೋಗಿದ್ದೆವು. ತಿರುಪತಿ ಇಂದ ವಾಪಸ್ ಬರುತ್ತಿರುವಾಗ ಅವರು ನಮ್ಮನೆಲ್ಲಾ ಬಿಟ್ಟು ತೆರಳಿದ ಸುದ್ದಿ ಬಂತು, ಆ ವಿಚಾರದಿಂದ ನಾವು ಅವರ ಪಾರ್ಥಿವ ಶರೀರವನ್ನು ನೋಡಲು ಬಂದೆವು ಆದರೆ ಜನಗಳು ಅದನ್ನು ಬೇರೆ ತರ ತಿಳಿದು ನಮಗೂ ಅವರಿಗೂ ಸಂಬಂಧ ಇದೆ ಎನ್ನುವ ರೀತಿ ಮಾತನಾಡಿದರು .. ಒಟ್ಟಿನಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಮಾತನ್ನು ಎಲ್ಲ ವಿಷಯದಲ್ಲೂ ಅನುಸರಿಸಬೇಕು ಎನಿಸುತ್ತದೆ,

Edited By

Manjula M

Reported By

Manjula M

Comments