ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರ ಪವರ್ ಸ್ಟಾರ್ ಅಂಡ್ ರಾಕಿಂಗ್ ಸ್ಟಾರ್..!!

11 Feb 2019 9:36 AM | Entertainment
451 Report

ಸ್ಯಾಂಡಲ್’ವುಡ್ ನಲ್ಲಿ ಸ್ಟಾರ್’ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ತೀರ ಕಡಿಮೆ… ಆದರೆ ಅಭಿಮಾನಿಗಳು ಮಾತ್ರ ಸ್ಟಾರ್ ನಟರನ್ನು ಒಂದೇ ಸ್ಕ್ರೀನ್’ ನಲ್ಲಿ ನೋಡೋಬೇಕು ಎನ್ನುವ ಇಂಗಿತವನ್ನು ಯಾವಾಗಲೂ ಕೂಡ ಹೇಳುತ್ತಿರುತ್ತಾರೆ..ಅದೇ ರೀತಿ ಪವರ್ ಸ್ಟಾರ್ ಪುನೀರ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಂದೆ ಸಿನಮಾದಲ್ಲಿ ಕಾಣಿಸಿಕೊಳ್ಳಲಿ ಅನ್ನೋದು ಕೂಡ ಅಭಿಮಾನಿಗಳ ಆಸೆ.  ಒಂದು ಕಡೆ 'ಕೆಜಿಎಫ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ದಾಖಲೆ ಮಾಡಿದೆ. ಮತ್ತೊಂದು ಕಡೆ 'ನಟ ಸಾರ್ವಭೌಮ' ಸಿನಿಮಾ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇವುಗಳ ನಡುವೆಯೇ ಪವರ್ ಸ್ಟಾರ್ ಹಾಗೂ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಪುನೀತ್ ಹಾಗೂ ಯಶ್ ಗೆ ''ರಾಕಿಂಗ್ ಸ್ಟಾರ್ ಮತ್ತು ಪವರ್ ಸ್ಟಾರ್ ಇಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳಿಗೆ ಆಸೆ ಇದೆ.?'' ಎಂಬ ಪ್ರಶ್ನೆ ಮಾಧ್ಯಮದವರ ಕಡೆಯಿಂದ ಬಂತು. ಇದಕ್ಕೆ ಇಬ್ಬರು ನಟರು ಉತ್ತರ ನೀಡಿ. ಮೊದಲ ಮಾತನಾಡಿದ ಯಶ್ ''ಅಪ್ಪು ಸರ್ ಹೇಳಬೇಕು.. ಅವರು ಹೇಳಿದರೆ ಖಂಡಿತ ಸಿನಿಮಾ ಮಾಡುತ್ತೇವೆ.'' ಎಂದು ನಗು ನಗುತ್ತಲೆ ಉತ್ತರ ನೀಡಿದರು. ನಂತರ ಪುನೀತ್ ಕೂಡ '' ಒಟ್ಟಿಗೆ ಸಿನಿಮಾ ಮಾಡಬೇಕು ಎಂಬ ಆಸೆ ನನಗೆ ಖಂಡಿತವಾಗಿ ಇದೆ. ಅವರಿಗೂ ಇಷ್ಟ ಇದೆ. ದೇವರ ದಯೆಯಿಂದ ಹಾಗೆ ಇದ್ದರೆ ಆದಷ್ಟು ಬೇಗ ಮಾಡೋಣ''. ಎಂದು ಕೈ ಜೋಡಿಸಿದರು. ಈ ಇಬ್ಬರು ಸ್ಟಾರ್ ನಟರು ಸಿನಿಮಾ ಮಾಡಿದರೆ ಅಭಿಮಾನಿಗಳಿಗೆ ದಿಪ್ ಖುಷ್ ಆಗೋದಂತು ಸುಳ್ಳಲ್ಲ…

Edited By

Manjula M

Reported By

Manjula M

Comments