ಕೊಳೆತ ಸ್ಥಿತಿಯಲ್ಲಿ ಸ್ಟಾರ್ ನಟನ ಶವ ಪತ್ತೆ..!! ಯಾರ್ ಗೊತ್ತಾ ಆ ಸ್ಟಾರ್ ನಟ..?

10 Feb 2019 6:58 PM | Entertainment
590 Report

ಇತ್ತಿಚಿಗೆ ನಟ ನಟಿಯರ ಕೊಲೆ ಆಗುವುದು ಇಲ್ಲ ಅವರೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿ ಹೋಗಿದೆ.. ಇ್ತ್ತಿಚಿಗೆ ನಾವೆಲ್ಲಾ ತಿಳಿದಂತೆ ಸಾಕಷ್ಟು ಸ್ಟಾರ್ ನಟ ನಟಿಯರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.. ಅದೇ ರೀತಿ ಮತ್ತೆಬಾಲಿವುಡ್ ಚಿತ್ರಗಳಲ್ಲಿ ಖಳ ನಟನಾಗಿ ಮಿಂಚಿದ್ದ ಮಹೇಶ್ ಆನಂದ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.ಮಹೇಶ್ ಆನಂದ್ ಅವರ ಪತ್ನಿ ಮಾಸ್ಕೋದಲ್ಲಿ ನೆಲೆಸಿದ್ದಾರೆ..

ಮುಂಬೈ ನಿವಾಸದಲ್ಲಿ ಮಹೇಶ್ ಆನಂದ್ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಕುಡಿತದ ಚಟಕ್ಕೊಳಗಾಗಿದ್ದ 57 ವರ್ಷದ ಮಹೇಶ ಆನಂದ್ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆಯಾದರೂ ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಬಹಿರಂಗವಾಗಲಿದೆ. ಬಿಗ್ ಬಿ ಅಮಿತಾಬ್ ಬಚ್ಚನ್, ಧರ್ಮೇಂದ್ರ, ಗೋವಿಂದ, ಸಂಜಯ್ ದತ್ ಸೇರಿದಂತೆ ಬಾಲಿವುಡ್ ನ ಖ್ಯಾತ ನಾಯಕ ನಟರ ಚಿತ್ರಗಳಲ್ಲಿ ಮಹೇಶ್ ಆನಂದ್ ಅಭಿನಯಿಸಿದ್ದು, ಕಳೆದ ತಿಂಗಳು ಬಿಡುಗಡೆಯಾದ ಗೋವಿಂದಾ ನಿರ್ದೇಶನದ 'ರಂಗೀಲಾ ರಾಜ' ಚಿತ್ರದಲ್ಲಿ ಮಹೇಶ್ ಆನಂದ್ ಕಡೆಯದಾಗಿ ಕಾಣಿಸಿಕೊಂಡಿದ್ದರು.

Sponsored

Edited By

Manjula M

Reported By

Manjula M

Comments