ರಿಯಲ್ ಸ್ಟಾರ್ ಉಪ್ಪಿ ಆ ಪೋಟೋ ನೋಡದೆ ಮಲಗುವುದಿಲ್ಲವಂತೆ, ಏಳುವುದಿಲ್ಲವಂತೆ…!!  ಆ ವ್ಯಕ್ತಿ ಯಾರ್ ಗೊತ್ತಾ..?

09 Feb 2019 7:53 AM | Entertainment
1964 Report

ಫಿಲ್ಮ್ ಇಂಡಸ್ಟ್ರಿಗೆ ಬಂದವರಿಗೆಲ್ಲಾ ಒಬ್ಬೊಬ್ಬ ಗಾಢ್ ಪಾದರ್ ಇದ್ದೆ ಇರುತ್ತಾರೆ.. ಆದರೆ ಕೆಲವರು ಮಾತ್ರ ಅವರನ್ನು ತುಂಬಾ ಅಚ್ಚು ಹಚ್ಚಿಕೊಂಡಿರುತ್ತಾರೆ.. ಅವರಿಲ್ಲದ ಕ್ಷಣವನ್ನು ನೆನಪಿಸಿಕೊಳ್ಳುತ್ತಾನೆ ಇರುತ್ತಾರೆ.. ಇಂತವರ ಸಾಲಿಗೆ ಸೇರುವವರು ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಕೂಡ ಒಬ್ಬರು..ಅವರ ಗಾಢ್ ಪಾಧರ್ ಬಗ್ಗೆ ಏನ್ ಹೇಳಿದರೆ ಗೊತ್ತಾ..? ”ಒಂದು ಸಾರಿ ಶೂಟಿಂಗ್ ನಿಂದ ಮನೆಗೆ ಹೊರಡುವಾಗ ‘ಬರ್ತಿನಿ ಉಪೇಂದ್ರ’ ಅಂತ ಹೇಳಿ ಹೋದರು. ಆಗ ನನ್ನ ಹೆಸರು ಇವರಿಗೆ ನೆನಪಿದೆ ಅಂತ ತುಂಬ ಖುಷಿ ಆಗಿತ್ತು. ಈಗಲೂ ನಮ್ಮ ಆಫೀಸ್ ನಲ್ಲಿ ಅವರ ಫೋಟೋ ಇವೆ. ನಾನು ಮಲಗುವಾಗ ಅವರ ಫೋಟೋ ನೋಡಿ ಮಲಗಬೇಕು. ಎದ್ದಾಗ ಅವರ ಫೋಟೋ ನೋಡಿ ಏಳಬೇಕು ಅಂತ ” ಉಪೇಂದ್ರ  ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಹಲವು ನಟ, ನಿರ್ದೇಶಕರಿಗೆ ಶಂಕರ್ ನಾಗ್ ಸ್ಫೂರ್ತಿ. ಇಂದಿಗೂ ಅನೇಕರು ಅವರ ರೀತಿಯೇ ಬೆಳೆಯಬೇಕು ಎಂದು ಚಿತ್ರರಂಗಕ್ಕೆ ಬರುತ್ತಾರೆ. ಇವತ್ತಿನ ದೊಡ್ಡ ನಟರು ಶಂಕರ್ ನಾಗ್ ಅವರ ದೊಡ್ಡ ಅಭಿಮಾನಿಗಳಾಗಿದ್ದಾರೆ. ನಟ ಉಪೇಂದ್ರ ಕೂಡ ಶಂಕರ್ ನಾಗ್ ಅವರ ದೊಡ್ಡ ಫ್ಯಾನ್. ಅನೇಕರು ಉಪೇಂದ್ರ ಅವರನ್ನು ಶಂಕರ್ ನಾಗ್ ಅವರಿಗೆ ಹೋಲಿಸುತ್ತಾರೆ. ಹೀಗಿರುವಾಗ ಉಪೇಂದ್ರ ಮತ್ತು ಶಂಕರ್ ಒಮ್ಮೆ ಒಟ್ಟಿಗೆ ಕಾರ್ ನಲ್ಲಿ ಪ್ರಯಾಣ ಮಾಡಿದ್ದರು. ಆ ವಿಷಯವನ್ನು ಈ ಹಿಂದೆ ಉಪೇಂದ್ರ  ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.  ಉಪೇಂದ್ರರವರ ಆಪೀಸ್ ನಲ್ಲಿಯೂ ಕೂಡ ಶಂಕರ್ ನಾಗ್ ಪೋಟೋ ಇದೆಯಂತೆ.. ಇದರಲ್ಲಿಯೇ ಗೊತ್ತಾಗುತ್ತೆ ಉಪ್ಪಿ ಶಂಕರ್ ನಾಗ್ ಮೇಲೆ ಎಷ್ಟು ಅಭಿಮಾನ  ಇಟ್ಟಿದ್ದರು ಅಂತ.. ಶಂಕರ್ ನಾಗ್ ಇಂದು ನಮ್ಮೊಂದಿಗೆ ಇಲ್ಲ… ಆದರೆ ಅವರ ನೆನಪು ಯಾರಲ್ಲೂ ಮಾಸಿಲ್ಲ..

Edited By

Manjula M

Reported By

Manjula M

Comments