ನಿನಾಸಂ ಸತಿಶ್ ಸಿನಿಮಾ ವಿರುದ್ಧ ಡಿಕೆ.ರವಿ ತಾಯಿ ದೂರು…!!!

08 Feb 2019 5:59 PM | Entertainment
1875 Report

ಸ್ಯಾಂಡಲ್’ವುಡ್ನಲ್ಲಿ ಭಾರೀ ಕುತೂಹಲ ಮೂಡಿಸಿರುವ ಸಿನಿಮಾ ಚಂಬಲ್ ಚಿತ್ರದ ಬಗ್ಗೆ ಐಎಎಸ್ ಅಧಿಕಾರಿ ಡಿಕೆ ರವಿ ತಾಯಿ ಫಿಲ್ಮ್ ಚೇಂಬರ್’ಗೆ ದೂರು ನೀಡಿದ್ದಾರೆ. ನನ್ನ ಮಗನ ಜೀವನ ಕಥೆಯನ್ನು ಚಂಬಲ್ ಸಿನಿಮಾದಲ್ಲಿ ಬಳಸಲಾಗಿದೆ.  ಅಂದಹಾಗೇ ರವಿ ಜೀವನ ಚಿತ್ರವನ್ನು ಸಿನಿಮಾ ಮಾಡಲು ಹೊರಟಿರುವ ಚಿತ್ರತಂಡದ ವಿರುದ್ಧ ತಾಯಿ ದೂರು ಸಲ್ಲಿಸಿದ್ದಾರೆ.

ಈ ಕುರಿತು ಕುಟುಂಬದ ಸದಸ್ಯರ ಕಡೆಯಿಂದ ಚಿತ್ರತಂಡ ಯಾವುದೇ ಅನುಮತಿ ಪಡೆದಿಲ್ಲ.ಬಿಡುಗಡೆಗೆ ಮುನ್ನ ನನಗೆ ಸಿನಿಮಾ ತೋರಿಸಬೇಕು.ಆದರೆ ನನ್ನನ್ನು ಯಾರು ಸಂಪರ್ಕಿಸಲಿಲ್ಲ.  ಒಂದು ವೇಳೆ ಚಿತ್ರದಲ್ಲಿ ಸತ್ಯಕ್ಕೆ ದೂರವಾದ ಅಂಶಗಳಿದ್ರೆ ದೂರು ಕೊಡಲು ಸಿದ್ಧಳಾಗಿದ್ದೇನೆ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ವಾಣಿಜ್ಯ ಮಂಡಳಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಚಂಬಲ್ ಟ್ರೇಲರ್ ನೋಡಿದೆ. ಸಿನಿಮಾ ಟ್ರೈಲರ್ ನಲ್ಲಿ ಡಿಕೆ ರವಿ ಗೆ ಸಂಬಂಧಿಸಿದ ಕೆಲ ಚಿತ್ರಣಗಳನ್ನು ತೋರಿಸಿದ್ದಾರೆ. ಅದನ್ನು ಯಾರ ಅನುಮತಿಯು ಇಲ್ಲದೇ ತೋರಿಸಿದ್ದಾರೆ..? ಈ ಸಂಬಂಧ ಸಿನಿಮಾ ರಿಲೀಸ್ ಆಗುವ ಮುಂಚೆ ನಮಗೆ ತೋರಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

Sponsored

Edited By

Kavya shree

Reported By

Kavya shree

Comments