ಈ ಹೀರೋಯಿನ್ನೇ ನಿಮ್ಮ ಮುಂದಿನ ಸಿನಿಮಾದ ನಾಯಕಿಯಾಗ್ಲೀ :ಪ್ಲೀಸ್ ಅಪ್ಪು ಸರ್..?!!!

08 Feb 2019 4:09 PM | Entertainment
2053 Report

ಸ್ಯಾಂಡಲ್’ವುಡ್’ನ ಸಿನಿಮಾಗಳು ವಿದೇಶಗಳಲ್ಲೂ ಭರ್ಜರಿ ಸೌಂಡು ಮಾಡುತ್ತಿವೆ. ಎರಡು ಮೂರು ವರ್ಷಗಳ ಬಳಿಕ ಸೂಪರ್ ಸ್ಟಾರ್’ಗಳ  ಬಹು ನಿರೀಕ್ಷಿತ ಸಿನಿಮಾಗಳು ಸೂಪರ್ ಹಿಟ್ ಕಾಣುತ್ತಿವೆ. ನಿನ್ನೆ ರಿಲೀಸ್ ಆಗಿರುವ ನಟ ಸಾರ್ವಭೌಮ ಸಿನಿಮಾಗೆ  ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕಿಜಿಎಫ್ ದಾಖಲೆಯನ್ನು ಮುರಿದು ಮಂದೋಗುತ್ತಿರುವ  ನಟ ಸಾರ್ವಭೌಮದ ಇಂದಿನ ದಿನದ ಕಲೆಕ್ಷನ್ ನಿರೀಕ್ಷೆಗೂ ಮೀರಿದ್ಯಂತೆ ಎಂಬ ಮಾಹಿತಿ ಇದೆ. ಆದರೆ ಈ ಮಧ್ಯೆದಲ್ಲಿಯೇ ಅಭಿಮಾನಿಗಳು ಅಪ್ಪುಗೆ ಒಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.

ನಟ ಸಾರ್ವಭೌಮ ಸಿನಿಮಾ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಡಿಫರೆಂಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮಾ ಪರಮೇಶ್ವರ್'ನ್ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ ಚೆಲುವೆ. ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಂ ಕೂಡ ಸಾಥ್ ಕೊಟ್ಟಿದ್ದಾರೆ. ನಟ ಸಾರ್ವಭೌಮ ನಂತರ ಪುನೀತ್ 'ಯುವರತ್ನ' ಸಿನಿಮಾಗೆ ಫುಲ್ ತಯಾರಿನಲ್ಲಿದ್ದಾರೆ. ನಟ ಸಾರ್ವಭೌಮ ಸಕ್ಸಸ್ ಆಗುತ್ತಿದ್ದಂತೇ ಪುನೀತ್ ಏಕಾಗ್ರತೆ ಇದೀಗ ಯುವರತ್ನ ದತ್ತ ಸಾಗಿದೆ. ಹೀಗಿರುವಾಗ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ಗೆ ಒಂದು ಸಲಹೆ ಕೊಟ್ಟಿದ್ದಾರಂತೆ. 'ರಾಜಕುಮಾರ' ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಟನ ಕಾಂಬಿನೇಷನ್ ಯುವರತ್ನ ಚಿತ್ರದಲ್ಲಿ ಒಟ್ಟಾಗಿದ್ದು, ಫೆಬ್ರವರಿ 14 ರಂದು ಚಿತ್ರೀಕರಣ ಆರಂಭ ಮಾಡ್ತಿದೆ.

ಯುವರತ್ನ ಸಿನಿಮಾಗೆ ನಾಯಕಿ ಯಾರೆಂಬುದು ಗೊತ್ತಿಲ್ಲ. ಈಗಾಗಲೇ ಆಯ್ಕೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ನಟ ಸಾರ್ವಭೌಮ ಸಿನಿಮಾ  ನೋಡಿದ ಅಭಿಮಾನಿಗಳು ಅನುಪಮಾ ಪರಮೇಶ್ವರನ್ ಅವರನ್ನೇ ಆಯ್ಕೆ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಅಪ್ಪು-ಅನುಪಮಾ ಕಾಂಬಿನೇಷನ್ ಸೂಪರ್ ಆಗಿದೆ. ಯುವರತ್ನಗೆ ಇವರೇ ನಾಯಕಿಯಾಗಲೀ ಎಂದಿದ್ದಾರಂತೆ. ಈಗಾಗಲೇ ಹೊರ ಭಾಷೆಯಿಂದ ನಾಯಕಿಯನ್ನು ಕರೆತರುವಲ್ಲಿ ಇದ್ದಾರೆ ಚಿತ್ರತಂಡ ಎಂಬ ಮಾಹಿತಿ ಇತ್ತು. ಯುವರತ್ನಾ'ಗೆ ನಾಯಕಿಯಾಗಿ ತಮನ್ನಾ, ಕೀರ್ತಿ ಸುರೇಶ್, ಕಾಜಲ್ ಹೆಸರು ಕೂಡ ಕೇಳಿ ಬಂದಿದೆ. ಆದರೆ ಅಭಿಮಾನಿಗಳು ಮಾತ್ರ ಅನುಪಮಾ ಅವರೇ ಇರಲಿ ಎಂದಿದ್ದಾರೆ. ಅಪ್ಪು ಅಭಿಮಾನಿಗಳ ಬೇಡಿಕೆಯನ್ನು ಪುರಷ್ಕರಿಸುತ್ತಾರಾ..? ಹಾಗೊಂದು ವೇಳೆ ಈಗಾಗಲೇ ಹೀರೋಯಿನ್ ನೇಮ್ ಫೈನಲ್ ಆಗಿದ್ಯಾ ಎಂಬುದು ಗೊತ್ತಿಲ್ಲ. ಸಿನಿಮಾ ತಂಡ ನಾಯಕಿ ಯಾರೆಂದು ಬಹಿರಂಗ ಪಡಿಸೋತನಕ ಕಾದು ನೋಡಬೇಕಿದೆ.

Edited By

Kavya shree

Reported By

Kavya shree

Comments