ಬಾಣಂತಿ ರಾಧಿಕಾ ಪಂಡಿತ್ ರಿಂದ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್ : ಏನ್ ಗೊತ್ತಾ…?

08 Feb 2019 3:02 PM | Entertainment
2157 Report

ಸೋಶಿಯಲ್ ಮಿಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಕೆಲ ಸ್ಟಾರ್'ಗಳ ಪೈಕಿ ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು. ಸದ್ಯ ಮುದ್ದು ಸಿಂಡ್ರೆಲಾರೊಟ್ಟಿಗೆ ಟೈಮ್ ಸ್ಪೆಂಡ್ ಮಾಡ್ತಾ ಇರುವ ರಾಧಿಕಾ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅಂದಹಾಗೇ ಮಿಸಸ್ ರಾಮಾಚಾರಿ ಖ್ಯಾತಿಯ ನಟಿ ರಾಧಿಕಾ ಪಂಡಿತ್ ವೀಕೆಂಡ್ ಸ್ಪೆಷಲ್ ಅಭಿಮಾನಿಗಳಿಗಾಗಿ ಏನ್ ನ್ಯೂಸ್ ಕೊಟ್ಟಿದ್ದಾರೆ ಅಂತಾ ಯೋಚಿಸ್ತಿದ್ದೀರಾ...? ಸ್ಯಾಂಡಲ್’ವುಡ್ ಸಿಂಡ್ರೆಲಾ ರನ್ನು ತುಂಬಾ ಮಿಸ್ ಮಾಡ್ಕೊಳ್ತಾ ಇತ್ತು. ಮದುವೆಯಾದ ನಂತರ ಯಾವ ಸಿನಿಮಾಗಳಲ್ಲೂ ನಟಿ ರಾಧಿಕಾ ಕಾಣಿಸಿಕೊಂಡಿರಲಿಲ್ಲ. ಅಭಿಮಾನಿಗಳು ತಮ್ಮ ಸ್ಟಾರ್ ನಟಿಯನ್ನು ಇನ್ನು ಮುಂದೆ ತೆರೆಮೇಲೆ ನೋಡಲಾಗುವುದಿಲ್ಲವೇನೋ ಎನ್ನುತ್ತಿದ್ದರು.

ಹೌದು… ರಾಧಿಕಾ ಅವರು ಅಭಿನಯಿಸಿರುವ ‘ಆದಿಲಕ್ಷ್ಮಿ ಪುರಾಣ’ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಲಿದೆ. ಈ ಸುದ್ದಿಯನ್ನು ಅಭಿಮಾಣಿಗಳೊಂದಿಗೆ ಶೇರ್ ಮಾಡಿಕೊಂಡಿರುವ ಇವರು, ತಮ್ಮ ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ. ‘ಆದಿಲಕ್ಷ್ಮಿ ಪುರಾಣ’ ಸಿನಿಮಾದ ಪೋಸ್ಟರ್ ಹಾಕಿ, ಇಂದು ಸಂಜೆ 5 ಗಂಟೆಗೆ ಸಿನಿಮಾದ ಟೀಸರ್ ರಿಲೀಸ್ ಆಗುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ ಇದು ವೀಕೆಂಡ್ ಸ್ಪೆಷಲ್ ಎಂದು ಕೂಡ ಬರೆದು ಪೋಸ್ಟ್ ಮಾಡಿದ್ದಾರೆ. ಮದುವೆಯಾದ ಬಳಿಕ ಇದೇ ಅವರ ಮೊದಲ ಸಿನಿಮಾವಾಗಿದ್ದು ಈ ಬಗ್ಗೆ ಒಂದಷ್ಟು ಕ್ಲೂ ಬಿಟ್ಟು ಕೊಟ್ಟಿದ್ದರು. ಸದ್ಯ ರಾಧಿಕಾ  ಆದಿಲಕ್ಷ್ಮಿ ಪುರಾಣದಲ್ಲಿ ನಿರೂಪ್ ಭಂಡಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ರಾಕ್’ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಆದಿ ಪಾತ್ರದಲ್ಲಿ ನಿರೂಪ್ ಮಿಂಚಿದ್ರೆ, ಲಕ್ಷ್ಮಿ ಪಾತ್ರದಲ್ಲಿ  ರಾಧಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

Edited By

Kavya shree

Reported By

Kavya shree

Comments