ರೆಬೆಲ್ ಸ್ಟಾರ್ ಫ್ಯಾಮಿಲಿಯಿಂದ ಮತ್ತೊಬ್ರು ಸಿನಿಮಾಲ್ಯಾಂಡ್ ಗೆ ಎಂಟ್ರಿ….?!!!

08 Feb 2019 12:18 PM | Entertainment
327 Report

ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿ ಕೆಲವು ದಿನಗಳಷ್ಟೇ ಕಳೆದಿದ್ರೂ ಅವರ ಛಾಪು ಮಾತ್ರ ಹಚ್ಚಹಸಿರಾಗಿಯೇ ಇದೆ. ಪಿಟೀಲ್ ಚೌಡಯ್ಯನವರ ಮೊಮ್ಮಗ, ಮಂಡ್ಯದ ಗಂಡು ಅಂಬರೀಶ್ ಸ್ಯಾಂಡಲ್’ವುಡ್ ನ ಲೆಜೆಂಡಾ. ಸದ್ಯ ತಮ್ಮ ಮಗ ಅಭಿಷೇಕ್ ಅಂಬರೀಶ್ ‘ನನ್ನು ಕೂಡ ಸಿನಿಮಾ ಫೀಲ್ಡ್'ಗೆ ಪರಿಚಯಿಸಿದ್ರು. ಅಮರ್ ಮೂಲಕ ಸ್ಯಾಂಡಲ್ವುಡ್’ಗೆ ಆರಡಿ ಸ್ಟಾರ್ ಕೊಟ್ಟ ಕೊಡುಗೆ ಅವರದ್ದು. ಆದರೆ ಇದೀಗ ಇವರ ಕುಟುಂಬದ ಮತ್ತೊಬ್ರು ಸಿನಿಮಾಲ್ಯಾಂಡ್ಗೆ ಬರ್ತಾಯಿದ್ದಾರೆ.ಅದು ನಿನ್ನೆ ತಾನೆ ರಿಲೀಸ್ ಆದ ನಟ ಸಾರ್ವಭೌಮ ಮೂಲಕ.

ನಟಸಾರ್ವಭೌಮ ಸಿನಿಮಾ ನಿನ್ನೆ ದೇಶಾದ್ಯಂತ ರಿಲೀಸ್​ ಆಗಿ ಭರ್ಜರಿ ಫ್ರದರ್ಶನ ಕಾಣ್ತಾ ಇದೆ. ರಾಜ್ಯದಲ್ಲಿ ಮೊದಲ ದಿನವೇ 2000ಕ್ಕೂ ಹೆಚ್ಚು ಪ್ರದರ್ಶನ ಕಾಣೋ ಮೂಲಕ ಹೊಸದೊಂದು ದಾಖಲೆ ಮಾಡಿದೆ. ರಾಜ್ಯದ ವಿತರಣ ಹಕ್ಕು ಖರೀದಿಸಿರೋ ಧೀರಜ್​ ಎಂಟರ್​ಪ್ರೈಸಸ್​ ಸ್ಯಾಂಡಲ್​​ವುಡ್​ನಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. ಕನ್ನಡ ಸಿನಿಮಾಗಳನ್ನು ಬ್ರೇಕ್ ಮಾಡಿರುವ ನಟ ಸಾರ್ವಭೌಮ ವಿದೇಶಗಳಲ್ಲೂ ಭರ್ಜರಿಯಾಗಿ ತೆರೆಕಾಣುತ್ತಿದೆ. ಸಿನಿಮಾದ ವಿದೇಶಗಳ ವಿತರಣ ಹಕ್ಕನ್ನು ಖರೀದಿಸಿರೋ ಮದನ್​ ಅಂಬರೀಶ್ ಕುಟುಂಬದ ಕುಡಿ.  ಇಂದು ಅಮೇರಿಕಾ, ಆಸ್ಟ್ರೇಲಿಯಾ ಹಾಗೂ ಕೆನಡಾದಲ್ಲಿ ರಿಲೀಸ್​ ಮಾಡ್ತಾ ಇದ್ದಾರೆ. ಉಳಿದ ದೇಶಗಳಲ್ಲಿ ಸದ್ಯ ಸೆನ್ಸಾರ್​ಗೆ ಹೋಗಿರೋ ಸಿನಿಮಾ ಫೆ.16ರಂದು ರಿಲೀಸ್​ ಆಗಲಿದೆ. ಅಮೇರಿಕಾದಲ್ಲಿ ಒಟ್ಟು 46 ಥಿಯೇಟರ್​ಗಳಲ್ಲಿ ಸಿನಿಮಾ ರಿಲೀಸ್​ ಆಗ್ತಾ ಇದ್ದು, ಆಸ್ಟ್ರೇಲಿಯಾದಲ್ಲಿ 26 ಸೆಂಟರ್​ಗಳಲ್ಲಿ ಸಿನಿಮಾ ತೆರೆಕಾಣಲಿದೆ.ಅಂದಹಾಗೇ ಮದನ್ ಮತ್ತು ಆತನ ಪತ್ನಿ ಸೇರಿ 30 ಕ್ಕೂ ಹೆಚ್ಚು ದೇಶಗಳಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲ್ಯಾನ್ ಮಾಡಿದ್ದಾರಂತೆ. ಅಂಬರೀಶ್ ಮತ್ತು ದೊಡ್ಮನೆ ಕುಟುಂಬ ಮೊದಲಿನಿಂದಲೂ ಆತ್ಮೀಯರು. ಈ ಆತ್ಮೀಯತೆಗೆ ರಾಕ್’ಲೈನ್ ವೆಂಕಟೇಶ್ ಸೇತುವೆ ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂದು ಮದನ್ ಹೇಳಿದ್ದಾರೆ. ಅಂದಹಾಗೇ ಸಿನಿಮಾ ಲ್ಯಾಂಡ್'ಗೆ ನಟ ಸಾರ್ವಭೌಮ ಮೂಲಕ ಮತ್ತೊಬ್ರು ಎಂಟ್ರಿ ಕೊಟ್ಟಂತಾಗಿದೆ.

Edited By

Kavya shree

Reported By

Kavya shree

Comments