ಲವ್’ನಲ್ಲಿ ಬಿದ್ದ ಮಗಳಿಗೆ ಮದುವೆ ಫಿಕ್ಸ್ ಮಾಡಿದ್ರು ಸಿಹಿಕಹಿ ಚಂದ್ರು…!

08 Feb 2019 11:50 AM | Entertainment
606 Report

ಸಿಹಿಕಹಿ ಚಂದ್ರು ಹಾಸ್ಯ ನಟಸದ್ಯ ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೇ ಬಿಗ್ಬಾಸ್ ಗೂ ಹೋಗಿ ಬಂದ ಸಿಹಿಕಹಿ ಚಂದ್ರು ನಟಿ ಸಿಹಿಕಹಿ ಗೀತಾ ಅವರ ಪತಿ. ಮಗಳು ಹಿತಾ ಚಂದ್ರಶೇಖರ್ ಅವರನ್ನು ಸಿನಿಮಾ ಲ್ಯಾಂಡ್ ಗೆ ಪರಿಚಯಿಸಿ, ಈಗ ಹಿತಾ ಕೂಡ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿತಾ ಪ್ರೀತಿಗೆ ಬಿದ್ದಿರುವ ವಿಷಯ ಬಹಿರಂಗವಾಗುತ್ತಿದ್ದಂತೇ ಅಪ್ಪ ಚಂದ್ರು , ಮಗಳಿಗೆ ಮದುವೆ ಮಾಡಲು ಹೊರಟಿದ್ದಾರೆ. ಅಂದಹಾಗೇ ಹಿತಾ ಚಂದ್ರಶೇಖರ್  ಪ್ರೀತಿಸುತ್ತಿರುವ ನಟ ಸಿನಿಮಾ ರಂಗದವನೇ. ಮೊದಲು ಸ್ನೇಹಿತರಾಗಿದ್ದ ಜೋಡಿ ನಂತರ ಪ್ರೇಮಿಗಳಾದರು. ಚಾಕ್ಲೇಟ್ ಹೀರೋ ಖ್ಯಾತಿಯ ಕಿರಣ್ ಶ್ರೀನಿವಾಸ್ ಅವರೇ ಹಿತಾ ಮನಗೆದ್ದ ನಟ.

ಹಾಗೇ ಸುಮ್ಮನೇ ಸಿನಿಮಾ ಮೂಲಕ ಸ್ಯಾಂಲಡ್ವುಡ್ ಗೆ ಎಂಟ್ರಿಕೊಟ್ಟ ಕಿರಣ್ ಅಭಿಮಾನಿಗಳ ಮನವನ್ನಷ್ಟೇ ಅಲ್ಲದೇ ಹಿತಾ ಮನವನ್ನು ಕೂಡ ಗೆದ್ದಿದ್ದಾನೆ. ಈಗಾಗಲೇ ಅಪ್ಪನಿಗೆ ಮಗಳ ಲವ್ ಮ್ಯಾಟರ್ ಗೊತ್ತಾಗಿ ಇಬ್ಬರಿಗೂ ಮದುವೆ ಫಿಕ್ಸ್ ಮಾಡಿದ್ದಾರೆ. ಅಂದಹಾಗೇ ಈ ಹಿಂದೆಯೇ ಹಲವು ರಿಯಾಲಿಟಿ ಶೋ ವೇದಿಕೆಯಲ್ಲಿ ಅಪ್ಪ-ಅಮ್ಮರೊಟ್ಟಿಗೆ ಮಗಳು ಕಾಣಿಸಿಕೊಳ್ಳುತ್ತಿದ್ದಳು. ಹಿತಾ ಚಂದ್ರಶೇಖರ್ ಒಳ್ಳೆ ಡ್ಯಾನ್ಸರ್ ಕೂಡ ಹೌದು.ಮೊದಲಿನಿಂದಲೂ ಚಂದನವನದಲ್ಲಿ ಇವರಿಬ್ಬರ ಮಧ್ಯೆ ಇರುವ ಲವ್ ಗಾಸಿಪ್ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಆದರೆ ಇದೀಗ ಎಲ್ಲಾ ಗಾಸಿಪ್'ಗೂ ಫುಲ್ ಸ್ಟಾಪ್ ಬಿದ್ದಿದೆ. ಇತ್ತಿಚೆಗೆ ರಿಲೀಸ್​ ಆದ ಒಂಥರ ಬಣ್ಣಗಳು ಸಿನಿಮಾದಲ್ಲಿ ಹಿತಾ ಚಂದ್ರಶೇಖರ್​ ಹಾಗೂ ಕಿರಣ್ ಶ್ರೀನಿವಾಸ್​ ಒಟ್ಟಾಗಿ ಅಭಿನಯಿಸಿದ್ರು. ಅಂದಹಾಗೇ ಒಂಥರಾ ಬಣ್ಣಗಳು ಸಿನಿಮಾದಲ್ಲಿ ಇವರಿಬ್ಬರ ಸ್ನೇಹ-ಪ್ರೀತಿಯಾಗಿಮುಂದುವರೆದಿದೆ. ಇದೀಗ ಮನೆಯವರಿಗೂ ವಿಷಯ ಗೊತ್ತಾಗಿ ಮದುವೆ ತನಕ ಬಂದು ನಿಂತಿದೆ. ಕಿರಣ್ ಕೂಡ ಬಹುಭಾಷಾ ಕಲಾವಿದ, ಹಿರಿ ಕಿರುತೆರೆಯಲ್ಲಿ ಫೇಮಸ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಸಿಹಿಕಹಿ ಚಂದ್ರು ಫ್ಯಾಮಿಲಿಗೆ ಸೇರ್ತಾಯಿದ್ದಾರೆ.

 

Edited By

Kavya shree

Reported By

Kavya shree

Comments