ಡಾ.ರಾಜ್ ಮೊಮ್ಮಗನ ಜೊತೆ ಟಗರು ಪುಟ್ಟಿ ಫೋಟೋ ವೈರಲ್ …!!!

08 Feb 2019 10:31 AM | Entertainment
326 Report

ಸೋಶಿಯಲ್ ಮಿಡಿಯಾದಲ್ಲಿ ಕೆಂಡಸಂಪಿಗೆ ನಟಿ ಮಾನ್ವಿತಾ ಫೋಟೋ ವೈರಲ್ ಆಗಿದೆ. ಅಂದಹಾಗೇ ಟಗರು ಸಿನಿಮಾದಲ್ಲಿ ಬೋಲ್ಡ್ ಅಭಿನಯ ನೀಡಿ ಅಭಿಮಾನಿಗಳ ಮನಗೆದ್ದ ಪುಟ್ಟಿ ಅಲಿಯಾಸ್ ಮಾನ್ವಿತಾ ಸದ್ಯ ಹೊರ ಬಾಷೆಗಳಲ್ಲೂ ಬ್ಯುಸಿಯಾಗಿದ್ದಾರೆ. ಅವರ ಆ್ಯಕ್ಟಿಂಗ್ ನೋಡಿ ರಾಮ್ ಗೋಪಾಲ್ ವರ್ಮಾ ಅವರೇ ದಂಗಾದ್ರಂತೆ. ಅದೇನೆ ಇರಲೀ ಬಿಡಿ. ಆದರೆ ಇತ್ತೀಚಿಗೆ ಡಾ. ರಾಜ್ ಮೊಮ್ಮಗನ ಜೊತೆ ಮಾನ್ವಿತಾ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದೆ. ಡಾ. ರಾಜ್ ಕುಮಾರ್ ಅವರ ಮೊಮ್ಮಗ, ರಾಮ್ ಕುಮಾರ್ ಅವರ ಪುತ್ರ ಧೀರೇನ್ ರಾಮ್ ಕುಮಾರ್ ಜೊತೆ ಮಾನ್ವಿತಾ ಫೋಟೋ ನೋಡಿ ಎಲ್ಲರೂ ಕಮೆಂಟ್ ಮಾಡತೊಡಗಿದ್ದಾರೆ.

ಈ ಫೋಟೋ ನೋಡಿದವರು ನೈಸ್ ಪೇರ್ ಅಂತಾ ಕಮೆಂಟ್ ಮಾಡುತ್ತಿದ್ದಾರೆ. ಅಂದಹಾಗೇ ಫೋಟೋ ಹರಿದಾಡುತ್ತಿರೋದು ನಿಜ. ಆದರೆ ಅದು ರಿಯಲ್ನಲ್ಲಿ ಅಲ್ಲ, ಸಿನಿಮಾವೊಂದರ ಸ್ಟಿಲ್ ಫೋಟೋ  ಅಷ್ಟೆ.ಡಾ. ರಾಜ್ ಮೂರನೇ ಜನರೇಶನ್ ಸಿನಿಮಾ ಫೀಲ್ಡ್ ಗೆ ಕಾಲಿಡುತ್ತಿರುವುದು ಗೊತ್ತೇ ಇದೆ. ಸದ್ಯ ರಾಘವೇಂದ್ರ ರಾಜ್ಕುಮಾರ್ ಮಕ್ಕಳ ನಂತರ, ಅವರ ಅಳಿಯ ರಾಮ್ ಕುಮಾರ್ ಮಕ್ಕಳು ಕೂಡ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಧೀರೇನ್‌ ರಾಮ್‌ಕುಮಾರ್ ದಾರಿ ತಪ್ಪಿದ ಮಗನಾಗಿ ಚಂದನವನಕ್ಕೆ ಕಾಲಿಡ್ತಿರೋದು ಗೊತ್ತೇ ಇದೆ. ಕೆಂಡಸಂಪಿಗೆ ಮಾನ್ವಿತಾ ಧೀರೇನ್‌ಗೆ ಜೋಡಿಯಾಗಿದ್ದು ಮೊದಲ ಬಾರಿಗೆ ಫ್ರೆಶ್‌ ಪೇರ್ ಹೇಗೆ ಕಾಣುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಈ ಜೋಡಿ ಹೇಗಿದೆ ಅಂತಾ ಹೇಳ್ತಿದೆ.

ಸದ್ಯ ದಾರಿ ತಪ್ಪಿದ ಮಗ ಚಿತ್ರದ ಶೂಟಿಂಗ್ ನಡೀತಿದ್ದು ಸೆಟ್‌ನಲ್ಲಿ ಮಾನ್ವಿತಾ, ಧೀರೇನ್‌ ರಾಮ್‌ಕುಮಾರ್ ಸೆಲ್ಫಿ ತಗೊಂಡಿರೋ ಫೋಟೋನೇ ಸದ್ಯ ವೈರಲ್ ಆಗಿದೆ. ಸೀರೆ, ಒಡವೆಯಲ್ಲಿ ಟ್ರೆಡಿಶನಲ್ ಲುಕ್‌ನಲ್ಲಿ ಗ್ಲಾಮರ್ ಗೊಂಬೆ ಮಾನ್ವಿತಾ ಇದ್ರೆ, ಬ್ಲ್ಯಾಕ್ ಕಲರ್ ಜಾಕೆಟ್‌ನಲ್ಲಿ ಧೀರೇನ್‌ ಇದ್ದಾರೆ. ಚಿತ್ರದ ಪೋಸ್ಟರ್‌ ರಿಲೀಸ್‌ ಆದ ನಂತ್ರ ಮಾನ್ವಿತಾ ಧೀರೇನ್‌ಗೆ ನಾಯಕಿಯಾಗಿದ್ದು ಗೊತ್ತಾಗಿತ್ತು. ಇಬ್ರು ಜೊತೆಗಿರೋ ಪೋಸ್ಟರ್‌ ಇನ್ನೂ ಬಂದಿಲ್ಲ.  ಆದರೆ ಸೆಲ್ಫಿ ತೆಗೆದುಕೊಂಡಿರೋ ಫೋಟೋದಲ್ಲಿ ಇಬ್ಬರು ಅದ್ಭುತವಾಗಿ ಕಾಣುತ್ತಿದ್ದಾರೆ. ಆದ್ರೆ ಈ ಫೋಟೋನ ನೋಡಿಯೋ ಇಬ್ಬರ ಆನ್‌ಸ್ಕ್ರೀನ್‌ ಕೆಮೆಸ್ಟ್ರಿ ಹೇಗಿರಬಹುದು ಅಂತಾ ಅವರ ಅಭಿಮಾನಿಗಳು ಊಹಿಸಿಕೊಳ್ತಿದ್ದಾರೆ.ಈ ಫೋಟೋನ ಮಾನ್ವಿತಾ ಕೂಡ ತಮ್ಮ ಟ್ವಿಟರ್‌ ಖಾತೆಯಯಲ್ಲಿ ಶೇರ್‌ ಮಾಡಿದ್ದಾರೆ.ಈಗಾಗಲೇ ಧೀರೇನ್ ಡ್ಯಾನ್ಸ್, ಆ್ಯಕ್ಟಿಂಗ್, ಜಿಮ್ ಅಂತಾ ಅಭ್ಯಾಸ ಮಾಡಿ ಅಖಾಡಕ್ಕಿಳಿದಿದ್ದಾರೆ. ಈ ಹಿಂದೆ ಧೀರೇನ್ ಮಾವ ಪುನೀತ್ ರಾಜ್ ಕುಮಾರ್ ಕೂಡ ತಮಗಮ ಸಹೋದರಿ ಮಗನಿಗೆ ಬೆಸ್ಟ್ ವಿಶಸ್ ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments