ನಟಿಯನ್ನು ತುಂಡು ತುಂಡಾಗಿ ಕತ್ತರಿಸಿ ಕಸದ ತೊಟ್ಟಿಗೆಸೆದ ಪತಿ. : ಆ ಖ್ಯಾತ ನಟಿ ಯಾರು ಗೊತ್ತಾ...?

07 Feb 2019 5:41 PM | Entertainment
7450 Report

ಸಿನಿಮಾ ನಿರ್ದೇಶಕರೊಬ್ಬರು ತನ್ನ ಹೆಂಡತಿಯನ್ನು ಬರ್ನರವಾಗಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ. ಪತ್ನಿಯನ್ನು ತುಂಡು, ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಬ್ಯಾಗ್’ಗಳಲ್ಲಿ ತುಂಬಿ ಕಸದ ತೊಟ್ಟಿಗೆ ಬಿಸಾಡಿರುವ ಭಯಾನಕ ಘಟನೆ ಚೆನ್ನೈನಲ್ಲಿ ನಡೆದಿದೆ. ಅಂದಹಾಗೇ ಕೊಲೆಯಾದ ಮಹಿಳೆ ಯಾರೆಂದು ಗೊತ್ತಾದಾಗ ಪೊಲೀಸರು ಶಾಕ್ ಆದರು. ಆಕೆ ತಮಿಳಿನ ಖ್ಯಾತ ನಟಿ ಸಂಧ್ಯಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನಿರ್ದೇಶಕ ಬಾಲಕೃಷ್ಣನ್ ಎಂದು ಗುರುತಿಸಲಾಗಿದೆ. ಆರೋಪಿ ತಮಿಳು ಸಿನಿಮಾ ರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೇ  ಕೊಲೆಯಾಗಿರುವ ಸಂಧ್ಯಾ (37) ಅವರಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ಕೊಲೆ ಮಾಡಿದ್ದಾರೆ. ತಮಿಳಿನ ಕೆಲ ಸಿನಿಮಾಗಳಲ್ಲಿ ಸಂಧ್ಯಾ ನಟಿಸಿದ್ದಾರೆ.

ನಟಿಯಾಗುವ ಕನಸು ಕಂಡಿದ್ದ ಸಂಧ್ಯಾಳ ಶೀಲವನ್ನು ಶಂಕಿಸಿ ಪತಿ ಅನುಮಾನಪಡುತ್ತಿದ್ದ ಎನ್ನಲಾಗಿದೆ. ಇಬ್ಬರು ಒಂದೇ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು. ಸಂಧ್ಯಾ ಫೋನ್'ನಲ್ಲಿ ಗಂಟೆ ಗಟ್ಟಲೇ ಮಾತನಾಡುತ್ತಿದ್ದಳು, ಮನೆಗೆ ತಡವಾಗಿ ಬರುತ್ತಿದ್ದಳು.  ಅನುಮಾನದಿಂದಲೇ ನಾನೇ ಅವಳನ್ನು ಕೊಲೆ ಮಾಡಿದ್ದೀನಿ ಎಂದು ಆರೋಪಿ ತಪ್ಪೊಂಪ್ಪಿಕೊಂಡಿದ್ದಾರೆ.ಈ ಘಟನೆ ಕಳೆದ ಜನವರಿ 19ರಂದೇ ನಡೆದಿದೆ ಎನ್ನಲಾಗುತ್ತಿದ್ದು, ಈ ಕುರಿತು ಪೊಲೀಸರು ತನಿಖೆ ಕಾರ್ಯ ಆರಂಭ ಮಾಡಿದ್ದಾರೆ. 51 ವರ್ಷದ ವಯಸ್ಸಿನ  ಚಿತ್ರ ನಿರ್ಮಾಪಕ ಬಾಲಕೃಷ್ಣನ್ ತನ್ನ ಹೆಂಡತಿಯನ್ನು ಕೊಂದು ಕಸದ ಬುಟ್ಟಿಗೆ ಎಸೆದು ಹೋಗಿದ್ದಾರೆ. ಅಲ್ಲಿದ್ದ ನಾಪತ್ತೆಯಾದ ಬಾಲಕೃಷ್ಣ ತಲೆ ಮರೆಸಿಕೊಂಡಿದ್ದಾರೆ. ಚೆನ್ನೈ'ನಲ್ಲಿ ಕೊಲೆಯಾದ ಸಂಧ್ಯಾ ಕಾಲಿನಲ್ಲಿದ್ದ ಟ್ಯಾಟೂ ಮೂಲಕ ಆರೋಪಿ ಬಾಲಕೃಷ್ಣನ್ ಸಿಕ್ಕಿಹಾಕಿಕೊಂಡಿದ್ದು ತನಿಖೆ ನಡೆಸಿದ ಪೊಲೀಸರು ಕೃತ್ಯ ದೃಢಪಟ್ಟ ಬಳಿಕ ಬಾಲಕೃಷ್ಣನ್ ನನ್ನ ಬಂಧಿಸಿದ್ದಾರೆ.

Sponsored

Edited By

Kavya shree

Reported By

Kavya shree

Comments