ಐಸಿಯು ನಲ್ಲಿ ಅಡ್ಮಿಟ್ ಆದ ಖ್ಯಾತ ಗಾಯಕ ಸೋನು ನಿಗಂ…!

07 Feb 2019 3:35 PM | Entertainment
282 Report

ತಮ್ಮ  ಸುಮಧುರ ಗಾಯನದ ಮೂಲಕವ  ದೇಶದ ಸಿನಿಪ್ರಿಯರ ಮನಸ್ಸು ಗೆದ್ದಿರುವವರು ಸೋನು ನಿಗಮ್. ಕೇವಲ ಹಿಂದಿ  ಚಿತ್ರರಂಗ ಮಾತ್ರವಲ್ಲದೇ  ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಗಾಯನ ಮಾಡಿರುವ  ಖ್ಯಾತಿ ಅವರದ್ದು. ಇಂಥಾ ಸೋನು ನಿಗಮ್ ಇದೀಗ ಖಾಯಿಲೆಯೊಂದಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿಯೇ  ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟಕ್ಕೂ ಸೋನು ನಿಗಮ್ ಅವರಿಗೆ ಅಂಥದ್ದೇನಾಯ್ತು ಅಂತೀರಾ…?

ಇತ್ತೀಚೆಗೆ ಸೋನು ನಿಗಮ್ ಸಮುದ್ರ ಆಹಾರ ತಿಂದಿದ್ದರಂತೆ. ಆ ನಂತರ ಸೋನು ನಿಗಂ ಕಣ್ಣಿಗೆ ಒಂದು ರೀತಿಯ ವಿಚಿತ್ರ ಅಲರ್ಜಿ ಆಗಿತ್ತಂತೆ. ಆದರೆ ಈ ಅಲರ್ಜಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಸೋನು ಅದನ್ನ ನಿರ್ಲಕ್ಷಿಸಿದ್ದಾರೆ. ಇದೀಗ ಈ ಅಲರ್ಜಿಯೇ  ಮಾರಕವಾಗಿ ಉಲ್ಬಣಿಸಿದ್ದು ಸೋನು ಕಣ್ಣು ಫುಲ್ ಊದಿದ್ದು ಕಣ್ಣಿಗೆ ಕಂಟಕಕಕಾರಿಯಾಗಿ ಪರಿಣಮಿಸಿದೆ. ಬಳಿಕ   ಎಚ್ಚೆತ್ತುಕೊಂಡ  ಸೋನು ಆಸ್ಪತ್ರೆಗೆ  ದಾಖಲಾಗಿದ್ದಾರೆ. ಸದ್ಯ ಸೋನು ನಿಗಂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನು ಈ ಬಗ್ಗೆ ಸ್ವತಃ ಸೋನು ನಿಗಮ್ ಅವರೇ ತಮ್ಮ ಸಾಮಾಜಿಕ ಜಾಲತಾಣದ  ಖಾತೆಯಲ್ಲಿ ತಿಳಿಸಿದ್ದು ಸಣ್ಣ ಅಲರ್ಜಿಯನ್ನು ನಿರ್ಲಕ್ಷ್ಸ’ಬೇಡಿ ಅಂತಾ ಗಾಯಕ ಸೋನು ನಿಗಂ ತಮ್ಮ  ಊದಿರುವ ಕಣ್ಣಿನ ಫೋಟೋವನ್ನ ಶೇರ್ ಮಾಡಿದ್ದಾರೆ. ಯಾವತ್ತೂ ಕೂಡ ಸಣ್ಣ ಅಲರ್ಜಿಗಳನ್ನ ನಿರ್ಲಕ್ಷಿಸಬೇಡಿ. ಒಂದು ವೇಳೆ ನಾನಾವತಿ ಆಸ್ಪತ್ರೆ ಸಮೀಪದಲ್ಲಿರುವ ಅಂದ್ರೆ, ನನ್ನ ಶ್ವಾಸಕೋಶ ಕೂಡ ಊದಿಕೊಂಡು ಆಸ್ಫಿಕ್ಸಿಯಾಷನ್’ಗೆ ತಿರುಗುತ್ತಿತ್ತು ಎಂದು ಸೋನು ನಿಗಂ ಬರೆದುಕೊಂಡಿದ್ದಾರೆ.

Edited By

Kavya shree

Reported By

Kavya shree

Comments