ನಿಮ್ಮ ಗಂಡನಿಗೆ 'ಕಾಮನ್ ಸೆನ್ಸ್' ಹೇಳಿಕೊಡಿ : ದೀಪಿಕಾಗೆ ಅಭಿಮಾನಿಗಳಿಂದ ಫುಲ್ ಕ್ಲಾಸ್…!!!

07 Feb 2019 10:44 AM | Entertainment
641 Report

ದೀಪಿಕಾ ಪಡುಕೊಣೆ ಮತ್ತು ರಣವೀರ್ ಸಿಂಗ್ ಮದುವೆಯಾದಗಿನಿಂದಲೂ ಒಂದಲ್ಲ ಒಂದಕ್ಕೆ ಸುದ್ದಿಯಾಗುತ್ತಲೆ ಇದ್ದಾರೆ. ರೊಮ್ಯಾಂಟಿಕ್ ಮೂಡ್ನಲ್ಲಿದ್ದ ಈ ಜೋಡಿಗೆ ಅಭಿಮಾನಿಗಳು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬಾರಿ ಡಿಪ್ಪಿ ಪತಿಗೆ ಅಭಿಮಾನಿಗಳು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಲ್ಲೀ ತನಕ ರೊಮ್ಯಾಂಟಿಕ್ ಸುದ್ದಿಗಳಲ್ಲಿ ಬ್ಯುಸಿ ಇರ್ತಾಯಿದ್ದ ರಣವೀರ್ ನನ್ನು ಗಲ್ಲಿ ಬಾಯ್ ಅಂತಿದ್ದಾರೆ . ಅಂತದ್ದೇನು ಮಾಡಿದ್ದಾರೆ ಗೊತ್ತಾ ರಣವೀರ್ ಸಿಂಗ್ …

ಲ್ಯಾಕ್ಮೀ ಫ್ಯಾಷನ್ ವೀಕ್ ಕಾರ್ಕ್ರಮದಲ್ಲಿ ರಣವೀರ್ ಕೂಡ ಭಾಗಿಯಾಗಿದ್ದರು. ಅಪಾರ ಅಭಿಮಾನಿಗಳು ಕೂಡ ಹಾಜರಾಗಿದ್ದರು. ವೇದಿಕೆ ಮುಂದೆ ಅಭಿಮಾನಿಗಳ ಗುಂಪುಂದು ಇತ್ತು. ರಣವೀರ್​ ಱಂಪ್​ ಮೇಲೆ ಗಲ್ಲಿ ಬಾಯ್​ ಸಿನಿಮಾದ ಅಪ್​ನಾ​ ಟೈಮ್​ ಆಯೇಗಾ ಮತ್ತು ಅಸಲಿ ಹಿಪ್​ ಹಾಪ್​ ಸಾಂಗ್​ ರ್ಯಾಪ್ ಮಾಡ್ತಾ ಅಭಿಮಾನಿಗಳ ಮೇಲೆ ಡೈವ್​ ಮಾಡಿದ್ದಾರೆ. ರಣವೀರ್​ ಅಭಿಮಾನಿಗಳ ಮೇಲೆ ಏಕಾಏಕಿ ಡೈವ್​(ಎಗರಿದ್ದಾರೆ) ಮಾಡಿದ್ದರು. ​ಈ ವೇಳೆ ಕೆಲವರಿಗೆ ಗಾಯಗಳಾಗಿವೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ಜನರು ಟ್ವಿಟರ್​ನಲ್ಲಿ ರಣವೀರ್​​​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಅಂದಹಾಗೇ ರಣವೀರ್ಗೆ ಎಲ್ಲಿ ಹೇಗೆ ಇರಬೇಕು ಅನ್ನೋ ಕಾಮನ್ ಸೆನ್ಸ್ ಕೂಡ ಇಲ್ಲವೆಂದು ಡಿಪ್ಪಿಯನ್ನು ವಿಚಾರಿಸುತ್ತಿದ್ದಾರೆ. ಮೇಲಿಂದ ಮುಂದಿನ ಸಲ ಜನರ ಗುಂಪಿನ ಮೇಲೆ ಡೈವ್​ ಮಾಡುವ ಮುನ್ನಾ ಹೇಳಿ ಮಾಡು, ಆಗ ದೀಪಿಕಾ ನಿನ್ನ ಅಪ್ಪಿಕೊಳ್ತಾಳೆ. ನಿನ್ನ ಮೂರ್ಖತನದಿಂದ ನನ್ನ ಸ್ನೇಹಿತೆಯ ಕತ್ತು ಉಳುಕಿದೆ. ಈಗ ನೀನು ವಿವಾಹಿತ. ಸ್ವಲ್ಪ ಬೆಳೆ ಎಂದು ಸಿಂಗ್​ಗೆ ಟ್ವಿಟರ್​ನಲ್ಲಿ ಬೈದಿದ್ದಾರೆ. ಇನ್ನೊಬ್ಬರು ಈ ವ್ಯಕ್ತಿಗೆ ನಾಗರಿಕ ಪ್ರಜ್ಞೆಯಿಲ್ಲ. ಸಾರ್ವಜನಿಕ ವ್ಯಕ್ತಿತ್ವ ಹೊಂದಿರುವವರು ಹೀಗೆ ಕೇರ್​ ಲೇಸ್​ ಆಗಬಾರದು ಎಂದು ಟ್ವೀಟ್​ ಮಾಡಿದ್ದಾರೆ.

 

Edited By

Kavya shree

Reported By

Kavya shree

Comments